CERVICAL CANCER, ಏಕೆ? ಪರಿಹಾರವೇನು….

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

“ಡಾಕ್ಟರ್, ನನ್ನ ಹೆಸರು….. ನನಗೀಗ ಮೂವತ್ತೆರಡು ವರ್ಷ. ಇಬ್ಬರು ಮಕ್ಕಳು. ನಾರ್ಮಲ್ ಹೆರಿಗೆ. ಮಕ್ಕಳಾಗದಿರುವ ಆಪರೇಶನ್ ಕೂಡ ಆಗಿದೆ. ನನ್ನ ಸಮಸ್ಯೆ ಏನೆಂದರೆ.. ಈಗ್ಗೆ ನಾಲ್ಕು ತಿಂಗಳುಗಳಿಂದ ಅನಿಮಿಯತ ಋತುಸ್ರಾವ ಕಾಣಿಸುತ್ತಿದೆ. ಸಂಭೋಗ ಮಾಡಿದ ಮೇಲೂ ಸ್ವಲ್ವ ಇದೇ ರೀತಿ ಆಗುತ್ತಿದೆ. ಏಕೆ ಹೀಗೆಂದು ನೋಡಿ ಚಿಕಿತ್ಸೆ ಮಾಡಿ”, ಎಂದು ಮಹಿಳೆಯೊಬ್ಬರು ನನ್ನ ಕ್ಲಿನಿಕ್ಕಿಗೆ ಬಂದರು. ಅವರನ್ನು ಪರೀಕ್ಷೆ ಮಾಡಿದಾಗ, ಗರ್ಭಕೋಶದ ಬಾಯಿಯ ಹತ್ತಿರ ಹುಣ್ಣು ಇರುವುದು ತಿಳಿಯಿತು. ಅದು ಅರ್ಬುದರೋಗವೆಂಬ ಗಾಢ ಸಂದೇಹವಿತ್ತು. ಅಂತೆಯೇ, ಆ ಹುಣ್ಣಿನ ತುದಿಯಿಂದ ಸಣ್ಣ ಪ್ರಮಾಣದ ತುಂಡೊಂದನ್ನು ಬಯಾಪ್ಸಿಗೆ ಕಳುಹಿಸಲಾಯಿತು. ಬಯಾಪ್ಸಿಯ ಫಲಿತಾಂಶ ಅದು ಗರ್ಭಗೊರಳಿನ ಅರ್ಬುದರೋಗವೆಂದು ದೃಢೀಕರಿಸಿತು. ನಂತರ ಆಕೆಗೆ ಸೂಕ್ತ ಮಾರ್ಗದರ್ಶನ, ಸಲಹೆ ಮತ್ತು ಚಿಕಿತ್ಸೆ ಮಾಡಿದೆವು.

ಫೆಬ್ರವರಿ ತಿಂಗಳ ಮೊದಲವಾರದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ವಿಷಯ, ‘CERVICAL CANCER’. ಪ್ರಸಿದ್ಧ? ರೂಪದರ್ಶಿ ಹೆಣ್ಣುಮಗಳೊಬ್ಬಳು, ಈ ಗರ್ಭಗೊರಳಿನ ಅರ್ಬುದರೋಗಕ್ಕೆ ತುತ್ತಾಗಿ ಅಸುನೀಗಿದ್ದಾಳೆ ಎಂಬ ಸುದ್ದಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಆಕೆಯ ನಡಾವಳಿ ಹಾಗಿತ್ತು, ಹಾಗೆ, ಹೀಗೆ ಎಂದು, ಈ ರೋಗದ ಬಗ್ಗೆ ತಿಳಿದವರೂ, ಅಜ್ಞರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕಜಾಲತಾಣಗಳಲ್ಲಿ ಹರಿಯಬಿಟ್ಟರು.. ಇರಲಿ.. ಈ ಲೇಖನದಲ್ಲಿ ನಾನು ಈ ಗರ್ಭಗೊರಳಿನ ಅರ್ಬುದರೋಗದ ಬಗ್ಗೆ ಸ್ಥೂಲವಾಗಿ ಪರಿಚಯ ಮಾಡಿಕೊಡಲಿಚ್ಛಿಸುವೆ.

