ಸಂಪಾದಕೀಯ
ಲೇಖನ: ವೀಣಾ ಕುಲಕರ್ಣಿ
ಲೇಖನ: ವೀಣಾ ಕುಲಕರ್ಣಿ
ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.
ಆರಂಭಿಕ ದಿನಗಳು ಮತ್ತು ಪ್ರೇರಣೆ
ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.
ಮೇಘಕೃಷ್ಣಾಜಿನಧರಾ ಧಾರಾಯಜ್ಞೋಪವೀತಿನಃ|
ಮಾರುತಾಪೂರಿತಗುಹಾಃ ಪ್ರಾಧೀತಾ ಇವ ಪರ್ವತಾಃ||
ನಲ್ವತ್ತು ವರ್ಷದ ವ್ಯಕ್ತಿಯೊಬ್ಬ ತನ್ನ ಭವಿಷ್ಯವನ್ನು ತಿಳಿದುಕೊಳ್ಳಬಯಸಿ ಒಬ್ಬ ವೈಜ್ಞಾನಿಕ ಜ್ಯೋತಿಷಿಯ ಬಳಿ ಹೋಗಿ ತನ್ನ ಕಷ್ಟಗಳನ್ನು ಹೇಳಿಕೊಂಡನಂತೆ. ಇವನು ತನ್ನ ಕಷ್ಟವನ್ನು ಹೇಳುವ ಮೊದಲೇ ಆತ ಮೂರು ಮಾತುಗಳನ್ನು ಹೇಳಿದ, ’ ನಿಮ್ಮ ಮನಸ್ಸಿನಲ್ಲಿ ಸಮಸ್ಯೆಯೊಂದು ಕಾಡುತ್ತಿದೆ ಅದಕ್ಕೆ ಪರಿಹಾರ ಹುಡುಕಿಕೊಂಡು ಇಲ್ಲಿಗೆ ಬಂದಿದ್ದೀಯ, ಹೌದಾ?, ನಿಮ್ಮ ಮನೆಯಲ್ಲಿ ಯಾರೋ ಒಬ್ಬರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಹೌದಾ?, ನಿನ್ನನ್ನು ಹಿಂದಕ್ಕೆಳೆಯಲು ನಿನ್ನ ಪರಿಚಿತರೇ ಸಂಚು ಹೂಡುತ್ತಿದ್ದಾರೆ ಹೌದಾ?’ ಇವೆಲ್ಲವನ್ನೂ ಕೇಳಿಸಿಕೊಂಡವನು ಆಶ್ಚರ್ಯ ಹೊಂದಿ ಈತ ತ್ರಿಕಾಲ ಜ್ಞಾನಿಯೇ ಇರಬೇಕೆಂದು ತಿಳಿದು ಕಾಲಿಗೆ ಬಿದ್ದು ಆತ ಕೊಟ್ಟ ಪರಿಹಾರ ರೂಪದ ವಸ್ತುವನ್ನು ಧರಿಸಿಕೊಂಡೇ ಓಡಾಡತೊಡಗಿದ. ಒಮ್ಮೆ ಆ ವಸ್ತುವನ್ನು ಧರಿಸಲು ಮರೆತುಹೋದ. ಆ ದಿನವೆಲ್ಲಾ ಚಡಪಡಿಕೆ, ಸುಸ್ತು, ಮೀಟಿಂಗ್ ಸರಿಯಾಗಿ ಆಗದೆ ಪ್ರಜ್ಞಾಹೀನನಾದ. ಅದರ ಚಿಕಿತ್ಸೆಗೆಂದು ನಮ್ಮ ಬಳಿ ಬಂದಾಗ ತಿಳಿದದ್ದು. ಆ ವಸ್ತುವಿನ ಬಗೆಗೆ ಅಬ್ಸೆಷನ್ ಉಂಟಾದದ್ದು. ಮೂರು ತಿಂಗಳ ಕಾಲ ಆತನನ್ನು ಮೊದಲಿನ ಹಾಗೆ ಮಾಡುವಲ್ಲಿ ಸಾಕುಬೇಕಾಯ್ತು.
