ಉತ್ತಮ ಗುಣಮಟ್ಟದ ಮತ್ತು ಆರೋಗ್ಯಕೇಂದ್ರಿತ ಉತ್ಪನ್ನಗಳನ್ನು ತಯಾರಿಸುವಲ್ಲಿ ಭಾರತ ಸದಾ ಮುಂಚೂಣಿಯಲ್ಲಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲದ ಮತ್ತು ಆರೋಗ್ಯವೇ ಮುಖ್ಯವೆನ್ನುವ ಹರ್ಬಲ್ ಉತ್ಪನ್ನಗಳು ಪ್ರಪಂಚದಾದ್ಯಂತ ಮೆಚ್ಚುಗೆಯನ್ನು ಗಳಿಸಿವೆ. ಇವುಗಳನ್ನು ಜನರಿಗೆ ತಲುಪಿಸುವ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವುದು ಶಂಕರ ತನಯ ಎಂಟರ್ಪ್ರೈಸಸ್ . ಶ್ರೀ ಸುಹಾಸ್ ಮತ್ತು ಶ್ರೀಮತಿ ಭಾಗ್ಯಲಕ್ಷ್ಮಿ ಟಿ ಎನ್ ರವರ ಯಶೋಗಾಥೆಯನ್ನು ಈ ಸಂಚಿಕೆಯಲ್ಲಿ ನೋಡೋಣ.
By Harish Athreya
ನಿಮ್ಮ ಹಿನ್ನೆಲೆ ಮತ್ತು ನೀವು ಗಿಡಮೂಲಿಕೆ ಉತ್ಪನ್ನಗಳ ಉದ್ಯಮದಲ್ಲಿ ಹೇಗೆ ಪ್ರಾರಂಭಿಸಿದ್ದೀರಿ ಎಂಬುದರ ಕುರಿತು ನಮಗೆ ಸ್ವಲ್ಪ ಹೇಳಬಲ್ಲಿರಾ?
ನಾನು ಬಿ.ಎ ಪದವಿ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮಾ ವಿದ್ಯಾರ್ಹತೆಯನ್ನು ಗಳಿಸಿ Aeronautical Development Agency ಇಲ್ಲಿ ಸಹಾಯಕ ಗ್ರಂಥಪಾಲಕಿಯಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಗ್ರಂಥಾಲಯ ವಿಜ್ಞಾನದ ಸ್ನಾತಕೋತ್ತರ ಪದವಿಯನ್ನು ಫಡೆದುಕೊಂಡೆ. ಸತತ 31 ವರ್ಷಗಳ ಸೇವೆಯ ನಂತರ 2019ರ ಮೇ ಮಾಹೆಯಲ್ಲಿ ನಿವೃತ್ತಿ ಹೊಂದಿದೆ. ಆನಂತರ ನನ್ನ ಮಗ ಬಿ ಎಸ್ ಸುಹಾಸ್ ಜೊತೆಯಲ್ಲಿ ಆಯುರ್ ಪವರ್ ನೆಟ್ವರ್ಕ್ನ ಪ್ರಾಡಕ್ಟ್ಸ ವಿಷಯವನ್ನು ಸಂಗ್ರಹಿಸುತ್ತಾ, ಗ್ರಾಹಕರ ಬೇಡಿಕೆ ಮತ್ತು ಅಭಿಪ್ರಾಯವನ್ನು ತಿಳಿದುಕೊಳ್ಳುತ್ತಾ ನಮ್ಮದೇ ಆದ ಗಿಡಮೂಲಿಕೆ ಉತ್ಪನ್ನಗಳ ಮಳಿಗೆಯನ್ನು ಪ್ರಾರಂಬಿಸುವ ಯೋಚನೆ ಮತ್ತು ಯೋಜನೆ ಹಾಕಿಕೊಂಡೆವು.
