#STRETCH MARKS….ಹೋಗುತ್ತಾ??

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಮಾರ್ಚ್ ತಿಂಗಳ ಎಂಟನೆಯ ತಾರೀಕು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಗುರುತಿಸಲ್ಪಡುತ್ತದೆ. ಹೆಣ್ಣು ಎಂದರೆ ಸೌಂದರ್ಯ.. ಅದನ್ನು ಕಾಪಿಡಲು ಅವಳು ಹಲವಾರು ಕಸರತ್ತುಗಳನ್ನು ಮಾಡುತ್ತಾಳೆ!! ಬಹುಮುಖ್ಯವಾಗಿ, ಚರ್ಮದ ಕಾಂತಿ, ಕೂದಲಿನ ಆರೈಕೆ, ಉಗುರುಗಳ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾಳೆ. ಈಗಂತೂ ಬೀದಿಗೊಂದರಂತೆ ಬ್ಯೂಟಿ ಪಾರ್ಲರ್ಗಳಿವೆ. ಚರ್ಮ ಮತ್ತು ಕೂದಲಿನ ಆರೈಕೆಗೆ ಮಾರುಕಟ್ಟೆಯಲ್ಲಿ ವಿವಿಧ ಉತ್ಪನ್ನಗಳು ಲಭ್ಯವಿದೆ.. ಬಸಿರು, ಬಾಣಂತನಗಳು ಹೆಣ್ಣಿನ ಸೌಂದರ್ಯಕ್ಕೆ ಮಾರ್ಪಾಡುಗಳನ್ನು ತರುತ್ತವೆ.. ಆದರೆ ನಮ್ಮ ಹೆಣ್ಣುಮಕ್ಕಳ ಮುಖ್ಯವಾದ ಸಮಸ್ಯೆಯೆಂದರೆ, ಗರ್ಭಧರಿಸಿದ ನಂತರ ಹೊಟ್ಟೆಯ ಮೇಲೆ ಬರುವ ಗೀರುಗಳು!! STERTCH MARKS…!! ಈ ತಿಂಗಳು ಮಹಿಳಾ ದಿನಾಚರಣೆಯನ್ನು ಆಚರಿಸುತ್ತೇವೆ. ಹಾಗಾಗಿ ಅವಳ ಸೌಂದರ್ಯವನ್ನು ‘ಮೆರೆಸುವ’ STRETCH MARKS ಮತ್ತು ಇತರ ಚರ್ಮ ಸಂಬಂಧೀ ಸಮಸ್ಯೆಗಳ ಬಗ್ಗೆ ಈ ತಿಂಗಳ ಲೇಖನ ಮೀಸಲು..