ಬಂಧುಗಳೇ ಉದ್ಯಮದಲ್ಲಿ ಕೆಲವೊಮ್ಮೆ ನಂಬಿಕೆಗಳು ಅತಿಯಾಗಿ ಕೆಲಸ ಮಾಡುತ್ತವೆ. ಎಷ್ಟೋ ಉದ್ಯಮಿಗಳಿಗೆ ಯಾವುದೋ ಒಂದು ವಸ್ತು, ಮಾತು, ಪದ, ಬಣ್ಣ ಲಕ್ಕಿ ಎನಿಸಿ ಅದನ್ನೇ ಅವಲಂಬಿಸಿಬಿಡುತ್ತಾನೆ. ನಂಬಿಕೆ ಒಳ್ಳೆಯದೇ ಆದರೆ ಅದೇ ನನ್ನ ಏಳ್ಗೆಗೆ ಕಾರಣವೆನ್ನುವುದು ಮೂಢತೆ. ಕಳೆ ಆರು ತಿಂಗಳಲ್ಲಿ ಸುಮಾರು 12 ಕೇಸ್ ಗಳನ್ನು ನೋಡಿದ್ದಾಗಿದೆ. ಇಂತಹ ನಂಬಿಕೆಗಳಿಂದ ಪ್ರಾಣ ಬಿಟ್ಟವರು ಮೂರು ಜನ ಮಿಕ್ಕವರು ಮಾನಸಿಕವಾಗಿ ತೊಂದರೆಗೊಳಗಾಗಿ ಸರಿಯಾದವರು. ಇದರಲ್ಲಿ ಇಬ್ಬರು ಮಕ್ಕಳೂ ಇದ್ದಾರೆ. ಸ್ವಂತ ಬಲದ ಮೇಲೆ ನಂಬಿಕೆಯಿರಬೇಕು. ಪುರುಷ ಪ್ರಯತ್ನವನ್ನು ಮಾಡಿ ನಂತರ ಲೋಕ ಸ್ನೇಹಕ್ಕೆ ಬದ್ಧರಾಗಿ ಮಿಕ್ಕಂತೆ ದೈವಾನುಗ್ರಹದಲ್ಲಿ ನಂಬಿಕೆಯಿರಲಿ. ಉದ್ಯಮವೆಂಬ ಯಜ್ಞಕ್ಕೆ ಬೇಕಿರುವುದು ತಪಸ್ಸು. ಅದಕ್ಕೆ ಉರುವಲಾಗಿ ಬೇಕಾಗುವುದು ಅಧ್ಯಯನ, ದಯೆ, ಕ್ಷಮೆ, ಅನಸೂಯತ್ವ, ಶುಚಿತ್ವ, ಅನಾಯಾಸ, ಮಂಗಳತ್ವ, ಜಿಪುಣತೆಯಿಲ್ಲದಿರುವುದು ಮತ್ತು ದುರಾಶೆಯಿಲ್ಲದಿರುವುದು ಇವೆಲ್ಲವೂ ಸಾಮಾನ್ಯ ಧರ್ಮದ ಸ್ವರೂಪಗಳು. ಎಲ್ಲವನ್ನೂ ಮೂಢನಂಬಿಕೆಯೆಂದು ತಳ್ಳಿ ಹಾಕಬೇಕಿಲ್ಲ ಆದರೆ ನಿರಂತರ ಅಧ್ಯಯನದ ಮೂಲಕ ಸ್ವಂತ ಬಲದ ಮೇಲೆ ನಂಬಿಕೆ ಹೊಂದುವುದು ಬೇಕು. ಹೊರಗಿನ ವಸ್ತುಗಳ ಮೇಲೆ ನಂಬಿಕೆಯು ಕೆಲವೊಮ್ಮೆ ನಮ್ಮನ್ನು ಮುಂದೆ ತಳ್ಳಿದರೂ ಅದೇ ನಮ್ಮ ಗೆಲುವಿಗೆ ಕಾರಣವೆಂದುಕೊಂಡರೆ ಮೌಢ್ಯವಾಗುತ್ತದೆ ಅಥವಾ ಮೂರ್ಖತ್ವವಾಗುತ್ತದೆ.