ನೀವು ಸ್ವಂತವಾಗಿ ಗಿಡಮೂಲಿಕೆ ಉತ್ಪನ್ನಗಳ ವಿತರಣಾ ವ್ಯವಹಾರವನ್ನು ಪ್ರಾರಂಭಿಸಲು ನಿಮ್ಮನ್ನು ಪ್ರೇರೇಪಿಸಿದ ಅಂಶ ಯಾವುದು?
2. ಆಯುರ್ ಪವರ್ ಸಂಸ್ಥೆಯು ಬೊಮ್ಮು ಹರ್ಬಲ್ಸ್ ಎಂಬ ಹೆಸರಿನಲ್ಲಿ ಫ್ರಾಂಚೈಸಿ ನೀಡುವುದರ ಬಗ್ಗೆ ತಿಳಿಯಿತು. ಇದರ ಮೂಲ ಉದ್ದೇಶವೆಂದರೆ ಗ್ರಾಹಕರಿಗೆ ಮತ್ತು ಮಾರಾಟಗಾರರಿಗೆ ಕೈಗೆಟುಕುವ ದರದಲ್ಲಿ ಉತ್ತಮಗುಣಮಟ್ಟದ ಪದಾರ್ಥಗಳನ್ನು ತಲುಪಿಸುವುದು. ಇದರಿಂದ ಪ್ರೇರಿತಗೊಂಡ ನಾವು ಡಿಸೆಂಬರ್ 2019 ರಲ್ಲಿ ಮಳಿಗೆಯನ್ನು ಪ್ರಾರಂಬಿಸಿದೆವು.
ನಿಮ್ಮ ವ್ಯಾಪಾರವನ್ನು ಪ್ರಾರಂಭಿಸುವಾಗ ನೀವು ಎದುರಿಸಿದ ಕೆಲವು ಪ್ರಮುಖ ಸವಾಲುಗಳು ಯಾವುವು ಮತ್ತು ನೀವು ಅವುಗಳನ್ನು ಹೇಗೆ ಜಯಿಸಿದಿರಿ?
3. ಮಳಿಗೆಯನ್ನೇನೋ ತೆರೆಯಬೇಕೆಂಬ ದೃಢ ಸಂಕಲ್ಪವಾಯಿತು. ಆದರೆ ಯಾವ ಸ್ಥಳದಲ್ಲಿ, ನಮಗೆ ಸರಿಹೊಂದುವ ದರದಲ್ಲಿ ಬಾಡಿಗೆಗೆ ಮಳಿಗೆ ಸಿಗಬೇಕಲ್ಲವೇ. ಇದೇ ಮೊಟ್ಟ ವೊದಲನೆಯ ಸವಾಲು. ಹೊಸ ಕಂಪನಿಯ ಹೊಸ ಉತ್ಪನ್ನಗಳು ಸಾಲದ್ದಕ್ಕೆ ನಮಗೆ ಅಪರಿಚಿತವಾದ ಜಾಗ. ಗ್ರಾಹಕರು ಹೇಗೆ ಸ್ವೀಕರಿಸುತ್ತಾರೋ ಎಂಬ ಮತ್ತೊಂದು ಸವಾಲು.
ನಾವು ಈಗಾಗಲೇ ದೃಢನಿಶ್ಚಯ ಮಾಡಿದ್ದು, ಸಾಕಷ್ಟು ಗ್ರಾಹಕರನ್ನು ಗಳಿಸಿದ್ದ ನಾವು ಮಳಿಗೆಯನ್ನು ಪ್ರಾರಂಬಿಸಿಯೇ ಬಿಟ್ಟೆವು. ಇದಕ್ಕೆ ನಮ್ಮ ಕುಟುಂಬವರ್ಗದವರ ಹಾಗೂ ಸ್ನೇಹಿತರ ಬೆಂಬಲವೂ ಸಹ ದೊರೆಯಿತು.
ನಿಮ್ಮ ಉತ್ಪನ್ನಗಳಿಗೆ ಗಿಡಮೂಲಿಕೆಗಳು ಮತ್ತು ಪದಾರ್ಥಗಳನ್ನು ನೀವು ಹೇಗೆ ಪಡೆಯುತ್ತೀರಿ?