ಮೊದಲಿಗೆ, ಗರ್ಭಧರಿಸಿದಾಗ ಮಹಿಳೆಯಲ್ಲಿ ಸಹಜವಾಗಿಯೇ ಆಗುವ ಮಾರ್ಪಾಡುಗಳನ್ನು ತಿಳಿಯೋಣ. ಗರ್ಭನಿಂತ ಮೇಲೆ, ಹೆಣ್ಣಿನ ದೇಹದಲ್ಲಿ ಪ್ರಕೃತಿ ಸಹಜವಾಗಿ ಎಲ್ಲಾ ಅಂಗಾಗಗಳಲ್ಲಿಯೂ ಬದಲಾವಣೆಯಾಗುತ್ತದೆ. ನಮ್ಮ ದೇಹದ ಅತಿ ದೊಡ್ಡ ಅಂಗವಾದ ಚರ್ಮವೂ ಇದಕ್ಕೆ ಹೊರತಲ್ಲ. ಭ್ರೂಣವು ಬೆಳೆದಂತೆ, ಹೊಟ್ಟೆಯ ಮೇಲಿನ ಚರ್ಮವೂ ಹಿಗ್ಗುತ್ತದೆ. ಕೊಲ್ಯಾಜಿನ್ ಎಂಬ ಅಂಶದ ಬದಲಾವಣೆಯಿಂದ ಹೊಟ್ಟೆಯ ಮೇಲೆ ಗೀರುಗಳು ಕಾಣಲಾರಂಭಿಸುತ್ತದೆ. ಇವು ಕೆಂಪು, ನೇರಳೆ ಅಥವಾ ಕಪ್ಪು ಬಣ್ಣವಿರಬಹುದು. ಹೊಟ್ಟೆಯ ಮಧ್ಯಭಾಗದಲ್ಲಿ ಒಂದು ಕಪ್ಪು ಅಥವಾ ಗಾಢ ಕಂದು ಬಣ್ಣದ ರೇಖೆಯು ಮೂಡುತ್ತದೆ. ಇದನ್ನು LINEA NIGRA ಎಂದು ಕರೆಯುತ್ತೇವೆ. STRETCH MARKSಗಳನ್ನು ವೈದ್ಯಕೀಯ ಭಾಷೆಯಲ್ಲಿ STRIAE GRAVIDARUM ಎಂದು ವರ್ಣಿಸಲಾಗುತ್ತದೆ. ಇಸ್ಟ್ರೊಜೆನ್ ಮತ್ತು ಪ್ರೊಜೆಸ್ಟಿರಾನ್ ರಸದೂತಗಳ ಪ್ರಭಾವದಿಂದ ಇವೆಲ್ಲ ಬದಲಾವಣೆಗಳು ಕಂಡು ಬರುತ್ತವೆ. ಈ STRETCH MARKS ಕೇವಲ ಹೊಟ್ಟೆಯ ಮೇಲಷ್ಟೇ ಅಲ್ಲ. ಸ್ತನಗಳ ಮೇಲೆ, ಪೃಷ್ಟದ ಮೇಲೆ, ತೊಡೆಗಳ ಮೇಲೆ ಹಾಗು ಭುಜಗಳ ಮೇಲೂ ಆಗಬಹುದು. ಮತ್ತೊಂದು ಸ್ವಾರಸ್ಯಕರ ಸಂಗತಿ ಏನೆಂದರೆ, ಈ STRETCH MARKS ಸ್ಥೂಲಕಾಯದ ಪುರುಷರಲ್ಲೂ ಬರಬಹುದು!! ಕೊಲ್ಯಾಜಿನ್ ಕೊರತೆ, ಚರ್ಮವು ಶೀಘ್ರವಾಗಿ ಹಿಗ್ಗುವುದು, ಕುಗ್ಗುವುದು, ದೇಹದ ತೂಕದಲ್ಲಾಗುವ ಮಾರ್ಪಾಡುಗಳಿಂದ ಈ ಗೀರುಗಳು ಬರುತ್ತವೆ. ಕೆಲವು ಮಹಿಳೆಯರಿಗೆ ಮುಖದ ಮೇಲೆ ವಿಶೇಷವಾಗಿ ಕೆನ್ನೆಗಳು ಹಾಗು ಹಣೆಯ ಮೇಲೆ ಕಂದು ಬಣ್ಣದ ಪದರವು ಕಾಣುತ್ತದೆ. ಆಡುಭಾಷೆಯಲ್ಲಿ ‘ಬಂಗು’ ಎಂದು ಕರೆಯುತ್ತಾರೆ. ಇದಕ್ಕೆ MELASMA ಎಂದು ಕರೆಯುತ್ತೇವೆ. MELANOCYTES ಹೆಚ್ಚಾಗಿ ಈ ರೀತಿ ಆಗಬಹುದು. ಇವೆಲ್ಲದರ ಜೊತೆ, ಕತ್ತಿನ ಹಿಂಭಾಗ, ಕಂಕುಳ ಸೊಂದಿ, ತೊಡೆಗಳ ಮಧ್ಯೆ ಚರ್ಮವು ಕಪ್ಪು, ಕಂದು ಬಣ್ಣಕ್ಕೆ ತಿರುಗಬಹುದು. ಹಾಗೆಯೇ ಈ ಭಾಗಗಳಲ್ಲಿ, ಚರ್ಮವು ಉರುಟಿಕೊಂಡು ಸಣ್ಣ ಸಣ್ಣ ಗುಳ್ಳೆ ಅಥವಾ ಮುದ್ದೆಯಂತೆ ಆಗಬಹುದು. ಇವು SKIN TAGS. ಈ ಮೇಲೆ ತಿಳಿಸಿದ ಎಲ್ಲ ಮಾರ್ಪಾಡುಗಳು ಸ್ಥೂಲಕಾಯವಿರುವ ಮಹಿಳೆಯರಲ್ಲೂ ಕಂಡು ಬರಬಹುದು. ಇನ್ನೂ ಕೆಲವು ಮಹಿಳೆಯರಲ್ಲಿ, ಮೊಡವೆಗಳು ಬರಬಹುದು. ಇದೂ ರಸದೂತಗಳ ಪ್ರಭಾವವೇ. ಹರೆಯವು ಕಾಲಿಟ್ಟಾಗ ಹೇಗೆ ದೇಹವು ರಸದೂತಗಳಿಗೆ ಸ್ಪಂದಿಸುವುದೋ, ಅದೇ ರೀತಿ ಗರ್ಭ ಧರಿಸಿದಾಗಲೂ ಆಗಬಹುದು. ಹೆಣ್ಣು ಮೊದಲ ಬಾರಿ ಗರ್ಭಧರಿಸಿದಾಗ, ಸ್ತನಗಳ ಗಾತ್ರವು ಹಿಗ್ಗುವುದರ ಜೊತೆ, ಮೊಲೆತೊಟ್ಟುಗಳ ಬಣ್ಣವೂ ಗಾಢವಾಗಿ, ಅವುಗಳ ಸುತ್ತವಿರುವ ಕಪ್ಪುವರ್ತುಲವೂ ಹಿರಿದಾಗುತ್ತದೆ. ಈ ಬದಲಾವಣೆಯು ಹೆಣ್ಣು ಈ ಹಿಂದೆ ಗರ್ಭ ಧರಿಸಿದ್ದಳು ಎನ್ನುವುದರ ಸೂಚಕವಾಗಿರುತ್ತದೆ.

