ಸಂಪಾದಕೀಯ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಸಂಪಾದಕೀಯ
ಆತ್ಮೀಯ ಓದುಗರೇ,
ಇನ್ನೇನು ದಸರಾ ಆರಂಭವಾಗಲಿದೆ. ಈ ಪತ್ರಿಕೆ ಕೈ ಸೇರುವ ಹೊತ್ತಿಗೆ ಮನೆ ಮನೆಯಲ್ಲಿ ದಸರಾ ಹಬ್ಬದ ಸಡಗರ ಆರಂಭವಾಗಿರುತ್ತದೆ. ಬೊಂಬೆಗಳನ್ನು ಒಪ್ಪ ಓರಣವಾಗಿ ಜೋಡಿಸಿ, ಮಕ್ಕಳನ್ನು ಕರೆದು ಬಾಗಿನ ಕೊಡುವ ಸಂಪ್ರದಾಯ ನಮ್ಮಲ್ಲಿದೆ. ಮಕ್ಕಳಿಗಿಷ್ಟವಾಗುವ ಗೊಂಬೆಗಳು ಅದನ್ನು ಅಲಂಕರಿಸಲು ಇಷ್ಟಪಡುವ ಹಿರಿಯರು ಅದನ್ನು ಮತ್ತೂ ಕಲಾತ್ಮಕವಾಗಿ ಮಾಡಲು ತೊಡಗುವ ಹೆಣ್ಣುಮಕ್ಕಳು ಎಲ್ಲರಿಗೂ ನವರಾತ್ರಿ ಅಥವಾ ಬೊಂಬೆ ಹಬ್ಬ ಸಂತೋಷದಾಯಕ. ರಾಮಾಯಣ, ಮಹಾಭಾರತ, ಭಾಗವತದಿಂದಾದಿಯಾಗಿ ಸಿಗುವ ಥೀಮ್ ಬೇಸ್ಡ್ ಬೊಂಬೆಗಳು ಹೆಚ್ಚು ಪ್ರಚಲಿತ. ಈಗಂತೂ ಅದನ್ನೂ ಮೀರಿಸುವಂತೆ ಹಳ್ಳಿಯನ್ನು ಬಿಂಬಿಸುವ ಬೊಂಬೆಗಳ ಸೆಟ್, ಪ್ರಸ್ತುತ ಸಮಸ್ಯೆಗಳನ್ನು ಅಥವಾ ಸಂಭ್ರಮವನ್ನು ತೋರಿಸುವ ಕಸ್ಟಮೈಸ್ಡ್ ಸೆಟ್ ಗಳು ಸಿಗುತ್ತವೆ. ಒಳ್ಳೆಯ ಬೊಂಬೆಗಳ ಪ್ರದರ್ಶನವನ್ನು ಸ್ಪರ್ಧೆಯನ್ನು ಸಹ ಕೆಲ ಸಂಘಟನೆಗಳು ಏರ್ಪಡಿಸುತ್ತವೆ. ನಮ್ಮ ಊಹಾಲೋಕದ , ಮತ್ತು ನಮ್ಮೊಡನಾಡಿದ ಕಲ್ಪನೆಯನ್ನು ಬೊಂಬೆಗಳ ಮಟ್ಟಕ್ಕೆ ಏರಿಸಿ ಅದರೊಂದಿಗೆ ಸಂವಹಿಸುವ ಅದ್ಭುತ ಲೋಕ ಬೊಂಬೆಗಳ ಲೋಕ.