4. Customer’s satisfaction is our motto ನಾವು ಉತ್ಪನ್ನಗಳನ್ನು ಪಡೆಯುವಾಗ ಮೊದಲು ದಿನಬಳಕೆ ವಸ್ತ್ರಗಳನ್ನೂ, ಅಡ್ಡಪರಿಣಾಮವಿಲ್ಲದೆ ಇರುವುದು, ಅದರ ಗುಣಮಟ್ಟ, ದರ ಹಾಗೂ ಅದರ ಉಪಯೋಗ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕ ಹಾಗೂ ನಂಬಿಕಸ್ಥ ವಿತರಕರಿಂಧ ಪಡೆಯುತ್ತೇವೆ. ಕೆಲವೊಮ್ಮೆ ಗ್ರಾಹಕರ ಬೇಡಿಕೆಯನ್ನು ಆದರಿಸಿ ಕೆಲವು ಅವಶ್ಯಕವಾದ ಪದಾರ್ಥಗಳು ಸೇರ್ಪಡೆಯಾಗುತ್ತದೆ. ಈ ನಿಟ್ಟಿನಲ್ಲಿ ನಮಗೆ Alpha Herbals ಕಂಪನಿಯ ಪರಿಚಯವಾಯಿತು. ಅದರ ಮೂಲಕ ಉತ್ತಮ ಗುಣಮಟ್ಟದ ಗಿಡಮೂಲಿಕೆಗಳು ಮತ್ತು ಪದಾರ್ಧಗಳನ್ನು ಪಡೆಯುತ್ತೇವೆ
ನಿಮ್ಮ ಉತ್ಪನ್ನಗಳು ಮಾರುಕಟ್ಟೆಯಲ್ಲಿರುವ ಇತರರಿಂದ ಹೇಗೆ ಭಿನ್ನವಾಗಿವೆ?
5. ಉತ್ತಮ ಗುಣಮಟ್ಟ ಕೈಗೆಟುಕುವ ದರ, ಉತ್ತಮ ಫಲಿತಾಂಶ, ಸದಾಕಾಲ ದೊರೆಯುವುದು, ಉತ್ತಮ ಪ್ಯಾಕಿಂಗ್ ಅದರಲ್ಲಿನ ಮಾಹಿತಿ ಇವೆಲ್ಲವೂ ಆಕರ್ಷಕವಾಗಿದೆ.
ನಿಮ್ಮ ವ್ಯಾಪಾರವನ್ನು ನಡೆಸುವ ಜೀವನದಲ್ಲಿ ಒಂದು ವಿಶಿಷ್ಟವಾದ ದಿನವನ್ನು ನೀವು ವಿವರಿಸಬಹುದೇ?
6. ಗೀತಾಜಯಂತಿಯಂದು ನ್ಯಾಷನಲ್ ಕಾಲೇಜಿನಲ್ಲಿ ಮಳಿಗೆ, AKBMSನ ಅಬಿಜಾತೆ ಕಾರ್ಯಕ್ರಮದಲ್ಲಿ ಗಣ್ಯರನ್ನು ಬೇಟಿಯಾದದ್ದು ಅಲ್ಲಿ ನೂರಾರು ಸಹ ಉದ್ಯಮಿಗಳ ಮಿಲನ ಇವೆಲ್ಲವೂ ಮರೆಯಲಾರದ ಕ್ಷಣಗಳು.
ನಿಮ್ಮ ಉತ್ತಮ-ಮಾರಾಟದ ಕೆಲವು ಉತ್ಪನ್ನಗಳು ಯಾವುವು, ಮತ್ತು ಅವುಗಳು ಏಕೆ ಜನಪ್ರಿಯವಾಗಿವೆ ಎಂದು ನೀವು ಭಾವಿಸುತ್ತೀರಿ?