ಇವೆಲ್ಲವೂ ಸಹಜವಾಗಿಯೇ ಆಗುವ ಬದಲಾವಣೆಗಳು. ಪ್ರಸವದ ನಂತರ ಭಾಗಶಃ ದೇಹವು ತನ್ನ ಮೊದಲಿನ ಸ್ಥಿತಿಯನ್ನು ತಲುಪುತ್ತದೆ. ಆದರೆ, ಹೆಣ್ಣು ತಾಯಿಯಾಗಿದ್ದಾಳೆ ಎಂದು ನೆನಪಿಸಲು ಈ STRETCH MARKS ಉಳಿದೇ ಬಿಡುತ್ತದೆ. ಇದೊಂದು ರೀತಿ ಸೈನಿಕನ ದೇಹದ ಮೇಲಿನ ಗಾಯದ ಕುರುಹಿನಂತೆ.. ಅದು ಸೈನಿಕನ ಶೌರ್ಯದ ಸಂಕೇತವಾದರೆ, ಇದು ಹೆಣ್ಣಿನ ಫ್ರೌಢತೆಯ ಗುರುತು ಎಂದು ನಾನು ಹೇಳಲಿಚ್ಛಿಸುತ್ತೇನೆ. ಅಲ್ಲದೆ ಗರ್ಭಿಣಿಯರಲ್ಲಿ ಕೂದಲು ಸೊಂಪಾಗಿ ಬೆಳೆಯುತ್ತದೆ. ಉಗುರುಗಳೂ ಸಹ ಕಾಂತಿಯುಕ್ತವಾಗಿ, ಶೀಘ್ರವಾಗಿ ಬೆಳೆಯುತ್ತದೆ. ಇದು ಇಸ್ಟ್ರೊಜೆನ್ ಪ್ರಭಾವ.

ಈಗ, ಯಾವ ಯಾವ ಚರ್ಮದ ಲಕ್ಷಣಗಳು ಅನಾರೋಗ್ಯಕರ ಅಥವಾ ಮಹಿಳೆಯು ಜಾಗೃತಳಾಗಿರಬೇಕಾದ ವಿಷಯ ಎಂದು ತಿಳಿಯೋಣ. ಮಹಿಳೆಯ ಉಗುರುಗಳು ಬಿಳುಚಿಕೊಂಡು ಅಥವಾ ಚಪ್ಪಟೆಯಾಗಿದ್ದರೆ (PLATYNYCHIA), ಅದು ರಕ್ತಹೀನತೆಯ ಲಕ್ಷಣವಾಗಿರಬಹುದು. ಕಣ್ಣುಗಳು ಹಳದಿ ವರ್ಣಕ್ಕೆ ತಿರುಗಿದರೆ, ಕಾಮಾಲೆಯ ಲಕ್ಷಣವಾಗಿರಬಹುದು. ಗರ್ಭಿಣಿಯೂ ಕಾಮಾಲೆಗೆ ತುತ್ತಾಗಬಹುದು. ಈ ಕುರಿತು ಮುಂದಿನ ಸಂಚಿಕೆಗಳಲ್ಲಿ ತಿಳಿಯೋಣ. ಇದಲ್ಲದೆ ಬಹಳಷ್ಟು ಮಹಿಳೆಯರ ನಿದ್ದೆ ಕೆಡಿಸುವ ತೊಂದರೆಯೆಂದರೆ, ನವೆ ಅಥವಾ ಕೆರೆತ. ಚರ್ಮದ ಹಿಗ್ಗುವಿಕೆಯಿಂದ ಅಥವಾ ಒಣಚರ್ಮದಿಂದಲೂ ಈ ಕೆರೆತವು ಬರಬಹುದು. ಕೆಲವೊಮ್ಮೆ ಅಸಾಧ್ಯ ತುರಿಕೆಯ ಜೊತೆ, ಸಣ್ಣ ಸಣ್ಣ ಗುಳ್ಳೆಗಳೇಳಬಹುದು. PUPPP (pruritic urtricarial plaques amd papules of pregnancy) ಎಂಬ ಸಮಸ್ಯೆ ಬರಬಹುದು.

