ಸಂಪಾದಕೀಯ
ಲೇಖನ: ವೀಣಾ ಕುಲಕರ್ಣಿ
ಲೇಖನ: ವೀಣಾ ಕುಲಕರ್ಣಿ
ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.
ಆರಂಭಿಕ ದಿನಗಳು ಮತ್ತು ಪ್ರೇರಣೆ
ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.
ಮೇಘಕೃಷ್ಣಾಜಿನಧರಾ ಧಾರಾಯಜ್ಞೋಪವೀತಿನಃ|
ಮಾರುತಾಪೂರಿತಗುಹಾಃ ಪ್ರಾಧೀತಾ ಇವ ಪರ್ವತಾಃ||
ಆತ್ಮೀಯ ದ್ವಿಜೋದ್ಯಮಿಗಳೇ,
ಮತದಾನ ಮಾಡಿ ಜವಾಬ್ದಾರಿಯನ್ನು ಪೂರೈಸಿದ್ದಾಗಿದೆ. ನಮ್ಮ ಕೆಲಸ ಅಷ್ಟಕ್ಕೇ ಸೀಮಿತವಾಗದಂತೆ ಮುನ್ನಡೆಯುವುದರಲ್ಲಿ ದೇಶದ ಹಿತವಿದೆ. ಮತದಾನ ನಮ್ಮ ಹಕ್ಕು ಎನ್ನುವುದಕ್ಕಿಂತ ಜವಾಬ್ದಾರಿಯೆಂದೇ ನಾವೆಲ್ಲರೂ ಭಾವಿಸಿದ್ದೇವೆ. ಉತ್ತಮ ಆಡಳಿತವಿದ್ದರೆ ದೇಶವು ಮುಂದುವರೆಯುವುದರಲ್ಲಿ ಅನುಮಾನವಿಲ್ಲ. ಉದ್ಯಮದ ದೃಷ್ಟಿಯಿಂದ ಗಮನಿಸಿದಾಗ ದೇಶಕ್ಕೆ ಬಹುದೊಡ್ಡ ಕೊಡುಗೆ ಉದ್ಯಮಿಗಳದ್ದೇ ಆಗಿದೆ. ಕೃಷಿಯನ್ನೂ ಒಳಗೊಂಡಂತೆ ಉದ್ಯಮವು ಆಡಳಿತ ನಡೆಸುವವರ ಜೊತೆ ಜೊತೆಯಾಗಿ ಕಾರ್ಯನಿರ್ವಹಿಸುತ್ತದೆ. ತೆರಿಗೆ ಪಾವತಿಯಿಂದ ಆದಿಯಾಗಿ ಜನ ಸಂಪರ್ಕದವರೆಗೆ ಉದ್ಯಮವು ಅನೇಕ ವಿಭಾಗಗಳಲ್ಲಿ ತೆರೆದುಕೊಳ್ಳುತ್ತದೆ. ನಿರುದ್ಯೋಗ, ಉತ್ಪನ್ನಗಳ ಮಾರುಕಟ್ಟೆ, ಜನಸ್ನೇಹೀ ಸೇವೆಗಳು, ಇಷ್ಟೇ ಅಲ್ಲದೆ ಸಿ ಎಸ್ ಆರ್ ಫಂಡ್ ಗಳಿಂದ ಗ್ರಾಮೋದ್ಧಾರ ಮತ್ತಿತರ ಕಾರ್ಯಕ್ರಮಾಗಳಲ್ಲಿ ಉದ್ಯಮವು ಸರಕಾರದ ಜೊತೆಗೆ ಹೆಗಲಾಗಿ ನಿಲ್ಲುತ್ತದೆ. ಹಾಗಿರುವಾಗ ಸರಕಾರವನ್ನು ನೇಮಿಸುವ ಜವಾಬ್ದಾರಿ ಉದ್ಯಮಕ್ಕೂ ಇದೆ.
