ಸಂಪಾದಕೀಯ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ದ್ವಿಜೋದಯವು ಹೊಸ ಕ್ಯಾಲೆಂಡರ್ ವರ್ಷಕ್ಕೆ ಸಜ್ಜಾಗುತ್ತಿದೆ. ಕಳೆದ ವರ್ಷದ ನೆನಪುಗಳಲ್ಲಿ ಪತ್ರಿಕೆ ಆರಂಭವಾದ ನೆನಪು ಮಧುರ ಸ್ಮೃತಿ. ಪತ್ರಿಕೆಯ ಮೂಲ ಉದ್ದೇಶ, ಜ್ಞಾನಪ್ರಸರಣ ಮತ್ತು ಸಮುದಾಯದ ಉದ್ಯಮಿಗಳ ವ್ಯವಹಾರ ಪ್ರದರ್ಶನ. ಪತ್ರಿಕೆಗಳು ಕೇವಲ ಬೋಧನೆಯಲ್ಲಿ ತೊಡಗಬಾರದು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಂಡೇ ವರದಿಗಳನ್ನು ಮತ್ತು ಲೇಖನಗಳನ್ನು ತಯಾರಿ ಮಾಡಬೇಕೆಂಬುದೇ ನಮ್ಮ ಅಭಿಮತ. ನೇರನುಡಿ ಮತ್ತು ಟೀಕೆಗಳಿಗೆ ಈ ಪತ್ರಿಕೆಯು ತಕ್ಕುದಲ್ಲ. ಇಲ್ಲಿ ನಡೆಯುವುದು ಉದ್ಯಮದ ಪ್ರಸರಣ. ಅದೊಂದನ್ನೇ ಮುಖ್ಯವಾಗಿಟ್ಟುಕೊಂಡು ಪತ್ರಿಕೆಯು ತನ್ನ ವಾಚಕರ ಸಂಖ್ಯೆಯನ್ನು ಕೇವಲ ಆರು ತಿಂಗಳಲ್ಲಿ ನಾಲ್ಕು ಸಾವಿರ ಮುಟ್ಟಿದೆ. ಸಾಫ್ಟ್ ಕಾಪಿಯು ಸುಮಾರು ೧೩.೫ಲಕ್ಷ ದಾಟಿದೆ. ಈ ಪತ್ರಿಕೆಯಲ್ಲಿ ಜಾಹೀರಾತು ನೀಡುವ ಜಾಹೀರಾತುದಾರರಿಗೆ ಹೆಚ್ಚಿನ ಮಾರ್ಕೆಟಿಂಗ್ ಸೌಲಭ್ಯವನ್ನು ನೀಡುವುದು ಡೆನ್ ತಂಡದ ಪಾಲಿಗೆ ಸಂದಿದೆ. ಹೆಚ್ಚಿನ ಗ್ರಾಹಕರನು ಸೆಳೆಯುವ ಎಲ್ಲಾ ವೇದಿಕೆಗಳನ್ನು ಬಳಸಿಕೊಂಡು ಕಾರ್ಯಸಾಧಿಸುತ್ತಿದೆ ನಮ್ಮ ತಂಡ.