ಮೊದಲಿಗೆ, ಗರ್ಭಕೋಶದ ರಚನೆಯ ಬಗ್ಗೆ ಕಿರುಮಾಹಿತಿಯನ್ನು ಕೊಡುವೆ. ಗರ್ಭಕೋಶವು, “PEAR SHAPE”, ಅಂಗ. ಇದನ್ನು, BODY, ISTHMUS, CERVIX ಎಂದು ವಿಭಾಗಿಸುತ್ತಾರೆ. ಅಂದರೆ, ಇದರ ಮೇಲ್ಭಾಗವು (BODY OF THE UTERUS) ಗರ್ಭವನ್ನು ಪೋಷಿಸುವ ಪೊಟರೆಯಂತಿರುತ್ತದೆ. ಗರ್ಭಗೊರಳು (CERVIX), ಕೆಳಭಾಗದಲ್ಲಿರುತ್ತದೆ. ಇವೆರಡರ ನಡುವಿನ ಸೇತು ISTHMUS. ಗರ್ಭಕೋಶದ ಇಕ್ಕೆಲಗಳಿಂದ ಗರ್ಭನಾಳ (FALLOPIAN TUBES) ಹೊರಬರುತ್ತದೆ. ಗರ್ಭಕೋಶಕ್ಕೆ ಅಂಟಿಕೊಂಡಂತೆ, ಎಡ ಮತ್ತು ಬಲಭಾಗಗಳಲ್ಲಿ ಅಂಡಾಶಗಳಿರುತ್ತವೆ. ಅರ್ಬುದ ರೋಗ ಅಥವಾ ಕ್ಯಾನ್ಸರ್ ಈ ಯಾವ ಭಾಗವನ್ನಾದರೂ ಕಾಡಬಹುದು. ಆದರೆ ಬಹುತೇಕ, ಗರ್ಭಗೊರಳು ಕ್ಯಾನ್ಸರ್ಗೆ ತುತ್ತಾಗುವ ಸಂಭವ ಅಧಿಕ. ಗರ್ಭಗೊರಳು ಅಥವಾ CERVIXಅನ್ನು ಸಹಾ ENDOCERVIX ಮತ್ತು ECTOCERVIX ಎಂದು ವಿಂಗಡಿಸುತ್ತೇವೆ. ಹೆಣ್ಣು ಹರೆಯಕ್ಕೆ ಬಂದಾಗ, ದೇಹದಲ್ಲಿ ಹಾರ್ಮೋನುಗಳ ವ್ಯತ್ಯಯ, ಅವುಗಳ ಪ್ರಭಾವ ಕಂಡುಬರುತ್ತದೆ. ಈ ಪ್ರಭಾವ CERVIX ಮೇಲೂ ಆಗುತ್ತದೆ. ENDO ಮತ್ತು ECTOCERVIXನ ಮೇಲ್ಪದರವು ಭಿನ್ನರೀತಿಯ ಜೀವಕೋಶಗಳಿಂದ ಸುತ್ತುವರೆದಿರುತ್ತದೆ. ಹರೆಯದಲ್ಲಿ ಈ ECTOCERVIXನ ಮೇಲ್ಪದರದ ಜೀವಕೋಶಗಳು, ENDOCERVIX ಮೇಲೂ ಬೆಳೆಯುತ್ತದೆ. ಈ ಭಾಗವನ್ನು TRANSFORMATION ZONE(TZ) ಎಂದು ಕರೆಯುತ್ತಾರೆ. ಈ TRANSFORMATION ZONE, ಅರ್ಬುದರೋಗಕ್ಕೆ ತುತ್ತಾಗುವ ಸಂಭವನೀಯತೆ ಹೆಚ್ಚು. ಈ TZನ ಸ್ಥಾನ ವ್ಯತ್ಯಯವಾಗುತ್ತಿರುತ್ತದೆ. ಹರೆಯದಲ್ಲಿ, ಗರ್ಭಿಣಿಯಾಗಿದ್ದಾಗ, ಋತುಬಂಧದ ಸಮಯದಲ್ಲಿ, ಕೆಲವೂಂದು ನಿರ್ದಿಷ್ಟ ವ್ಯತ್ಯಾಸಗಳನ್ನು ಕಾಣುತ್ತೇವೆ..

