ಸಂಪಾದಕೀಯ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಮೇಘಕೃಷ್ಣಾಜಿನಧರಾ ಧಾರಾಯಜ್ಞೋಪವೀತಿನಃ|
ಮಾರುತಾಪೂರಿತಗುಹಾಃ ಪ್ರಾಧೀತಾ ಇವ ಪರ್ವತಾಃ||

ಆತ್ಮೀಯರೇ,
ನವೆಂಬರ್ ತಿಂಗಳೆಂದರೆ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ. ಬೇರಾವ ರಾಜ್ಯದಲ್ಲೂ ಇರದ ವಿಜೃಂಭಣೆ ನಮ್ಮಲ್ಲಿ ನಡೆಯುತ್ತದೆ. ನಾವು ಭಾಷಾ ಪ್ರೇಮಿಗಳೂ ಮತ್ತು ಪರಭಾಷೆಯನ್ನೂ ಸಹ ನಮ್ಮ ಭಾಷೆಯಷ್ಟೇ ಆದರಿಸುವವರೂ ಆಗಿದ್ದೇವೆ. ಉನ್ನತ ಮೌಲ್ಯದ ಕೃತಿಗಳು ಎಲ್ಲೇ ಬಂದರೂ ಅದೂ ನಮ್ಮಲ್ಲೂ ಬರಲಿಮ್ ನಮ್ಮ ಓದುಗರನ್ನೂ ತಲುಪಲಿ ಎನ್ನುವ ಜ್ಞಾನ ಪ್ರೇಮ ನಮ್ಮದು. ಇದರ ಜೊತೆಗೆ ನಾವು ಕನ್ನಡ ಸಾಹಿತ್ಯದ ಮೌಲ್ಯವನ್ನೂ ಪರಿಗಣಿಸಬೇಕು. ಉತ್ತಮವಾದ ಬರಹಗಳು, ಮೌಲ್ಯಯುತವಾದ್ ಮಾಹಿತಿಯುಳ್ಳ ಪುಸ್ತಕಗಳು ನಮ್ಮಲ್ಲಿ ಅನೇಕವು ಬಂದಿವೆ ಬರುತ್ತಲೂ ಇವೆ. ಅವನ್ನು ನಾವು ಮತ್ತೊಂದು ಭಾಷಿಕರನ್ನು ತಲುಪುವಂತೆ ನೋಡಿಕೊಳ್ಳಬೇಕಾಗುವುದು ನಮ್ಮ ಜವಾಬ್ದಾರಿಯೂ ಆಗಿದೆ. ಕುವೆಂಪು ಭಾಷಾ ಭಾರತಿಯು ಈಗಾಗಲೇ ಅದನ್ನು ಮಾಡುತ್ತಲಿದೆ. ಸಾಹಿತ್ಯವು ಒಂದು ಭಾಷೆಗೆ ಸೀಮಿತವಾಗದಂತೆ ಕಾಯುವುದು ನಮ್ಮ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ದ್ವಿಜ ತಂಡವು ಜ್ಞಾನ ಪ್ರಸರಣ ಕಾರ್ಯದಲ್ಲಿ ತನ್ನ ಹೆಜ್ಜೆ ಇಡುತ್ತಲಿದೆ. ಅದರ ಮೊದಲ ಭಾಗವಾಗಿ ತನ್ನದೇ ಆದ ಸ್ವಂತ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿ ಅಕಾಡೆಮಿಕ್ ಆದ ಬರಹಗಳನ್ನು ತರುವ ಯೋಜನೆಯನ್ನು ಹಾಕಿಕೊಳ್ಳುತ್ತಿದೆ. ಈಗಾಗಲೇ ಇದೇ ಪತ್ರಿಕೆಯಲ್ಲಿ ಶ್ರೀಮತಿ ಸೌಮ್ಯಾ ಹಿಮಗಿರೀಶ್ ರವರು ಬರೆದ ವೈದ್ಯ ಬರಹಗಳನ್ನು ಒಂದೆಡೆ ಸೇರಿಸಿ ಪುಸ್ತಕ ರೂಪದಲ್ಲಿ ತರುತ್ತಿದೆ. ಇಡಿಯ ಲೇಖನ ಗುಚ್ಛವು ಸಾರ್ವಕಾಲಿಕವಾದ ಅಂಶಗಳನ್ನು ಒಳಗೊಂಡಿದೆ. ಕಾರಣ ವೈದ್ಯಕೀಯ ಸಂಗತಿಗಳು ಹೊಸ ಪದ್ಧತಿ ಬರುವವರೆಗೂ ಬದಲಾಗದ್ದು. ಅಲ್ಪ ಸ್ವಲ್ಪ ಬದಲಾವಣೆಗಳಿದ್ದರೂ ಮೂಲ ಲಕ್ಷಣಗಳು ಬದಲಾಗದು. ಮತ್ತೊಂದು ಪುಸ್ತಕ ಶ್ರೀಮತಿ ಸುಮನಾ ರವರದ್ದು. ಸಂದರ್ಶನಗಳನ್ನು ಹೇಗೆ ಆನಂದಿಸಬೇಕು ಮತ್ತು ಅದಕ್ಕೆ ಬೇಕಾದ ತಯಾರಿಗಳೇನು ಎನ್ನುವುದರ ಬಗೆಗಿನ ಅವರ ಲೇಖನಗಳು ಅನೇಕರಿಗೆ ಮೆಚ್ಚುಗೆಯಾಗಿದೆ. ಮೂಲತಃ ಅದು ಇಂಗ್ಲೀಷ್ ಭಾಷೆಯಲ್ಲಿದೆ ಅದನ್ನು ಕನ್ನಡಕ್ಕೆ ಅನುವಾದಿಸಿ ಮತ್ತೊಮ್ಮೆ ಬಿಡುಗಡೆ ಮಾಡಲಾಗುತ್ತದೆ. ಇವೆಲ್ಲವೂ ಉದ್ಯಮದ ವೃತ್ತಿಯ ಬಗೆಗಿನ ಬರಹಗಳು.