ಉದ್ಯಮದ ಮಟ್ಟಿಗೆ ಬೇಕಿರುವುದು ಆತ್ಮವಿಶ್ವಾಸ. ಅದನ್ನು ಸಿದ್ಧಿಸಿಕೊಳ್ಳಲು ಉದ್ಯಮದ ಕುರಿತಾಗಿ ಅಧ್ಯಯನ, ಉನ್ನತಿಗೇರುವ ನಿಟ್ಟಿನಲ್ಲಿ ತಪಸ್ಸು, ಎಲ್ಲರಲ್ಲೂ ದಯೆ, ಕ್ಷಮಿಸುವ ಗುಣ, ಮತ್ತೊಬ್ಬರ ಏಳ್ಗೆಗೆ ಕರುಬದಿರುವಿಕೆ, ಮಾಡುವ ಕೆಲಸದಲ್ಲಿ ಶುದ್ಧತೆ, ಆಯಾಸವಿಲ್ಲದೆ ದುಡಿಯುವ ಮನಸ್ಸು, ಸದಾ ಒಳಿತನ್ನೇ ಯೋಚಿಸುವ ಹೃದಯ, ಕೊಡುಗೈಯಾಗಿರುವುದು, ದುರಾಶೆಯಿಲ್ಲದಿರುವುದು. ಇವೆಲ್ಲವನ್ನೂ ಗೌತಮರು ’ ದಯಾ ಸರ್ವಭೂತೇಷು ಕ್ಷಾಂತಿರನಸೂಯಾ, ಶೌಚಾಮನಾಯಾಸೋ ಮಂಗಲಮಕಾರ್ಪಣ್ಯಮಸ್ಪೃಹೇತಿ’ ಎನ್ನುತ್ತಾರೆ. ಇವು ಅಷ್ಟ ಗುಣಗಳು. ಇವುಗಳನ್ನು ಸಿದ್ಧಿಸಿಕೊಂಡವನಿಗೆ ಹೊರಗಿನ ವಸ್ತುಗಳ ಮೇಲೆ ಅವಲಂಬಿತನಾಗಬೇಕಿಲ್ಲ.
ದ್ವಿಜೋದಯ ಪತ್ರಿಕೆಯು 6000 ಸರ್ಕ್ಯುಲೇಷನ್ ಹೊಂದಿದ್ದು, ಭಾರತದಾದ್ಯಂತೆ ಓದುಗರನ್ನು ಹೊಂದಿದೆ. ಇದೇ ಅಲ್ಲದೆ ಪಿಡಿಎಫ್ ಸಾಫ್ಟ್ ಕಾಪಿಗಳ ಮೂಲಕ 13 ಲಕ್ಷ ಜನರನ್ನು ತಲುಪುತ್ತಿದೆ. ನವೋದ್ಯಮಿಗಳಿಗೆ ಮುಖ್ಯವಾಗಿ ಬ್ರಾಹ್ಮಣ ಉದ್ಯಮಿಗಳಿಗೆ ಉತ್ತಮ ವಾದ ವೇದಿಕೆಯನ್ನು ಒದಗಿಸುವಲ್ಲಿ ನಮ್ಮ ದ್ವಿಜ ತಂಡ ಕಾರ್ಯನಿರತವಾಗಿದೆ.
ಜಾಹೀರಾತು ವಿವರಗಳು – ಅರ್ಧ ಪುಟ – 2500 ಪೂರ್ಣ ಪುಟ 3500 . ಇದು ಪತ್ರಿಕೆಯ ಪುಟಗಳಲ್ಲಿ ಮಾತ್ರ ರಾರಾಜಿಸುವುದಿಲ್ಲ. ಇಲ್ಲಿ ಜಾಹೀರಾತು ನೀಡಿದವರಿಗೆ ಆ ತಿಂಗಳು ಡಿಜಿಟಲ್ ಮಾರ್ಕೆಟಿಂಗ್ ಉಚಿತವಾಗಿ ಮಾಡಲಾಗುತ್ತದೆ. ಕ್ಲೈಂಟ್ ಅನಾಲಿಸಿಸ್, ಗ್ರಾಹಕರನ್ನು ಗುರುತಿಸುವುದು , ಅವರಿಗೆ ನಿಮ್ಮ ಉತ್ಪನ್ನ ಅಥವಾ ಸೇವೆಗಳನ್ನು ತಲುಪಿಸುವುದು ಎಲ್ಲವನ್ನೂ ನಮ್ಮ ತಂಡ ನಿರ್ವಹಿಸುತ್ತದೆ.