ಹೊಸ ಕೈಗಾರಿಕೆಗಳನ್ನು ಅೆಥವಾ ಉದ್ಯಮವನ್ನು ಆರಂಭಿಸುವಾಗ ಸರಕಾರದ ನೀತಿ ನಿಬಂಧನೆಗಳನ್ನು ಗಣನೆಗೆ ತೆಗೆದುಕೊಂಡು, ಸರಕಾರ ಕೊಡಮಾಡುವ ಸರ್ಟಿಫಿಕೇಟ್ ಗಳನ್ನು ಜೊತೆಗಿರಿಸಿಕೊಂಡು ಉದ್ಯಮವು ಗ್ರಾಹಕ ಅಥವಾ ಜನಸ್ನೇಹಿ ಆಗುವಂತೆ ಮಾಡಲು ತಯಾರಿ ನಡೆಸುತ್ತದೆ. ಪ್ರತಿ ವರ್ಷ ಉದ್ಯಮದ ವಿವರಗಳನ್ನು ಸರಕಾರಕ್ಕೆ ನೀಡುತ್ತಾ ಪಾರದರ್ಶಕತೆಯನ್ನು ಪ್ರದರ್ಶಿಸುತ್ತದೆ. ಉದ್ಯಮವು ಸರಕಾರದ ಅಧೀನವಲ್ಲದಿದ್ದರೂ ವಂಚಕ ಉದ್ಯಮಿಗಳಿಂದ ಗ್ರಾಹಕ ಮತ್ತು ನೌಕರರಿಗೆ ಮೋಸವಾಗದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ. ಈ ಎಲ್ಲಾ ಕಾರಣಗಳಿಗೆ ಉದ್ಯಮ ಮತ್ತು ಸರಕಾರ ಒಂದಕ್ಕೊಂದು ಹೆಣೆದುಕೊಂಡ ಸಂಸ್ಥೆಗಳಾಗಿವೆ. ಉದ್ಯಮವು ಪಾರಲಲ್ ಆಗಿ ಸರಕಾರವನ್ನು ರಚಿಸಬಾರದು. ಸರಕಾರವನ್ನೇ ನಿಯಂತ್ರಿಸುವ ಮಟ್ಟಕ್ಕೆ ಅಥವಾ ಕೃತ್ಯಕ್ಕೆ ಹೋಗಬಾರದು. ಇಡಿಯ ದೇಶಕ್ಕೆ ಅದು ಮಾರಕ. ಯಾವುದೇ ಸಂಸ್ಥೆಯು ನಿಯಮ ಮೀರಿ ನಡೆಯುತ್ತಿದ್ದರೆ ಅದಕ್ಕೆ ದಂಡನೆಯನ್ನು ನೀಡುವ ಅಧಿಕಾರವು ದೇಶ ಹಿತವನ್ನು ಕಾಯುವ ಸಂಸ್ಥೆಗಿರಬೇಕು. ಅದನ್ನು ಸರಕಾರವೆನ್ನಬಹುದು. ಹಾಗಾದರೆ ಈ ಸರಕಾರವನ್ನು ಆರಿಸುವ ನಮ್ಮ ಜವಾಬ್ದಾರಿ ಎಷ್ಟು ದೊಡ್ಡದು?
ಪ್ರತಿನಿಧಿಯನ್ನು ಆರಿಸುವ ನಾವುಗಳು ಎಚ್ಚರಿಕೆಯಿಂದಲೇ ಮತದಾನ ಮಾಡಬೇಕಾಗುತ್ತದೆ. ಪ್ರತಿನಿಧಿಯಾದವನು ತನ್ನ ಪ್ರಜೆಗಳಿಂದ ವಿಚಾರಗಳನ್ನು ಸ್ವೀಕರಿಸಿ ನಂತರ ಸ್ವಂತ ವಿವೇಚನೆಯಿಂದ, ನಿರ್ಧಾರಗಳನ್ನು ದೇಶಹಿತಕ್ಕಾಗಿಯೇ ಆಚರಿಸಬೇಕು. ಅಂತಹ ಬುದ್ಧಿಶಕ್ತಿಯುಳ್ಳ, ಸ್ವಂತ ಅಭಿಪ್ರಾಯಗಳಿಗೋಸ್ಕರ ಕಾರ್ಯ ನಿರ್ವಹಿಸದ ಮತ್ತು ದೇಶವನ್ನು ಮುನ್ನಡೆಸುವುದನ್ನೇ ಗುರಿಯಾಗಿರಿಸಿಕೊಳ್ಳುವ ಸಾಮರ್ಥ್ಯವುಳ್ಳ ವ್ಯಕ್ತಿಯನ್ನು ಆರಿಸಬೇಕಿರುವುದು ನಮ್ಮ ಆದ್ಯತೆಯಾಗಿದೆ. ನಿಸ್ವಾರ್ಥ ಮತ್ತು ನಿರ್ಮೋಹ ವ್ಯಕ್ತಿ ದೇಶದ ಶಕ್ತಿಯಾಗಬಲ್ಲ. ಅವನಿಂದ ನೌಕರಿಗಳ ಹಂಚಿಕೆಯಾಗಲೀ, ಉದ್ಯಮದ ಪರವಾನಗಿಗಳಾಗಲೀ, ರಿಸರ್ವೇಶನ್ ಗಳಲ್ಲಾಗಲೀ ಮೋಸವಾಗದು.
