ಸಂಪಾದಕೀಯ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಮೇಘಕೃಷ್ಣಾಜಿನಧರಾ ಧಾರಾಯಜ್ಞೋಪವೀತಿನಃ|
ಮಾರುತಾಪೂರಿತಗುಹಾಃ ಪ್ರಾಧೀತಾ ಇವ ಪರ್ವತಾಃ||

ವಾಲ್ಮೀಕಿ ಮುನಿಗಳ ಸಾಹಿತ್ಯದಲ್ಲಿ ಕಂಡುಬರುವ ಪ್ರಕೃತಿ ವರ್ಣನೆಯು ಅನುಪಮವಾದದ್ದು. ಇಂತಹ ಪ್ರಕೃತಿ ಮಹಾಮುನಿಗಳ ಕಾಲದಲ್ಲಿದ್ದುದಂತೂ ಹೌದೆನಿಸುತ್ತದೆ. ’ಕಪ್ಪನೆಯ ಆಗಸವೆಂಬ ಕೃಷ್ಣಾಜಿನವನ್ನು ಹೊದ್ದು, ಭೋರ್ಗರೆದು ಇಳಿವ ಬಿಳಿಯ ಜಲಪಾತದ ಧಾರೆಗಳೆಂಬ ಯಜ್ಞೋಪವೀತವನ್ನು ಧರಿಸಿ, ಪರ್ವತೋಪಮ ವಟುಗಳು ತಮ್ಮ ಗುಹೆಗಳಂತಿರುವ ಮುಖದಲ್ಲಿ ಸುಳಿದಾಡುವ ವಾಗ್ದ್ವಾರದ ಗಾಳಿಯ ಮೂಲಕ ವೇದಾಧ್ಯಯನವನ್ನು ಮಾಡುವಂತಿದೆ’ ಎನ್ನುತ್ತಾರೆ ವಾಲ್ಮೀಕಿ. ಪ್ರಕೃತಿಯೊಂದಿಗೆ ಭಾರತವು ಅಧ್ಯಾತ್ಮಿಕವಾಗಿಯೂ ಭೌತಿಕವಾಗಿಯೂ ಹೆಚ್ಚಿನ ಸಂಬಂಧವನ್ನು ಹೊಂದಿದೆ. ಅಹಂ ವೃಕ್ಷಸ್ಯ ರೇರಿವಾ ಎನ್ನುತ್ತಾ ವೃಕ್ಷಪೂಜೆಯಿಂದ, ನೀರು, ಪರ್ವತ, ಕಲ್ಲು, ಮಣ್ಣು ಎಲ್ಲವನ್ನೂ ದೇವರೆಂದೇ ಭಾವಿಸಿ ಪೂಜಿಸಿ ಗೌರವಿಸಿದೆ. ಜೂನ್ 5 ಪರಿಸರ ದಿನಾಚರಣೆಯನ್ನು ಆಚರಿಸಿದ ಮತ್ತು ಪರಿಸರದೊಂದಿಗೆ ಬೆರೆತ ಎಲ್ಲ ಓದುಗರಿಗೂ ಪರಿಸರ ದಿನಾಚರಣೆಯ ಶುಭಾಶಯಗಳು.

