ಸಂಪಾದಕೀಯ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಆತ್ಮೀಯ ಬಂಧುಗಳೇ,
ಷಣ್ಣಾಮಾತ್ಮಾನಿ ನಿತ್ಯಾನಾಮೈಶ್ವರ್ಯಂ ಯೋsಧಿಗಚ್ಛತಿ|
ನ ಸ ಪಾಪೈಃ ಕುತೋನರ್ಥೈರ್ಯುಜ್ಯತೇ ವಿಜಿತೇನ್ದ್ರಿಯಃ||
ಮಹಾಭಾರತದಲ್ಲಿನ ವನಪರ್ವದಲ್ಲಿ ಬರುವ ಮಾತಿದು. ಯಾರಿಗೆ ತಮ್ಮ ಮನಸ್ಸಿನ ಮೇಲೆ ಹತೋಟಿಯಿದ್ದು ಅದನ್ನು ಜಯಿಸಿರುತ್ತಾರೋ ಅವರಿಗೆ ಪಾಪದ ಲೇಪವಿರುವುದಿಲ್ಲ. ಯಾವ ವಿಧವಾದ ಅನರ್ಥಗಳೂ ಅವನಿಗೆ ಆಗುವುದಿಲ್ಲ. ಮುಂದುವರೆದು ಮನುಷ್ಯದ ಶರೀರವು ರಥವಿದ್ದಂತೆ ಅದನ್ನು ನಡೆಸುವ ಸಾರಥಿಯೆಂದರೆ ಶರೀರದಲ್ಲಿರುವ ಜೀವ. ಮನಸ್ಸಿನಿಂದ ಕೂಡಿದ ಪಂಚೇಂದ್ರಿಯಗಳು ಆರು ಕುದುರೆಗಳಿದ್ದಂತೆ. ಅವನ್ನು ಧೀರನಾದ , ಚಾಣಾಕ್ಷನಾದವನು ವ್ಯವಸ್ಥಿತವಾಗಿ ನಡೆಸಿದಾಗ ಬದುಕಿನ ರಥ ಸೊಗಸಾಗಿ ಪುಣ್ಯಲೇಪದಿಂದ ಸಾಗುತ್ತದೆ. ಇಲ್ಲದಿದ್ದರೆ ಅದು ಪಾಪಲೇಪಿತವೇ ಆಗಿರುತ್ತದೆ. ಇತ್ತೀಚಿನ ಬೆಳವಣಿಗೆಯಲ್ಲಿ ಪಂಚೇಂದ್ರಿಯಗಳ ಹತೋಟಿಯನ್ನು ಹೊಂದಿದ ನೇತಾರರಿಲ್ಲದೆ ಉದ್ಯಮಗಳು ಎಡವಿ ಬೀಳುವಂತಾಗಿದೆ. ಸ್ವಾರ್ಥ, ಅಸೂಯೆಯಿಂದ ಲೇಪಿತವಾದ ಮನಸ್ಸನ್ನಿಟ್ಟುಕೊಂಡು ಉದ್ಯಮವಾಗಲೀ ರಾಷ್ಟ್ರವನ್ನಾಗಲೀ ನಡೆಸಲು ಸಾಧ್ಯವೇ? ಹೊಸ ಉದ್ಯಮವನ್ನು ಸ್ಥಾಪಿಸಲು ನಮ್ಮ ಬಳಿ ಬಂದ ವ್ಯಕ್ತಿಗೆ ಮತ್ತೊಂದು ಅದೇ ರೀತಿಯ ಕಂಪನಿಯನ್ನು ಬೀಳಿಸಿ ತನ್ನದನ್ನು ಕಟ್ಟಬೇಕೆಂಬ ಹಠ. ಆದರೆ ಅದು ಸಾಧ್ಯವಾಗದೇ ಹೋದಾಗ ಕ್ಷುದ್ರನಾಗುವುದರಿಂದ ಅವನ ಮತ್ತು ಅವನ ಸುತ್ತಲಿನ ವಾತಾವರಣ ಕೆಡುತ್ತದೆಂಬ ಕಿಂಚಿತ್ ಪರಿಜ್ಞಾನವೂ ಇಲ್ಲ ಆತನಿಗೆ. ಉನ್ನತಿಗೆ ಶಾರ್ಟ್ ಕಟ್ ಗಳಿಲ್ಲ. ಸಾಧ್ಯನೆ ತಪಸ್ಸಿನಿಂದ ಮಾತ್ರ ಸಾಧ್ಯ. ಇವೆಲ್ಲವೂ ಗುಣಗಳಲ್ಲಿ ಅಡಗಿದೆ

