ಸಂಪಾದಕೀಯ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಮೇಘಕೃಷ್ಣಾಜಿನಧರಾ ಧಾರಾಯಜ್ಞೋಪವೀತಿನಃ|
ಮಾರುತಾಪೂರಿತಗುಹಾಃ ಪ್ರಾಧೀತಾ ಇವ ಪರ್ವತಾಃ||

ಮಹಾಭಾರತದ ವಿದುಲಾಳ ಪಾತ್ರ ವಿಭಿನ್ನವಾದದ್ದು. ಸೋತ ಮಗನಿಗೆ ಶಕ್ತಿಯನ್ನು ಕೊಡುವ ಮತ್ತು ಅವನನ್ನು ಜರಿಯುತ್ತಲೇ ಅವನಲ್ಲಿ ಛಲವನ್ನು ಹುಟ್ಟಿಸುವ ಪಾತ್ರ ವಿದುಲಾಳದ್ದು. ಅಂತಹ ಮಹಾನ್ ತಾಯಂದಿರಿಗೆ ನನ್ನ ನಮಸ್ಕಾರಗಳು. ಪರೀಕ್ಷೆಯ ಕಾಲ ಬರುತ್ತಿದೆ. ಎಲ್ಲರೂ ಪರೀಕ್ಷೆಗೆ ಸಿದ್ಧರಾಗುತ್ತಿರಬೇಕಾದರೆ ವಿದುಲಾ ನೆನಪಾಗಿಬಿಟ್ಟಳು. ಮಾರ್ಚ್ ತಿಂಗಳಿನಲ್ಲಿ ಮಹಿಳೆಯರ ದಿನಾಚರಣೆಯೂ ಸೇರಿ ಸ್ತ್ರೀ ಶಕ್ತಿ ಮತ್ತಷ್ಟು ಪ್ರಬಲವಾಗಿ ಹೊಮ್ಮುತ್ತಿದೆ. ತಂದೆಯಾದವನು ಬೈದು ಬುದ್ಧಿ ಹೇಳಿದರೆ ತಾಯಿಯಾದವಳು ಬೈಯುವುದೂ ಹೌದು ತಲೆ ಸವರಿ ಮಡಿಲಲ್ಲಿ ಮಲಗಿಸಿಕೊಂಡು ಶಕ್ತಿಯನ್ನೂ ತುಂಬಿಬಿಡುತ್ತಾಳೆ. ಪ್ರಾಯಃ ಸ್ತ್ರೀತ್ತ್ವದ ಲಕ್ಷಣವೇ ಮಮತೆ, ಕರುಣೆ, ಧೈರ್ಯ. ನನಗೇನೂ ಬೇಡವೆಂದು ಗಂಡು ಹೊರಟುಬಿಡಬಹುದು ಆದರೆ ಹೆಣ್ಣು ಬಿಡಲಾರಳು. ಪ್ರಕೃತಿಯೇ ತಾನಾದ ಅವಳಿಗೆ ಎಲ್ಲವೂ ಹಸಿರೇ. ಬಿತ್ತಿ ಬೆಳೆದು ಫಸಲು ಕೊಟ್ಟು ಸಮಾಜಕ್ಕೆ ಒಂದಷ್ಟು ಶಕ್ತಿಯುತ ತಳಿಯನ್ನು ಕೊಡುವ ತಾಯಂದಿರು ಅದೆಷ್ಟೋ.

ಭಾರತದಂತಹ ಪ್ರಬುದ್ಧ ದೇಶದಲ್ಲಿ ಮಹಿಳೆಯು ದೇಶದ ಉನ್ನತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾಳೆ. ಪರಂಪರೆಯನ್ನು ದಾಟಿಸುತ್ತಾ, ಸಂಸ್ಕೃತಿಯನ್ನು ಬೆಳೆಸುತ್ತಾ, ಸಂಸಾರವನ್ನು ಕಟ್ಟಿ ಇಡಿಯ ಸಮಾಜವನ್ನು ಪೋಷಿಸುವ ಮಹೋನ್ನತ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಳೆ. ಸನಾತನ ಪರಂಪರೆಯನ್ನು ಗಮನಿಸಿದರೆ ಉದ್ಯಮದಲ್ಲಿ ಮಹಿಳೆಯರೇ ಮುಂದಡಿಯಿಡುತ್ತಿದ್ದುದು ಕಂಡುಬರುತ್ತದೆ. ಹೊಸ ಅವಕಾಶದ ಬಗೆಗೆ ಯೋಚಿಸುತ್ತಿದುದು ಹೆಣ್ಣು, ಅದನ್ನು ಅನುಷ್ಠಾನಕ್ಕೆ ತರುತ್ತಿದ್ದುದು ಗಂಡು. ಕಗ್ಗತ್ತಲೆಯ ಕಾಡಿನಲ್ಲಿ ಕಾತ್ಯಾಯನಿ, ಗಾರ್ಗಿಯಂತಹ ಮಹಾನ್ ಪ್ರತಿಭೆಗಳು ಮತ್ತೊಂದು ಗುರುಕುಲಕ್ಕೆ ಹೋಗುತ್ತಿದ್ದರಂತೆ. ಹೀಗಿರುವ ಅವರ ಧೈರ್ಯ ಸಾಹಸಗಳು ಇಂದಿಗೂ ಅನುಸರಣೀಯ.