ಹೆಚ್ಚಿನ ಮಾಹಿತಿಗೆ ವೀಣಾ – +91 99867 09502/ ಹರೀಶ್ ಆತ್ರೇಯ 9036709599/ ರನ್ನು ಸಂಪರ್ಕಿಸಿ
ಆತ್ಮೀಯರೇ,
ನಮ್ಮ ತಂಡದ ಸದಸ್ಯರ ರೋಸ್ಟರ್ (ಉದ್ಯಮ ವಿವರಣಾ ಪಟ್ಟಿ) ಯನ್ನು ನಮ್ಮ ಪತ್ರಿಕೆಯ ಜೊತೆಗೆ ಕಳುಹಿಸುವ ಕಾರ್ಯದಲ್ಲಿದ್ದೇವೆ. ನಿಮ್ಮ ವಿವರಗಳು ನಮ್ಮ ಗೂಗಲ್ ಫಾರ್ಮ್ ನಲ್ಲಿದ್ದರೆ ಅದನ್ನು ರೋಸ್ಟರ್ ಗೆ ತೆಗೆದುಕೊಳ್ಳಲಾಗುತ್ತದೆ.
ಇದುವರೆಗೆ ಗೂಗಲ್ ಫಾರ್ಮ್ ನಲ್ಲಿರುವವರ ಸಂಖ್ಯೆ 96 ಆಕ್ಟಿವ್ ಆಗಿ ಪೋಸ್ಟ್ ಹಾಕಿ ಜೊತೆಗಿರುವವರು ಕೇವಲ 35. ದ್ವಿಜ ವಾಟ್ಸಾಪ್ ಗುಂಪಿನಲ್ಲಿರುವವರು ಬರೋಬ್ಬರಿ 257.
ಹಾಗಾಗಿ ಕೇವಲ 35 ಜನರ ರೋಸ್ಟರ್ ಸಿದ್ಧವಾಗುತ್ತಿದೆ.
ರೋಸ್ಟರ್ ಎಲ್ಲಿ ಪ್ರಚಾರವಾಗುತ್ತದೆ ಮತ್ತು ಅದರಿಂದ ಮಾರ್ಕೆಟಿಂಗ್ ಹೇಗೆ ನಡೆಸಲಾಗುತ್ತದೆ?
• ಪತ್ರಿಕೆಯ ಜೊತೆಗೆ ರೋಸ್ಟರ್ 6000 ಜನರನ್ನು ತಲುಪುತ್ತದೆ ಮತ್ತು 12 ಲಕ್ಷ ಜನರನ್ನು ಸಾಫ್ಟ್ ಕಾಪಿ ಮುಖಾಂತರ ತಲುಪುತ್ತದೆ.
• ನಾವು ಹೋದ ಕಡೆಗಳಲ್ಲಿ ರೋಸ್ಟರ್ ನ್ನು ಒಯ್ದು ಕಾರ್ಪೋರೇಟ್ ಸಂಸ್ಥೆಗಳಲ್ಲಿ ಅಥವಾ ನಮ್ಮ ಕ್ಲೈಂಟ್ ಸ್ಥಳಗಳಲ್ಲಿ ನಮ್ಮ ತಂಡದ ಸದಸ್ಯರನ್ನು ನಮ್ಮದೇ ಉದ್ಯಮದ ಭಾಗವೆಂಬಂತೆ ಪ್ರೊಜೆಕ್ಟ್ ಮಾಡುತ್ತಾ ಅವರಿಗೆ ಹೆಚ್ಚು ರೆಫರಲ್ಸ್ ಬರುವಂತೆ ಮಾಡಲಾಗುತ್ತದೆ.