7. ನಮ್ಮಲ್ಲಿ ದೊರೆಯುವ ಆರೋಗ್ಯ ವರ್ಧನೆಗೆ ಸಂಬಂದಪಟ್ಟ ಅಶ್ವಗಂಧ, ತ್ರಿಫಲ, ನೇರಳೆ ಹಣ್ಣಿನ ಬೀಜದ ಪುಡಿ , ಬೇವು ಜೇಷ್ಠಮಧು ಕೇಶವರ್ಧಕ ತೈಲಗಳು, ದಾಸವಾಳ ಹೂವು ಮದರಂಗಿ ಎಲೆ ಕರಿಬೇವಿನ ಎಲೆ ನೆಲ್ಲಿಕಾಯಿ ಪುಡಿ ಸೌಂದರ್ಯವರ್ಧಕ ಕಿತ್ತಳೆ ಸಿಪ್ಪೆ, ನಿಂಬೆಸಿಪ್ಪೆ, ದಾಳಿಂಬೆ ಸಿಪ್ಪೆಗಳಿಂದ ಮಾಡಿದ. ಪುಡಿಗಳು, ಮುಲ್ತಾನ ಮಿಟ್ಟಿ ಬಹು ಬೇಡಿಕೆಯುಳ್ಳವುವು. ಕಾರಣ ಉತ್ತಮ ಫಲಿತಾಂಶ, ಕಡಿಮೆ ಬೆಲೆ, ಯಾವಾಗಲೂ ಲಭ್ಯ, ಅಡ್ಡ ಪರಿಣಾಮವಿಲ್ಲದಿರುವುದು, ಗುಣಮಟ್ಟ, ಬಹಳ ಹಿಂದಿನಿಂದಲೂ ಬಳಕೆಯಲ್ಲಿರುವ ಪದಾರ್ಥಗಳು. ಇತ್ತೀಚೆಗೆ ಆಯುರ್ವೇದದ ಬಗ್ಗೆ ಜನರಿಗಿರುವ ಅರಿವು ಮತ್ತು ಒಲವು.
ನಿಮ್ಮ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ನೀವು ಹೇಗೆ ಖಚಿತಪಡಿಸಿಕೊಳ್ಳುತ್ತೀರಿ?
8 ಉತ್ತಮಗುಣಮಟ್ಟದಲ್ಲಿ ಪದಾರ್ಥಗಳನ್ನು ತಯಾರಿಸುವ ಉತ್ಪಾದಕರು ಮತ್ತು ವಿತರಕರೊಂದಿಗೆ ನೇರ ವ್ಯವಹಾರ ಸಂಪರ್ಕ. ಗ್ರಾಹಕರ ಪ್ರಾಮಾಣಿಕ ಅಭಿಪ್ರಾಯ.
ನಿಮ್ಮ ವ್ಯವಹಾರ ಮಾದರಿಯಲ್ಲಿ ಸಮರ್ಥನೀಯತೆ ಮತ್ತು ನೈತಿಕ ಸೋರ್ಸಿಂಗ್ ಯಾವ ಪಾತ್ರವನ್ನು ವಹಿಸುತ್ತದೆ?
9. ನಾವು ಮಾರಾಟ ಮಾಡುವ ಪದಾರ್ಥಗಳ ಬಗ್ಗೆ ಸಮರ್ಪಕವಾದ ಸಮಗ್ರ ಮಾಹಿತಿ ಇರಬೇಕು. ವ್ಯಾಪಾರ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಬೇಕು. ಗ್ರಾಹಕರ ನಂಬಿಕೆಯೇ ನಮ್ಮ ವ್ಯಾಪಾರದ ಬಂಡವಾಳ. ನಮ್ಮ ಲಾಭಕ್ಕಾಗಿ ಗ್ರಾಹಕರಿಗೆ ತೊಂದರೆಯಾಗಬಾರದು.
ಹರ್ಬಲ್ ಉತ್ಪನ್ನಗಳ ಉದ್ಯಮದಲ್ಲಿನ ಪ್ರವೃತ್ತಿಗಳು ಮತ್ತು ಬೆಳವಣಿಗೆಗಳೊಂದಿಗೆ ನೀವು ಹೇಗೆ ಪ್ರಸ್ತುತವಾಗಿರುತ್ತೀರಿ?