ಗರ್ಭಗೊರಳಿನ ಕ್ಯಾನ್ಸರ್ಗೆ ಕಾರಣಗಳೇನು??:

  • ಚಿಕ್ಕ ವಯಸ್ಸಿಗೆ ಮದುವೆ ಮತ್ತು ಲೈಂಗಿಕ ಚಟುವಟಿಕೆ
  • ಮೇಲೆ, ಮೇಲೆ ಗರ್ಭಧಾರಣೆ ಮತ್ತು ಹೆರಿಗೆ
  • HUMAN PAPILLOMA VIRUS (HPV) ಸೋಂಕು
  • ದೀರ್ಘಕಾಲ, ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವುದು
  • ಸಿಗರೇಟು ಸೇವನೆ
  • ಅಸುರಕ್ಷಿತ ಮತ್ತು ಹಲವು ವ್ಯಕ್ತಿಗಳೊಡನೆ ಲೈಂಗಿಕ ಸಂಬಂಧ ಹೊಂದಿರುವುದು
  • ಹೆಚ್. ಐ. ವಿ ಸೋಂಕಿನಿಂದ ಬಳಲುತ್ತಿರುವುದು

ಮೇಲೆ ತಿಳಿಸಿದ ಕಾರಣಗಳೇನಿದ್ದರೂ, HPV ವೈರಾಣುವಿನ ಸೋಂಕು ಪ್ರಮುಖ ಕಾರಣವೆಂದು ಸಂಶೋಧನೆಗಳು ದೃಢೀಕರಿಸಿವೆ. ಈ HPV ವೈರಾಣುವಿನಲ್ಲೂ ಕೆಲವು ಪ್ರಮುಖ ಪ್ರಭೇದಗಳು ಮಾತ್ರ ಕ್ಯಾನ್ಸರ್ ಕಾರಕಗಳು. ಅವೆಂದರೆ, HPV 16, 18, 31 ಹಾಗು 33. ವೈರಾಣುವು, ಗರ್ಭಗೊರಳಿನ ಜೀವಕೋಶಗಳೊಳಗೆ ಸಂಮ್ಮಿಳಿತಗೊಂಡು, ನಂತರ ಅವು ಅನಿಯಿಂತ್ರಿತವಾಗಿ ಬೆಳೆಯುತ್ತವೆ. ಇದನ್ನು ಅರ್ಬುದರೋಗವೆಂದು ಕರೆಯಲಾಗುತ್ತದೆ.

ಈ ಗರ್ಭಗೊರಳಿನ ರೋಗಲಕ್ಷಣಗಳೇನು??

  • ಅನಿಮಿಯತ ಋತುಸ್ರಾವ- ಸಂಭೋಗದ ನಂತರ ರಕ್ತಸ್ರಾವವಾಗುವುದು
  • ಅಧಿಕವಾಗಿ ಬಿಳಿಸೆರಗು ಹೋಗುವುದು
  • ಪದೇ ಪದೇ ಲೈಂಗಿಕ ಸೋಂಕಿನ ಲಕ್ಷಣಗಳು ಕಾಣಿಸುವುದು
  • ಮೂತ್ರದಲ್ಲಿ ರಕ್ತ ಕಾಣಿಸುವುದು
  • ಸುಸ್ತು, ಆಯಾಸ , ಇತ್ಯಾದಿ.. ಇದನ್ನು ಪತ್ತೆ ಹಚ್ಚುವುದು ಹೇಗೆ?