ದ್ವಿಜ ತಂಡವು ಪರಿಸರದಿನಾಚರಣೆಯನ್ನು ಗುಡಿಬಂಡೆಯಲ್ಲಿ ಚಂಡಿ ಹೋಮದ ಮೂಲಕ ಆಚರಿಸಿಕೊಂಡಿತು. ಶ್ರೀ ನಾಗೇಂದ್ರ ಭಟ್ ರವರ ಆಹ್ವಾನದ ಮೇರೆಗೆ ನಾವೆಲ್ಲಾ ಗುಡಿಬಂಡೆಗೆ ಹೋದಾಗಲೇ ನಮಗೆ ಅರಿವಾದದ್ದು ಅಲ್ಲಿನ ಫ್ಲೋರೈಡ್ ಸಮಸ್ಯೆ ಮತ್ತು ಅದನ್ನು ನಿವಾರಿಸಲು ಅವರು ಸಂಕಲ್ಪಿಸಿದ ಪ್ರಾಜೆಕ್ಟ್ ಗಳು. ಕಾಕತಾಳೀಯವಾಗಿ ಜೂನ್ ತಿಂಗಳ ಪರಿಸರ ಮಾಸಾಚರಣೆಯ ಸಂದರ್ಭದಲ್ಲೇ ನಾವು ಮತ್ತೂ ಪರಿಸರಕ್ಕೆ ಹತ್ತಿರವಾದೆವು. ಮತ್ತು ಮನುಷ್ಯನ ದುರಾಸೆಯ ಫಲವಾಗಿ ಆದ ಸಮಸ್ಯೆಗೆ ಉತ್ತರ ಹುಡುಕುವ ಮಹನೀಯರನ್ನು ಭೇಟಿಯಾದೆವು. ಮುಂದಿನ ದಿನಗಳಲ್ಲಿ ಅವರೊಂದಿಗೆ ಇಡೀ ದ್ವಿಜ ತಂಡ ಪ್ರಕೃತಿಯನ್ನು ಶುದ್ಧಿ ಮಾಡುವ ಮತ್ತು ಭಾರತದ ಭೂಪಟದಲ್ಲಿ ಅಧ್ಯಾತ್ಮದ ಮಹೋನ್ನತ ಕೇಂದ್ರವನ್ನು ಆರಂಭಿಸುವ ಯೋಜನೆಗಳಲ್ಲಿ ಕೈಜೋಡಿಸಲಿದೆ.

ಪ್ರಕೃತಿ ಸೃಷ್ಟಿಯ ಸ್ವಾಸ್ಥ್ಯವನ್ನು ಕಾಯುವುದರಲ್ಲಿ ನಿರತವಾಗಿರುತ್ತದೆ. ಮನುಜನ ಬದುಕಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಆರೋಗ್ಯವನ್ನು ಪ್ರಕೃತಿಯೇ ನೋಡಿಕೊಳ್ಳುತ್ತದೆ. ಅದೇ ರೀತಿ, ಪ್ರತಿಯೊಬ್ಬರ ದೈಹಿಕ ಆರೋಗ್ಯವನ್ನು ಕಾಯುವುದು ವೈದ್ಯರು. ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ಸತ್ಯ ನಿಷ್ಠೆ, ಪ್ರಾಮಾಣಿಕತೆಯಿಂದ ನಿಷ್ಪಕ್ಷಪಾತವಾಗಿ, ದಯಾಗುಣದಿಂದ ನಮ್ಮೆಲ್ಲರ ಆರೋಗ್ಯವನ್ನು ಕಾಯುವಂತಹ ವೈದ್ಯರಿಗೆ ದ್ವಿಜೋದಯ ತಂಡದಿಂದ ಶುಭಾಶಯಗಳು.

ಆತ್ಮೀಯರೇ,
ನನ್ನ ತಂದೆಯವರಾದ ಶ್ರೀ ಕೃಷ್ಣಮೂರ್ತಿಯವರು ದೈವಾಧೀನರಾಗಿ ವರ್ಷ ಕಳೆದಿದೆ. ಅವರ ನೆನಪಿನಲ್ಲಿ ವೈಕುಂಠ ಸಮಾರಾಧನೆಯು ನಡೆಯಲಿದೆ. ಸ್ಥಳ : ಶ್ರೀ ರಾಮೇಶ್ವರ ದೇವಸ್ಥಾನ ಹಳೇನಗರ ಭದ್ರಾವತಿ

ಅಶೇಷಭಾಷಾತ್ಮತಯಾ ತ್ವಯಾ ತದಾ||
ದೇವಾ ದೈವೀಂ ನರಾ ನಾರೀಂ ಶಬರಾಶ್ಚಾಪಿ ಶಾಬರೀಂ|
ತಿರ್ಯಂಚೋಪಿ ಚ ತೈರಶ್ಚೀಮ್ ಮೇನಿರೇ ಭಗವದ್ಗಿರಮ್||

 

9036709599

dwijodaya@gmail.com

www.denhym.com