10. ಹರ್ಬಲ್ಸ್ ಪ್ರಾಡಕ್ಟ್ಸ್ ಗಳಿಗೆ ಸಂಬಂಧಪಟ್ಟಂತೆ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆಯಾಗದೆಯಾ ಎಂದು ಅಂತರ್ಜಾಲದಲ್ಲಿ, ಸಾಮಾಜಿಕತಾಣಗಳಿಂದ ಮಾಹಿತಿ ಪಡೆಯುವುದು. ಉತ್ಪಾದಕರು ಹಾಗೂ ವಿತರಕರಿಂದ ಮಾಹಿತಿ ಪಡೆಯುವುದು. ವಸ್ತು ಪ್ರದರ್ಶನ, ಮಳಿಗೆಗಳ ಪ್ರದರ್ಶನದಲ್ಲಿ ಪಾಲ್ಗೊಂಡು ಇತರ ಉದ್ಯಮಿಗಳ ಮಳಿಗೆಗೆ ಬೇಟಿ ನೀಡಿ ಮಾಹಿತಿ ಪಡೆದು ಅವಶ್ಯಕವಾದ ಪದಾರ್ಥಗಳಿಗೆ ಸಂಪರ್ಕಿಸುತ್ತೇವೆ.
ಇದುವರೆಗಿನ ನಿಮ್ಮ ವಾಣಿಜ್ಯೋದ್ಯಮ ಪ್ರಯಾಣದ ಅತ್ಯಂತ ಲಾಭದಾಯಕ ಭಾಗ ಯಾವುದು?
11. ಅತಿ ಲಾಭದಾಯಕ ಮತ್ತು ಬೇಡಿಕೆಯುಳ್ಳದ್ದು ಹರ್ಬಲ್ ಪುಡಿಗಳು. ಏಕೆಂದರೆ ಇದರಿಂದ ಮನೆಯಲ್ಲೇ ಸಾಬೂನು, ಕೇಶವರ್ಧಕ ತೈಲ, ಶ್ಯಾಂಪೂ, ಸೌಂದರ್ಯವರ್ಧಕ ಕ್ರೀಂ, ಅನೇಕ ವಿಧದ ಕಷಾಯಗಳನ್ನು ತಯಾರಿಸಬಹುದು.
ನಿಮ್ಮ ವ್ಯಾಪಾರದ ಪ್ರಯಾಣದಿಂದ ನೀವು ಯಶಸ್ಸಿನ ಕಥೆ ಅಥವಾ ವಿಶೇಷವಾಗಿ ಸ್ಮರಣೀಯ ಕ್ಷಣವನ್ನು ಹಂಚಿಕೊಳ್ಳಬಹುದೇ?
12. ಹೌದು. ಇದನ್ನು ನಾನು ಖಂಡಿತಾ ಹೇಳಲೇಬೇಕು. DEN ವತಿಯಿಂದ ಆಚರಿಸಿದ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ . “ಅತ್ಯುತ್ತಮ ಮಹಿಳಾ ದ್ವಿಜೋದ್ಯಮಿ 2023-2024” ಎಂದು ಗುರುತಿಸಿ ಗೌರವಿಸಿ ಸನ್ಮಾನಿಸಿದ ಸಂದರ್ಭ. ಇದು ನನ್ನ ವ್ಯಾಪಾರ ಜೀವನದ ಅವಿಸ್ಮರಣೀಯ ಅನಿರೀಕ್ಷಿತ ಅತ್ಯದ್ಭುತವಾದ ದಿನ.
ನೀವು ಮಾರ್ಕೆಟಿಂಗ್ ಅನ್ನು ಹೇಗೆ ಸಂಪರ್ಕಿಸುತ್ತೀರಿ ಮತ್ತು ನಿಮ್ಮ ಗುರಿ ಪ್ರೇಕ್ಷಕರನ್ನು ತಲುಪುತ್ತೀರಿ?
13. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಮಾಹಿತಿ, ವಾಟ್ಸಪ್ ಗುಂಪು, Flea Marketing ಜಾಹೀರಾತು, ಸ್ನೇಹಿತರ ಗುಂಪಿನಿಂದ ಮಳಿಗೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಮಾರಾಟ ಮಾಡುವ ಬಗ್ಗೆ ಯೂ ಸಹ ವಾಟ್ಸಪ್ ಗುಂಪಿನ Status , ಹಲವು ಫೇಸ್ಬುಕ್ ಗುಂಪುಗಳಲ್ಲಿ ನಮ್ಮಲ್ಲಿ ದೊರೆಯುವ ಪದಾರ್ಥಗಳನ್ನು ಪಟ್ಟಿ ಪ್ರಕಟಿಸುತ್ತೇವೆ. Monthly meeting ನಲ್ಲಿ ಪಾಲ್ಗೊಂಡು ನಮ್ಮ ಉತ್ಪನ್ನಗಳ ವಿಷಯವನ್ನು ಹಂಚಿಕೊಳ್ಳುತ್ತೇವೆ.
ಹರ್ಬಲ್ ಉತ್ಪನ್ನಗಳ ಉದ್ಯಮದಲ್ಲಿ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ನೀವು ಯಾವ ಸಲಹೆಯನ್ನು ನೀಡುತ್ತೀರಿ?
14. ಗ್ರಾಹಕರೊಂದಿಗೆ ಪ್ರಾಮಾಣಿಕವಾಗಿರಿ. ಅವರ ಬೇಡಿಕೆಯನ್ನು ಸಕಾಲಕ್ಕೆ ಪೂರೈಸಿ. ಯಾರಿಗಾದರೂ ನಮ್ಮಲ್ಲಿ ದೊರೆಯುವ ಪದಾರ್ಥಗಳನ್ನು ಮರು ಮಾರಾಟ ಮಾಡಲು ಇಚ್ಛಿಸುವವರು ದಯವಿಟ್ಟು 9535026265/9980563113 ಈ ಸಂಖ್ಯೆಗಳನ್ನು ಸಂಪರ್ಕಿಸಿ.
ನಿಮ್ಮ ವ್ಯಾಪಾರಕ್ಕಾಗಿ ನಿಮ್ಮ ಭವಿಷ್ಯದ ಯೋಜನೆಗಳು ಮತ್ತು ಗುರಿಗಳು ಯಾವುವು?
15.ಆದುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ನಮ್ಮ ವ್ಯಾಪಾರ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವುದು. ನಮ್ಮ ಈ ಗಿಡಮೂಲಿಕೆಯ ಉತ್ಪನ್ನಗಳು ಎಲ್ಲೆಡೆಯೂ ಸುಲಭವಾಗಿ ಮತ್ತು ಸಕಾಲದಲ್ಲಿ ದೊರೆಯುವಂತೆ ಮಾಡುವುದು. ದೇಶವಿದೇಶದಲ್ಲೂ ಸಹ ವ್ಯವಹರಿಸುವಂತಾಗಬೇಕು.
ಸುಹಾಸ್ ಮತ್ತು ಶ್ರೀಮತಿ ಭಾಗ್ಯಲಕ್ಷ್ಮಿ ಟಿ ಎನ್ ಇಬ್ಬರಿಗೂ ನಮ್ಮ ಧನ್ಯವಾದಗಳು . ನಿಮ್ಮ ವ್ಯವಹಾರ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ನಾವೂ ಸಹ ನಿಮ್ಮ ಉದ್ಯಮಕ್ಕೆ ನಮ್ಮ ಸಹಕಾರವನ್ನು ನೀಡುತ್ತೇವೆ. ದ್ವಿಜ ತಂಡ ಸದಾ ನಿಮ್ಮ ಜೊತೆಗಿರುತ್ತದೆ. ನಮಸ್ಕಾರ
9036709599
dwijodaya@gmail.com
www.denhym.com
Welcome to Dwija entrepreneurs Network!