ಸಾಹಿತ್ಯವೆನ್ನುವುದು ಪುಟಗಳನ್ನು ತುಂಬಿಸುವ ಕಾರ್ಖಾನೆಯಲ್ಲ. ಹಾಗಾಗಿಯೇ ಪ್ರಕಾಶನ ಸಂಸ್ಥೆಯನ್ನು ಆರಂಭಿಸುವಾಗ ನಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ಪೇಪರ್ ಕೊಳ್ಳುವ ಖರ್ಚು, ಮುದ್ರಣದ ಖರ್ಚು ಎಲ್ಲವನ್ನೂ ಗಮನದಲ್ಲಿರಿಸಿಕೊಂಡೇ ನಾವು ಪ್ರಕಾಶನಕ್ಕೆ ಕೈ ಹಾಕುತ್ತೇವೆ. ನಮ್ಮ ಪ್ರಕಾಶನದಲ್ಲಿ ರಾಷ್ಟ್ರೀಯವಾದಿ ಧೋರಣೆಯ ಪುಸ್ತಕಗಳು ಬರಹಗಳು, ಅಕಾಡೆಮಿಕ್ ಬರಹಗಳು, ಮತ್ತು ಸಾಹಿತ್ಯವನ್ನು ಅಭ್ಯಸಿಸುವ ಉತ್ತಮ ಮೌಲ್ಯವನ್ನು ಅಳವಡಿಸಿಕೊಂಡ ಲೇಖಕರ ಬರಹಗಳನ್ನು ಹೆಚ್ಚಾಗಿ ಪ್ರಕಾಶಗೊಳಿಸುವ ಉದ್ದೇಶವೇ ನಮ್ಮ ಗುರಿಯಾಗಿದೆ. ಕೇವಲ ರಂಜನೆಗಾಗಿ ಪುಸ್ತಕಗಳು ಎನ್ನುವ ಧೋರಣೆಯನ್ನು ಬದಿಗಿರಿಸಿ ಬುದ್ಧಿಪ್ರಚೋದಕ ಬರಹಗಳನ್ನು ಜನಕ್ಕೆ ತಲುಪಿಸುವುದು ನಮ್ಮ ಸಂಸ್ಥೆಯ ತತ್ತ್ವವಾಗಿದೆ. ಶ್ರೀ ಡಿವಿಜಿ ಯವರು ಹೇಳಿದಂತೆ ಸತ್ಯದಿಂದ ಮಹಾ ಸಾಹಿತ್ಯ , ತಪಸ್ಸಿನಿಂದ ಸತ್ಯದರ್ಶನ, ತಪ್ಪಸ್ಸನ್ನು ಮಾಡದೆ ಮೆದುಳನ್ನು ಆಯಾಸ ಪಡಿಸದೆ ಸತ್ಯ ದರ್ಶನವಾಗುವುದಿಲ್ಲ. ನಮ್ಮ ಲೇಖನಗಳೂ ಬರಹಗಳು ಆ ಬಗೆಯ ನಿಷ್ಟೆಯಿಂದ ಕೂಡಿರಲಿ ಎಂಬುದು ನಮ್ಮ ಅಭಿಮತ. ಡೆನ್ ಪ್ರಕಾಶನಕ್ಕೆ ನಿಮ್ಮ ಹಾರೈಕೆಯಿರಲಿ. ಪುಸ್ತಕಗಳನ್ನು ಕೊಂಡು ಓದಿರಿ.
ನಿಮ್ಮ,
ಹರೀಶ್ ಆತ್ರೇಯ

 

9036709599

dwijodaya@gmail.com

www.denhym.com