ಬೊಂಬೆಗಳನ್ನು ತಯಾರಿಸುವ ಉದ್ಯಮವು ಹೆಚ್ಚು ಕ್ರಿಯಾಶೀಲವಾಗಿರಬೇಕಾಗುತ್ತದೆ. ಪ್ರಸ್ತುತ ವಿಷಯಗಳನ್ನು ಗ್ರಹಿಸುತ್ತಾ ಅದನ್ನು ನಮ್ಮ ಸಂಸ್ಕೃತಿಗೆ ಒಗ್ಗಿಸಿಕೊಳ್ಳುವುದು ಸಹ ಬೊಂಬೆಗಳನ್ನು ತಯಾಸಿರುವ ಕಲಾವಿದನ ಮನೋಚಳಕಕ್ಕೆ ಎಷ್ಟು ಬೆಲೆ ಕಟ್ಟಿದರೂ ಕಡಿಮೆಯೇ ಆಗುತ್ತದೆ. ಬೊಂಬೆಗಳನ್ನು ಕೂರಿಸುವ ಸಂಪ್ರದಾಯವಿದ್ದುದರಿಂದ ಕಲೆಗೆ ಮತ್ತು ಕಲಾವಿದನಿಗೆ ಇದೊಂದು ಉದ್ಯಮವಾಗಿ ಮುಂದುವರೆಯಲಿಕ್ಕೆ ಸಾಧ್ಯವಾಯಿತು. ಸಮಯದ ಅಭಾವ ಮತ್ತು ಬೊಂಬೆಗಳನ್ನು ಉಳಿಸಿಕೊಂಡು ಹೋಗುವ ಉತ್ಸಾಹವಿಲ್ಲದೆ ಹೋದುದರಿಂದ ಅನೇಕರ ಮನೆಯಲ್ಲಿ ನೆಪಮಾತ್ರಕ್ಕೆ ಬೊಂಬೆಗಳನ್ನು ಕೂರಿಸಲಾಗುತ್ತಿದೆ. ಎಷ್ಟೋ ಮನೆಗಳನ್ನು ಸರಸ್ವತಿ ಹಬ್ಬದಂದು ಮಾತ್ರ ಬೊಂಬೆಗಳನ್ನು (ಅದರಲ್ಲೂ ಪಟ್ಟದ ಬೊಂಬೆಗಳನ್ನು) ಕೂರಿಸಿದ ಶಾಸ್ತ್ರ ಮಾಡಿ ಮುಗಿಸುತ್ತಾರೆ. ಕಲೆ ಬೆಳೆಯುವುದು ಗ್ರಾಹಕನಿಂದಲೇ. ಕಲಾವಿದ ಬೆಳೆಯುವುದು ಸಹ ಗ್ರಾಹಕನಿದ್ದಾಗಲೇ. ಕಲಾಪುಷ್ಟಿ ಸಿಗುವುದು ನಮ್ಮ ಸಂಪ್ರದಾಯದ ಆಚರಣೆಗನ್ನು ಅಷ್ಟೇ ಶ್ರದ್ಧೆಯಿಂದ ಮಾಡಿದಾಗ ಮಾತ್ರ. ದಕ್ಷಿಣ ಭಾರತದಲ್ಲಿ ಈ ಸಂಪ್ರದಾಯ ಹೆಚ್ಚು ಪ್ರಮುಖವಾಗಿದೆ. ಉತ್ತರದಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ.

ಮರದ ಬೊಂಬೆಗಳು (ಚನ್ನಪಟ್ಟಣದ ಬೊಂಬೆಗಳು) ಮಣ್ಣಿನ ಬೊಂಬೆಗಳು, ಪ್ಲಾಸ್ಟಿಕ್, ಫೈಬರ್, ಪಿಂಗಾಣಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ಹೀಗೆ ಅನೇಕ ವಸ್ತುಗಳಲ್ಲಿ ಬೊಂಬೆಗಳನ್ನು ತಯಾರಿಸಲಾಗುತ್ತದೆ. ನಾವು ಸಾಧ್ಯವಾದಷ್ಟೂ ನಮ್ಮ ನೆಲದ ತಯಾರಕನ್ನು ಹುಡುಕಿ ಕೊಂಡುಕೊಳ್ಳುವುದು ಒಳಿತು. ಹೊರದೇಶದ ಅನೇಕ ಬೊಂಬೆಗಳನ್ನು ಮಾರುಕಟ್ಟೆಯಲ್ಲಿ ದಾಂಗುಡಿಯಿಟ್ಟಿದೆ. ಕಡಿಮೆ ಬೆಲೆಗೆ ನಮ್ಮ ಚನ್ನಪಟ್ಟಣದ್ದನ್ನೂ ಕೊಡುವ ಚೈನಾ ವಸ್ತುಗಳಿಗೆ ಕೊರತೆಯಿಲ್ಲ. ಆದರೆ ವ್ಯತ್ಯಾಸ ಸ್ಪಷ್ಟವಾಗಿ ತಿಳಿದುಬಿಡುತ್ತದೆ. ಬೆಲೆ ಕಡಿಮೆಯೆಂದು ಮಾರುಹೋಗದೆ ನಮ್ಮ ನೆಲದ ಬೊಂಬೆಗಳನ್ನು ಕೊಳ್ಳೋಣ.
ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು

 

9036709599

dwijodaya@gmail.com

www.denhym.com