ಸ್ರ್ತೀರೋಗ ತಜ್ಞರು ಅಥವಾ ಕ್ಯಾನ್ಸರ್ ತಜ್ಞರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು. ತಜ್ಞರು ಅಲಭ್ಯವಿದ್ದ ಪಕ್ಷದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಕೆಲವು ಸುಲಭ ಸಾಧ್ಯ ಪರೀಕ್ಷೆಗಳನ್ನು ಮಾಡುವ ಸೌಲಭ್ಯಗಳನ್ನು ಸರ್ಕಾರ ಮಾಡಿದೆ. ಮಹಿಳೆಗೆ ಈ ರೋಗವಿರುವ ಗುಮಾನಿಯಿದ್ದಲ್ಲಿ, ಅವರನ್ನು ಮುಂದಿನ ಹಂತದ ಚಿಕಿತ್ಸೆಗೆ ದೊಡ್ಡಾಸ್ಪತ್ರೆಗೆ ಕಳುಹಿಸಿ ಕೊಡಲಾಗುತ್ತದೆ. ಈ ರೋಗವನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿದರೆ, ಪೂರ್ಣಚಿಕಿತ್ಸೆ ಲಭ್ಯವಿದೆ. ಗರ್ಭಗೊರಳಿನ ಕ್ಯಾನ್ಸರ್ ಬೆಳೆಯಲು ಹಲವಾರು ವರ್ಷಗಳು ಬೇಕು. ಇದನ್ನು ಒಂದು ಸುಲಭ ಪರೀಕ್ಷೆಯಾದ, PAPSMEAR ಮೂಲಕ, ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿ, ಚಿಕಿತ್ಸೆ ಮಾಡಬಹುದು. ಏನಿದು PAPSMEAR? ಇದೊಂದು SCREENING TEST. ಮಹಿಳೆಯ ಗರ್ಭಗೊರಳಿನ ಕೆಲವು ಜೀವಕೋಶಗಳನ್ನು ಒಂದು ಗಾಜಿನ SLIDE ಮೇಲೆ ಫಿಕ್ಸ್ ಮಾಡಲಾಗುತ್ತದೆ. ಇದನ್ನು ಮೈಕ್ರೋಸ್ಕೋಪ್ ಮೂಲಕ ನೋಡಿ, ಕ್ಯಾನ್ಸರ್ಗೆ ತಿರುಗುವಂತಹ ಜೀವಕೋಶಗಳು ಕಂಡು ಬಂದರೆ, ಮುಂದಿನ ಹಂತದ ಪರೀಕ್ಷೆಗಳಾದ, BIOPSY, HPV TESTINGಗೆ ರೋಗಿಯನ್ನು ಕಳುಹಿಸಲಾಗುತ್ತದೆ. ಈ ಪರೀಕ್ಷೆಯನ್ನು, ಮಹಿಳೆಯು ಲೈಂಗಿಕ ಚಟುವಟಿಕೆ ಪ್ರಾರಂಭಿಸಿದಾಗಲಿಂದ ಮೊದಲ್ಗೊಂಡು, ಆರವತ್ತೈದು, ಎಪ್ಪತ್ತು ವಯಸ್ಸಿನವರೆಗೂ ಮಾಡಿಸಿಕೊಳ್ಳಬಹುದು. ಗರ್ಭಗೊರಳಿನ ಅರ್ಬದರೋಗಕ್ಕೆ ಚಿಕಿತ್ಸೆಯೇನು?? ಶಸ್ತ್ರಚಿಕಿತ್ಸೆಯೇ ಅಥವಾ ಕಿಮೋಥೆರಪಿ, ರೇಡಿಯೋಥೆರಪಿಯೇ?? ಇದು ರೋಗವು ಯಾವ ಹಂತದಲ್ಲಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಪ್ರಾಥಮಿಕ ಹಂತವಾದರೆ, ಶಸ್ತ್ರಚಿಕಿತ್ಸೆ, ಕೆಲವೊಮ್ಮೆ ಕಿಮೋಥೆರಪಿ ಅಥವಾ ರೇಡಿಯೇಶನ್ ಚಿಕಿತ್ಸೆ ಮಾಡಬೇಕಾಗುತ್ತದೆ. ರೋಗವು ಯಾವ ಹಂತದಲ್ಲಿ ಪತ್ತೆಯಾಗಿದೆ, ಯಾವ ಚಿಕಿತ್ಸೆ ನೀಡಲಾಗಿದೆ, ರೋಗಿಯ ಆರೋಗ್ಯದ ಸ್ಥಿತಿಗತಿಯ ಮೇಲೆ, ಅವರ 5YEAR SURVIVAL RATE ಹೇಳಲಾಗುತ್ತದೆ.

ಈ HPV ವೈರಾಣುವನ್ನು ತಡೆಗಟ್ಟಲು ಸಾಧ್ಯವಿದೆಯೇ??

ಇದೆ. ಈಗ ಲಸಿಕೆಯ ಸೌಲಭ್ಯವಿದೆ. ಲಸಿಕೆಯು HPV 16,18 ಪ್ರಭೇದಗಳ ವಿರುದ್ಧ ಸೆಣಸಲು ಸಹಕಾರಿಯಾಗಿದೆ. ಯಾರೆಲ್ಲಾ ಈ ಲಸಿಕೆಯನ್ನು ಹಾಕಿಸಿಕೊಳ್ಳಬಹುದು?