ಪ್ರಸ್ತುತ ಕಾಲಘಟದಲ್ಲಿ ವಿಷಯಪ್ರವಾಹವು ಪ್ರಳಯದಂತೆ ನುಗ್ಗುತ್ತಿದೆ. ಅಂತರ್ಜಾಲದಲ್ಲಿ ವಿಷಯಗಳು ಯಾವ ಎಗ್ಗಿಲ್ಲದೆ ಸುಳ್ಳುಗಳ / ಅರೆಸತ್ಯಗಳ ಮತ್ತು ಕೆಲವು ಪೂರ್ಣಸತ್ಯಗಳನ್ನು ಪೇರಿಸಿಕೊಳ್ಳುತ್ತಾ ಉಬ್ಬರಿಸಿಕೊಂಡಿವೆ. ಹೊಸ ತಲೆಮಾರಿನ ಪೀಳಿಗೆಗೆ ಯಾವುದು ಸತ್ಯ ಯಾವುದು ಅಲ್ಲವೆಂಬುದರ ತಿಳಿವು ಸಿಗುವುದು ಕಷ್ಟ. ಅದರಲ್ಲೂ ಎ ಐ ಯಂತಹ ಸಾಧನಗಳು ನಿಮ್ಮ ಮನಸ್ಸನ್ನು ಅರ್ಥೈಸಿಕೊಂಡು ನಿಮಗೆ ಬೇಕಾದ್ದನ್ನೇ ನೀಡುತ್ತದೆ, ಅದು ಸುಳ್ಳಾಗಿದ್ದರೂ ಸಹ. ಹೀಗಿರುವಾಗ ಪತ್ರಿಕಾ ಜವಾಬ್ದಾರಿಯು ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ. ಯಾವುದೇ ಲೇಖನವನ್ನು ಬರೆಯುವಾಗ ಅದರಲ್ಲಿನ ಸತ್ಯಾಂಶಗಳನ್ನು ಒಂದಕ್ಕೆರಡುಬಾರಿ ಪರಿಶೀಲಿಸಬೇಕಾಗುತ್ತದೆ. ಅಥೆಂಟಿಕ್ ಆದಂತಹ ಲೇಖನವು ದಾಖಲೆಯಾಗಿ ನಿಲ್ಲುತ್ತದೆ. ಇವುಗಳನ್ನು ತಳ್ಳಿಹಾಕುವುದಾಗಲೀ ಅಳಿಸಿಹಾಕುವುದಾಗಲೀ ಪತ್ರಿಕೆಗಳಿಗೆ ಸಾಧ್ಯವಿಲ್ಲ. ಆದರೆ ಅಂತರ್ಜಾಲಕ್ಕೆ ಫೇಕ್ ನ್ಯೂಸ್ ಗಳನ್ನು ಅಳಿಸುವುದು ಸುಲಭ. ಅದೇನೇ ಇರಲಿ ಪತ್ರಿಕೆಗಳ ಜವಾಬ್ದಾರಿ ಹೆಚ್ಚಿನದು.

ಪತ್ರಿಕೆಗೆ ಲೇಖನಗಳನ್ನು ಬರೆಯುವಾಗ ಮಾಡಿಕೊಳ್ಳುವ ತಯಾರಿಯೂ ಸಹ ಅತೀ ಮುಖ್ಯವಾದುದಾಗಿದೆ. ದ್ವಿಜೋದಯಕ್ಕೆ ಬರೆಯುವ ಲೇಖಕರು ವೃತ್ತಿನಿರತ, ಪರಿಣಿತರ ತಂಡವಾಗಿದೆ. ತಮ್ಮ ವೃತ್ತಿಯಲ್ಲಿ ಕನಿಷ್ಟ೫-೬ ವರ್ಷಗಳ ಅನುಭವವಿರುವರು ಪತ್ರಿಕೆಯಲ್ಲಿ ಬರೆಯುತ್ತಿದ್ದಾರೆ. ವಿಭಿನ್ನ ವಸ್ತುಗಳ, ವಿಷಯಗಳನ್ನು ಎಲ್ಲ ಸ್ಥರದ ಓದುಗರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುವ ಕೌಶಲವನ್ನು ರೂಢಿಸಿಕೊಂಡಿದ್ದಾರೆ. ಪತ್ರಿಕೆಯ ಗುಣಮಟ್ಟವು ದಿನೇ ದಿನೇ ಬೆಳೆಯುತ್ತಿದೆ. ಲೇಖನಗಳ ಗುಣಮಟ್ಟದ ಜೊತೆ ಜೊತೆಗೆ ಪತ್ರಿಕೆಯ ಮುದ್ರಣದ ಗುಣಮಟ್ಟವೂ ಸಹ ಉನ್ನತವಾದ ರೂಪಿನಲ್ಲಿ ಕಂಗೊಳಿಸುತ್ತಿದೆ. ಇದನ್ನು ಸಾಧಿಸುತ್ತಿರುವ ಬರಹಗಾರರನ್ನು ಮತ್ತು ಮುದ್ರಕರನ್ನು ಅಭಿನಂದಿಸುತ್ತೇವೆ.