ಕೆಡುಕನ್ನು ಬಯಸುವ ಯಾವ ಉದ್ಯಮಿಯೇ ಆಗಲಿ ಅಥವಾ ಉತ್ಪನ್ನವೇ ಆಗಲಿ ಅದು ಮೊದಲಿ ಬೂಮ್ ಆದರೂ ಕ್ರಮೇಣ ತನ್ನ ಸ್ಥಿತಿಯಿಂದ ಕೆಳಗಿಳಿಯುತ್ತದೆ. ಎ ಐ ಸೃಷ್ಟಿಕರ್ತ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಆತನ ವ್ಯಕ್ತಿಗತ ಅಥವಾ ರಾಜಕೀಯ ಕಾರಣಗಳೇನೇ ಇರಲಿ, ಆದರೆ ಎ ಐ ನ ಉತ್ತಮ ಪ್ರಯೋಜನದ ಜೊತೆಗೆ ದುಷ್ಟಹಾದಿಯೂ ಇದೆ. ಅದನ್ನು ದುಷ್ಟತನಕ್ಕೆ ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಕಡಿವಾನ ಹಾಕಬೇಕಾದ ಅನಿವಾರ್ಯತೆಯನ್ನು ಅದು ಸೃಷ್ಟಿಸುತ್ತಿದೆ. ಇಷ್ಟೆಲ್ಲದರ ನಡುವೆ ನಮಗೆ ಕಾಡುವ ಅಂಶವೆಂದರೆ ಮೇಲೆ ಹೇಳಿದ ಇಂದ್ರಿಯ ನಿಗ್ರಹದ್ದು. ಭಾಗವತದಲ್ಲಿ ಬರುವ ಮಾತನ್ನು ಗಮನಿಸೋಣ, ಗುಣಾಯನಂ ಶೀಲಧನಂ ಕೃತಜ್ಞಂ| ವೄದ್ಧಾಶ್ರಯಂ ಸಂವೃಣತೇನು ಸಂಪದಃ|ಪ್ರಸೀದತಾಂಅ ಬ್ರಹ್ಮಕುಲಂ ಗವಾಂ ಚ ಜನಾರ್ದನಃ ಸಾನುಚರಶ್ಚ ಮಹ್ಯಮ್|| ಗುಣಶಾಲಿಯಾದ, ಶೀಲಸಂಪನ್ನನಾದ ಗುರುಸೇವಾ ಶುಶ್ರೂಷೆಗಳಲ್ಲಿ ತನ್ನನ್ನು ತೊಡಗಿಸಿಕೊಂಡವನಿಗೆ ಸಮಸ್ತ ಸಂಪತ್ತುಗಳೂ ತಾವಾಗಿಯೇ ಬರುವವರು. ಲೋಕ ಹಿತಕ್ಕಾಗಿ ಮಾಡುವ ಕಾರ್ಯಕ್ಕೆ ನಿಧಾನವಾಗಿಯಾದರೂ ಸರಿ ಲೋಕ ಮೆಚ್ಚುಗೆಯನ್ನು ನೀಡುತ್ತದೆ. ಎಲ್ಲವೂ ಆ ಭಗವಂತನಲ್ಲಿ ಲೀನವಾಗುತ್ತದೆ. ಎ ಐ ಏನೇ ಅಪ್ಡೇಟ್ ಆಗುತ್ತಿದ್ದರೂ ಅದನ್ನು ಮೀರಿದ ಇಂದ್ರಿಯ ನಿಗ್ರಹವೆಂಬುದು ಮನುಷ್ಯನಿಗಿದ್ದರೆ ಕೆಡುಕಿನ ಕಡೆಗೆ ಗಮನ ನೀಡಲಾರ. ಎ ಐ ನ ಸದ್ಬಳಕೆಯನ್ನು ಮಾಡುತ್ತಲೇ ತನ್ನ ಸ್ವಂತ ಬುದ್ಧಿಶಕ್ತಿಯನ್ನೂ ಸಹ ಬೆಳೆಸಿಕೊಳ್ಳುವುದು ಜಾಣ್ಮೆಯ ಕೆಲಸವಾಗಿದೆ.

ಎಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು.
ಹರೀಶ್ ಆತ್ರೇಯ

 

9036709599

dwijodaya@gmail.com

www.denhym.com