ಒಂಬತ್ತು ವರ್ಷ ತುಂಬಿ, ಹದಿನಾಲ್ಕು ವರ್ಷಗಳ ಒಳಗಿನ ಹರೆಯದ ಬಾಲಕಿ, ಬಾಲಕರಿಗೆ PRIMARY IMMUNISATION, ಅಂದರೆ, ದಡಾರ, ನಾಯಿಕೆಮ್ಮು ಇವುಗಳಿಗೆ ಲಸಿಕೆ ಹಾಕಿಸಿದಂತೆ, HPV ಲಸಿಕೆಯನ್ನು ಹಾಕಿಸಬಹುದು. ಎರಡು ಬಾರಿ, ಆರು ತಿಂಗಳುಗಳ ಅಂತರದಲ್ಲಿ ಹಾಕಿಸಬೇಕು. ಹದಿನೈದು ವರ್ಷ ಮೇಲ್ಪಟ್ಪ ಮಕ್ಕಳಿಗೆ ಮೂರು ಬಾರಿ ಹಾಕಿಸಬೇಕು. ಮೊದಲೆರಡು ಲಸಿಕೆ ಒಂದು ತಿಂಗಳ ಅಂತರದಲ್ಲಿ, ಮೂರನೆಯದು ಆರು ತಿಂಗಳ ಬಳಿಕ. ಮಹಿಳೆಯರು, ನಲವತ್ತೈದು ವರ್ಷಗಳವರೆಗೂ ಹಾಕಿಸಿಕೊಳ್ಳಬಹುದು. ಪುರುಷರು, ಇಪ್ಪತ್ತಾರು ವಯಸ್ಸಿನವರೆಗೆ ಲಸಿಕೆಯನ್ನು ಹಾಕಿಸಿಕೊಳ್ಳಬಹುದು.

ಯಾವುದೇ ಲಸಿಕೆ ತೆಗೆದುಕೊಂಡಾಗ ದೇಹದಲ್ಲಿ ಆಗುವ ಕೆಲವು ಅಡ್ಡಪರಿಣಾಮಗಳಂತೆಯೇ, ಈ ಲಸಿಕೆಯ ಪರಿಣಾಮವೂ ಸಹ.

ಇತ್ತೀಚಿಗೆ ಭಾರತ ಸರ್ಕಾರ ತನ್ನ ಆಯವ್ಯಯ ಮಂಡನೆಯಲ್ಲಿ, ಈ ಲಸಿಕೆಯನ್ನು ಕುರಿತು ಹೆಚ್ಚು ಒತ್ತುಕೊಟ್ಟಿರುವುದು ಸ್ವಾಗತಾರ್ಹ ಸಂಗತಿ.

ಕಡೆಯದಾಗಿ, ಗರ್ಭಗೊರಳಿನ ಕ್ಯಾನ್ಸರ್ನ್ನು ತಡೆಗಟ್ಟಲು ಸಾಧ್ಯವಿದೆ. ಪ್ರಾಥಮಿಕ ಹಂತದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ನಿಯಮಿತ ತಪಾಸಣೆಯು ಸುಲಭವಾಗಿ ಮಾಡಬಹುದಾಗಿದ್ದು, ಕ್ಯಾನ್ಸರ್ಗೆ ತಿರುಗುವ ಹುಣ್ಣುಗಳನ್ನು ಸೂಕ್ತವಾಗಿ ಉಪಚರಿಸಬಹುದಾಗಿದೆ. ಕ್ಯಾನ್ಸರ್ ಎಂದರೆ ಸಾವು ಎನ್ನುವ ಕಲ್ಪನೆಯನ್ನು ಕಿತ್ತು ಹಾಕಿ, ಅದನ್ನು ಧೈರ್ಯವಾಗಿ ಎದುರಿಸುವುದೇ ಸೈ!! ಸಮಯದಲ್ಲಿ ಸೂಕ್ತ ಮಾರ್ಗದರ್ಶನ, ಸಲಹೆ, ಚಿಕಿತ್ಸೆ ಪಡೆದು ಈ ರೋಗವನ್ನು ಜಯಿಸೋಣ..

ಧನ್ಯವಾದಗಳು,
ಸೌಮ್ಯಾ ಹಿಮಗಿರೀಶ್

 

9036709599

dwijodaya@gmail.com

www.denhym.com