ಎಂಟು, ಒಂಭತ್ತನೆಯ ತಿಂಗಳುಗಳಲ್ಲಿ ಕೆಲವು ಗರ್ಭಿಣಿ ಮಹಿಳೆಯರಿಗೆ ಅಂಗೈ, ಅಂಗಾಲುಗಳಲ್ಲಿ ಅಸಾಧ್ಯ ತುರಿಕೆ ಕಂಡುಬಂದರೆ, ಅದು ಅಸಹಜವೆಂದು ತಿಳಿಯಬೇಕು. ತಜ್ಞರ ಬಳಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಇದು ITTRAHEPATIC CHOLESTASIS OF PREGNANCY(ICP) ಅಥವಾ OBSTETRIC CHOLESTASIS OF PREGNANCY ಎಂಬ ಯಕೃತ್ತಿನ ತೊಂದರೆಯ ಲಕ್ಷಣವಾಗಿರಬಹುದು. ಇದು ಗರ್ಭಿಣಿಯರಲ್ಲಿ ಕಾಣುವ ಅಪರೂಪದ ತೊಂದರೆ. ಈ ಸಮಸ್ಯೆ ಬಂದಾಗ ಕೆಲವೊಮ್ಮೆ ಕಣ್ಣುಗಳು ಹಳದಿಯಾಗುತ್ತದೆ. ಸಮಯೋಚಿತ ಚಿಕಿತ್ಸೆ ಮತ್ತು ಸಲಹೆಯು, ಇದರಿಂದುಂಟಾಗುವ ತೊಂದರೆಗಳಿಂದ ತಾಯಿ ಮತ್ತು ಮಗವನ್ನು ರಕ್ಷಿಸಬಹುದು. PEMPHIGOID GESTATINOIS, IMPETIGO HERPITIFORMIS ಎಂಬ ಅಪರೂಪದ ಚರ್ಮರೋಗಗಳೂ ಗರ್ಭಿಣಿಯರಲ್ಲಿ ಕಂಡುಬರಬಹುದು.

ಇದಕ್ಕೆಲ್ಲಾ ಪರಿಹಾರವೇನು..??

ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ STRETCH MARKS ಮುಲಾಮುಗಳಿಂದ ಉಪಯೋಗವಿಲ್ಲ.. ಇದರಿಂದ ಮೋಸ ಹೋಗದಿರಿ. ಈ ಚರ್ಮದ ಬದಲಾವಣೆಯು, ಪ್ರಸವದ ನಂತರ ಕಡಿಮೆಯಾಗುತ್ತದೆ. ಚರ್ಮದ ಗೀರುಗಳು ಬಿಳಿ ಬಣ್ಣಕ್ಕೆ ತಿರುಗುತ್ತದೆ. ವ್ಯಾಯಾಮ, ಲೇಸರ್ ಚಿಕಿತ್ಸೆಯು ಇವುಗಳನ್ನು ಬಹುತೇಕ ನಶಿಸಿ ಹೋಗುವಂತೆ ಮಾಡುತ್ತದೆ. ಆದರೆ ಈ ಲೇಸರ್ ಚಿಕಿತ್ಸೆಯು ಎಲ್ಲರಿಗೂ ಕೈಗೆಟುಕುವುದಿಲ್ಲವಷ್ಟೇ! ಮೊಡವೆಗಳು ಸೋಂಕಿಗೆ ತುತ್ತಾಗದಿರುವಂತೆ ನೋಡಿಕೊಳ್ಳಬೇಕು. ಪ್ರಸವದ ನಂತರ, ಚರ್ಮರೋಗ ವೈದ್ಯರ ಸೂಕ್ತ ಸಲಹೆ, ಮಾರ್ಗದರ್ಶನ ಪಡೆದರೆ ಇವುಗಳ ನಿವಾರಣೆ ಸಾಧ್ಯ. ಇನ್ನು PUPPP, ICP, ಮುಂತಾದ ತೊಂದರೆಗಳು ಕಂಡು ಬಂದರೆ, ವೈದ್ಯರು ಹೆಚ್ಚಿನ ರಕ್ತ ಪರೀಕ್ಷೆ, ಸ್ಯ್ಕಾನಿಂಗ್ ಮಾಡಿ, ತಾಯಿ ಮತ್ತು ಮಗುವಿನ ಆರೋಗ್ಯವನ್ನು ಗಮನದಲ್ಲಿರಿಸಿ ಚಿಕಿತ್ಸೆ ನೀಡುತ್ತಾರೆ. ತುರಿಕೆಯನ್ನು ನಿವಾರಿಸಲು ಮುಲಾಮುಗಳು, ಮಾತ್ರೆಗಳನ್ನು ಕೊಡುತ್ತಾರೆ. ಕೆಲವೊಮ್ಮೆ STEROID ಮಾತ್ರಗಳನ್ನು ಬಳಸಬೇಕಾಗುತ್ತದೆ. ಯುಕೃತ್ತಿನ ಕಾರ್ಯವೈಖರಿಯನ್ನರಿಯಲು LIVER FUNCTION TESTS ಮಾಡಿಸಬೇಕಾಗುತ್ತದೆ. ಇವೆಲ್ಲವೂ ಹೆರಿಗೆಯ ನಂತರ ನಿವಾರಣೆಯಾಗುತ್ತದೆ.