ಸುತ್ತಾ ವಿದ್ರೋಹಿಗಳಿದ್ದೂ, ದ್ವೇಷಿಸುವವರಿದ್ದೂ, ಕುಂತಿಯಂತಹ ಮಹಾಮಾತೆ ತನ್ನ ಮಕ್ಕಳಿಗಾಗಿ ವಿರೋಧಿಗಳ ಜಾಗದಲ್ಲೇ ನೆಲೆಯೂರಿದ್ದು, ಅಪಹರಿಸಿದವನ ದೇಶದಲ್ಲಿ ಧೈರ್ಯಗೆಡದೆ ರಾಮನಿಗಾಗಿ ಕಾದಿದ್ದು, ತನ್ನ ಕುಲದ ಮರ್ಯಾದೆಯನ್ನು ಸರ್ವಥಾ ಕಾಯ್ದ ಸಾಧ್ವಿ ಸೀತೆ ಇವರುಗಳು ಉದಾಹರಣೆಗೆ ಸಿಗುವಂತಹವರು. ಪ್ರಸ್ತುತ ಸನ್ನಿವೇಶದಲ್ಲಿ ಸಂಸ್ಕೃತಿ , ದರ್ಶನ ಮತ್ತು ಆಲೋಚನೆಗಳನ್ನು ಮುನ್ನಡೆಸುವ ಹೊಣೆ ಎಲ್ಲರದ್ದೂ ಆಗಿದೆ. ಹಾಗಿದ್ದಾಗ್ಯೂ ಮುಂಚೂಣಿಯಲ್ಲಿ ನಿಲ್ಲಬಲ್ಲವರು ಸ್ತ್ರೀಯರೇ ಆಗಿದ್ದಾರೆ. ಉದ್ಯಮವನ್ನು ನಡೆಸುವ ಮತ್ತು ಉದ್ಯೋಗಿಯಾಗಿ ಪ್ರಾಮಾಣಿಕತೆಯನ್ನು ಮೆರೆಯುವ ಸ್ತ್ರೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲ ಅಪವಾದಗಳಿದ್ದರೂ ವಿವಾದರಹಿತರಿಗೆ ಕೊರತೆಯಿಲ್ಲ.

ಈ ತಿಂಗಳ ಸಂಚಿಕೆ ಮಹಿಳೆ ಮತ್ತು ಮಹಿಳಾ ಉದ್ಯಮಿಗಳಿಗೆ ಮೀಸಲು. ಹೂಬತ್ತಿ ಹೊಸೆಯುವ ಮಹಿಳೆಯಿಂದಾದಿಯಾಗಿ ದೊಡ್ಡ ಕಂಪನಿಗಳನ್ನು ನಡೆಸುವ ಅನೇಕ ಮಹಿಳೆಯರು ನಮ್ಮ ಸಮುದಾಯದಲ್ಲಿದ್ದಾರೆ. ಹೊಸ ಬಗೆಯ ಉದ್ಯಮವನ್ನು ಜೋಡಿಸಿಕೊಂಡು ಹೋಗುವ ಅಥವಾ ಇರುವ ಉದ್ಯಮಕ್ಕೆ ಹೊಸ ರೂಪ ಕೊಡುವ ಅನೇಕ ಮಹಿಳಾಮಣಿಗಳು ನಮ್ಮ ನಡುವೆಯಿದ್ದಾರೆ. ಅವರೆಲ್ಲರನ್ನೂ ಪರಿಚಯಿಸುವ ಕೆಲಸವನ್ನು ನಮ್ಮ ಪತ್ರಿಕೆ ಮಾಡಲಿದೆ. ಹಲವು ವೇದಿಕೆಗಳ ಮೂಲಕ ಸಾಧ್ಯವಾದಷ್ಟೂ ಮಹಿಳಾ ಉದ್ಯಮಿಗಳನ್ನು ಗ್ಲೋಬಲ್ ಹಂತಕ್ಕೆ ತರುವುದು ನಮ್ಮ ಧ್ಯೇಯವಾಗಿದೆ. ಉದ್ಯೋಗಿಗಳಿಂದ ಉದ್ಯಮಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಉತ್ತಮವಾದ ವೇದಿಕೆಯನ್ನು ಎಲ್ಲರಿಗೆ ಕೊಡುವಂತಾದರೆ ಸಶಕ್ತ ಭಾರತಕ್ಕೆ ನಾಂದಿ ಹಾಡಿದಂತೆಯೇ.

 

9036709599

dwijodaya@gmail.com

www.denhym.com