ಈ ಎಲ್ಲಾ ಅಭ್ಯುದಯವಾಗಬೇಕಾದರೆ ಉನ್ನತಾಲೋಚನೆಯ ವ್ಯಕ್ತಿ ಪ್ರಧಾನ ಮಂತ್ರಿಯ ಸ್ಥಾನದಲ್ಲಿರಬೇಕು. ಅಂತಹ ವ್ಯಕ್ತಿಯನ್ನು ಪ್ರಜೆಗಳು ಆರಿಸಬೇಕು. ’ವಿಶಸ್ತ್ವಾ ಸರ್ವಾ ವಾಂಛತು| ಮಾತ್ವದ್ರಾಷ್ಟ್ರಮಧಿಭ್ರಶತ್ ’ ಎನ್ನುವ ವೇದ ಮಂತ್ರವು ರಾಷ್ಟ್ರವೇ ಆ ರಾಜನನ್ನು (ಪ್ರಸಕ್ತ ಸನ್ನಿವೇಶದಲ್ಲಿ ಪ್ರಧಾನಿಯನ್ನು) ಬಯಸಬೇಕು, ಪ್ರಜೆಗಳೇ ಆ ರಾಜನನ್ನು ಬಯಸಬೇಕು ಎನ್ನುತ್ತದೆ. ರಾಮಾಯಣದಲ್ಲಿ ಬರುವ ’ಯದೀದಂ ಮೇನುರೂಪಾರ್ಥಂ ಮಯಾ ಸಾಧು ಸಮಂತ್ರಿತಂ| ಭವಂತೋ ಮೇನುಮನ್ಯಂತಾಂ ಕಥಂ ವಾ ಕರವಾಣ್ಯಹಂ|| ಎನ್ನುತ್ತಾನೆ ದಶರಥ. ಪ್ರಜೆಗಳ ಸಮ್ಮತಿಯನ್ನು ತೆಗೆದುಕೊಂಡೇ ರಾಮನನ್ನು ಆರಿಸುತ್ತಾನೆ.
Sovereginty Can no longer be said to reside in a determinate person or persons, but in that impalpable congeries of the hopes and fears of a people bound together bu common interest and sympathy, which we call the common will. – T H Green
ಸಾರ್ವಭೌಮತ್ವವೆನ್ನುವುದು ಒಬ್ಬರಲ್ಲಿ ಅಥವ ಕೆಲವು ಜನರಲ್ಲಿ ಮಾತ್ರವೇ ಇರುವುದಿಲ್ಲ. ಎಲ್ಲರಿಗೂ ಒಳಿತಾಗಲೆಂಬ ಮನಸ್ಸಿನಲ್ಲಿ ಹುಟ್ಟಿ, ಪರರ ಬಗೆಗೆ ಅಭಿಮಾನವುಳ್ಳವರಾದ ಪ್ರಜೆಗಳಲ್ಲಿ ಅದು ಬೆಳೆದು ಜನರಲ್ಲಿರುವ ನಂಬಿಕೆ, ಭೀತಿಗಳ ನ್ನು ನಾವು ಸಾರ್ವಜನಿಕ ಎನ್ನುತ್ತೇವೆಯೋ ಅಲ್ಲಿ ರಾಜ್ಯಶಕ್ತಿ ಇರುತ್ತದೆ ಎನ್ನುವುದು ಟಿ ಎಚ್ ಗ್ರೀನ್ ನ ಮನೋಗತ. ಇದು ಸಾರ್ವಕಾಲಿಕ, ಸಾರ್ವಜನಿಕ ಮತ್ತು ಸಾರ್ವದೇಶಿಕವಾದ ಸತ್ಯವಾಗಿದೆ. ನಾವೆಲ್ಲರೂ ನಮ್ಮ ಮತದಾನದ ಮೂಲಕ ಸರಿಯಾದ ವ್ಯಕ್ತಿಯನ್ನು ಆರಿಸಿದ್ದೇವೆ ಎನ್ನುವುದು ದ್ಚಿಜ ತಂಡದ ಮನೋಗತ
ನಮಸ್ಕಾರ
ಹರೀಶ್ ಆತ್ರೇಯ
9036709599
dwijodaya@gmail.com
www.denhym.com
Welcome to Dwija entrepreneurs Network!