• ಪ್ರತಿ ಸಮಾರಂಭಗಳಲ್ಲಿ (ಇವೆಂಟ್ ) ಗಳಲ್ಲಿ ರೋಸ್ಟರ್ ಹಂಚಿ ಹೆಚ್ಚು ಜನರನ್ನು ತಲುಪುವಂತೆ ಮಾಡಲಾಗುತ್ತದೆ
• ಈ ಮೈಲ್ ಮಾರ್ಕೆಟಿಂಗ್ ಮೂಲಕ ಎಲ್ಲರ ಉದ್ಯಮಗಳನ್ನು ದೊಡ್ಡ ದೊಡ್ಡ ಕಂಪನಿಗಳಿಗೆ ತಲುಪುವಂತೆ ಮಾಡಲಾಗುತ್ತದೆ
• ವಾಟ್ಸಾಪ್ ಪ್ರತ್ಯೇಕ ಮಾರ್ಕೆಟಿಂಗ್ ಮೂಲಕ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಸಂಸ್ಥೆಗಳನ್ನೂ ತಲುಪುವಂತೆ ನೋಡಿಕೊಳ್ಳಲಾಗುತ್ತದೆ.
ರೋಸ್ಟರ್ ಗೆ ಸೇರಿಸುವುದಕ್ಕೆ ನಾವು ಆರಿಸಿಕೊಂಡ ಮಾನದಂಡಗಳು
ನಮ್ಮ ಸಭೆಗಳಿಗೆ ತಪ್ಪದೆ, ಸಾಧ್ಯವಾದಾಗಲೆಲ್ಲಾ ಬರುವುದು
ತಿಂಗಳಿನ ಶುಲ್ಕವನ್ನು ಪಾವತಿಸಿ ನಮ್ಮೊಂದಿಗೆ ಸಹಕರಿಸುವುದು
ಗುಂಪಿನಲ್ಲಿ ಪೋಸ್ಟ್ ಗಳನ್ನು ಹಾಕುವುದರ ಮೂಲಕ ಆಕ್ಟಿವ್ ಆಗಿರುವುದು
ಇತರೆ ಸದಸ್ಯರನ್ನೂ ಸಹ ಗೌರವಿಸಿ ಅವರ ಉದ್ಯಮಕ್ಕೂ ಮನ್ನಣೆ ಕೊಡುವುದು
ನಮ್ಮ ತಂಡದ ಸಮಾರಂಭಗಳಲ್ಲಿ ಜೊತೆಯಾಗಿ ನಿಂತು ಮುನ್ನಡೆಯುವುದು
ಅಗತ್ಯ ಸಲಹೆ ಸೂಚನೆಗಳನ್ನು ಕೊಡುತ್ತಾ ತಂಡವನ್ನು ಮುನ್ನಡೆಸುವುದು
ಹೊಸ ಪ್ರಾಜೆಕ್ಟ್ ಗಳನ್ನು ಹಂಚಿಕೊಂಡು ಬೆಳವಣಿಗೆಗೆ ಸಹಕರಿಸುವುದು
ತಪಸ್ಸು, ಎಲ್ಲರಲ್ಲೂ ದಯೆ, ಕ್ಷಮಿಸುವ ಗುಣ, ಮತ್ತೊಬ್ಬರ ಏಳ್ಗೆಗೆ ಕರುಬದಿರುವಿಕೆ, ಮಾಡುವ ಕೆಲಸದಲ್ಲಿ ಶುದ್ಧತೆ, ಆಯಾಸವಿಲ್ಲದೆ ದುಡಿಯುವ ಮನಸ್ಸು, ಸದಾ ಒಳಿತನ್ನೇ ಯೋಚಿಸುವ ಹೃದಯ, ಕೊಡುಗೈಯಾಗಿರುವುದು, ದುರಾಶೆಯಿಲ್ಲದಿರುವುದು.
ಮತ್ತೊಂದು ಗುಂಪಿಗೆ ಸೇರುವಂತೆ ಒತ್ತಾಯಿಸಿ ಪೋಸ್ಟ್ ಹಾಕುವ / ಸಂಪರ್ಕಿಸುವ ಕೆಲಸ ಮಾಡದಿರುವುದು.
ಅನುಮಾನಗಳಿದ್ದಲ್ಲಿ ದಯಮಾಡಿ ಸಂಪರ್ಕಿಸಿ.
9036709599
dwijodaya@gmail.com
www.denhym.com
Welcome to Dwija entrepreneurs Network!