ನಮ್ಮ ಸಮಾಜವು ಈಗಲೂ ಹೆಣ್ಣು ದಂತದ ಮೈಕಾಂತಿ ಹೊಂದಿರಬೇಕು, ಮುಖವು ಕಾಂತಿಯುಕ್ತವಾಗಿ ಕಲೆಗಳಿಲ್ಲದಂತೆ ಇರಬೇಕು ಎಂದು ಅನೇಕ ಹುಸಿ ಜಾಹೀರಾತುಗಳನ್ನು ಬೆಂಬಲಿಸುತ್ತದೆ. ಆದರೆ ಹೆಣ್ಣು ತಾಯಿಯಾಗುವ ಹೊಸ್ತಿಲಲ್ಲಿರುವಾಗ, ಅವಳ ದೈಹಿಕ ಮಾರ್ಪಾಡುಗಳು ಅವಳ ಅಧೀನದಲ್ಲಿರುವುದಿಲ್ಲ. ಮಾನಸಿಕವಾಗಿ ಸೂಕ್ಷ್ಮ ಸ್ಥಿತಿಯಲ್ಲಿರುತ್ತಾಳೆ. ಅವಳಿಗೆ ಇವೆಲ್ಲ ಬದಲಾವಣೆ ಧನಾತ್ಮಕವಾದುದು ಎಂದು ಬೆಂಬಲ ನೀಡಬೇಕು. ವಯಸ್ಸಾದಂತೆ ಚರ್ವು ಹೊಳಪು ಕಳೆದುಕೊಳ್ಳುತ್ತದೆ, ಉಗುರು, ಕೂದಲೂ ಇದಕ್ಕೆ ಹೊರತಲ್ಲ. ಆದ್ದರಿಂದ ಈ ಬಾಹ್ಯ ಸೌಂದರ್ಯವನ್ನೂ ಮೀರಿ ಆಂತರಿಕ ಸೌಂದರ್ಯಕ್ಕೆ ಒತ್ತು ನೀಡಿ, ತಾಯಿಗೆ ಧೈರ್ಯ ನೀಡುವ ಕೆಲಸ ಅವಳ ಸಂಗಾತಿ, ಕುಟುಂಬದವರು ಹಾಗು ಅವಳ ಆಪ್ತರು ಮಾಡಬೇಕು. ಆರೋಗ್ಯವಂತ ತಾಯಿ ಆರೋಗ್ಯಕರ ಮಗುವಿಗೆ ಜನ್ಮ ನೀಡುತ್ತಾಳೆ. ಆರೋಗ್ಯಕರ ಸಮಾಜವು ನಿರ್ಮಾಣವಾಗುತ್ತದೆ. ಮುಂದಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

ಧನ್ಯವಾದಗಳು, ಡಾ. ಸೌಮ್ಯಾ ಹಿಮಗಿರೀಶ್.

 

9036709599

dwijodaya@gmail.com

www.denhym.com