ಜಾಹೀರಾತು ನೀಡಿ ಪತ್ರಿಕೆಯ ಏಳಿಗೆಗೆ ಮತ್ತು ತಮ್ಮ ವ್ಯವಹಾರವನ್ನು ಮತ್ತಷ್ಟು ತೀಕ್ಷ್ಣಗೊಳಿಸಿಕೊಳ್ಳುರುವ ಉದ್ಯಮಿಗಳಿಗೆ ನಮ್ಮ ಅಭಿನಂದನೆಗಳು. ನೀವಿಲ್ಲದೆ ಪತ್ರಿಕೆಯು ಎಲ್ಲರನ್ನೂ ತಲುಪಲು ಅಸಾಧ್ಯ. ಹೆಚ್ಚಾಗಿ ಜಾಹೀರಾತುಗಳು ಇಂಗ್ಲೀಷು ಭಾಷೆಯಲ್ಲಿಯೇ ಇದೆಯೆಂಬ ಮಾತು ಹಲವರು ಹೇಳಿದ್ದುಂಟು. ಹೆಚ್ಚಿನ ಜನರನ್ನು ತಲುಪಲು ಈ ವಿಧಾನವು ಅವಶ್ಯವಾಗಿದ್ದುದರಿಂದ ಈ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಭಾಷೆಯು ಸಂವಹನಕ್ಕಾಗಿಯೇ ಇರುವುದರಿಂದ ಅವನ್ನು ಬಳಸಿಕೊಳ್ಳಲಾಗಿದೆಯೇ ಹೊರತು ಉದ್ದೇಶಪೂರ್ವಕವಾಗಿ ಇಂಗ್ಲೀಷನ್ನು ತಂದಿಲ್ಲ.

ಅಶೇಷಭಾಷಾತ್ಮತಯಾ ತ್ವಯಾ ತದಾ||
ದೇವಾ ದೈವೀಂ ನರಾ ನಾರೀಂ ಶಬರಾಶ್ಚಾಪಿ ಶಾಬರೀಂ|
ತಿರ್ಯಂಚೋಪಿ ಚ ತೈರಶ್ಚೀಮ್ ಮೇನಿರೇ ಭಗವದ್ಗಿರಮ್||

ಎಲ್ಲಾ ಭಾಷೆಗಳೂ ದೇವವಾಣಿಯ ರೂಪಾಂತರಗಳೇ ಆಗಿವೆ. ಹಾಗೆಂದು ಇಂಗ್ಲೀಷನ್ನು ಅಗತ್ಯವಿದ್ದಷ್ಟು ಮಾತ್ರ ಬಳಸಿಕೊಳ್ಳಲಾಗಿದೆ. ಮಿಕ್ಕಂತೆ ಇಡೀ ಪತ್ರಿಕೆಯು ಎರಡು ಭಾಷೆಗಳಲ್ಲೂ ಬರಲಿದೆ. ಎಲ್ಲ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಸಂಸ್ಕೃತಕ್ಕಿರುವಾಗ ನಾವು ಯಾವುದರ ಬಗೆಗೂ ಭಯಪಡಬೇಕಿಲ್ಲ. ಸಂಸ್ಕೃತದ ಸಾಮರ್ಥ್ಯ ಎಲ್ಲರಿಗೂ ತಿಳಿದದ್ದೇ ಆಗಿದೆ. ಭಾಷೆಯು ಅಡ್ಡಿಯಾಗದೇ ಸೇತುವೆಯಾಗಲಿ ಎಂಬುದು ದ್ವಿಜೋದಯದ ಅಭಿಮತ.

ಕ್ಯಾಲೆಂಡರ್ ಬದಲಾಗುವ ಹೊಸ ವರ್ಷದಲ್ಲಿ ದ್ವಿಜೋದಯವು ಹೊಸ ರೂಪಗಳಲ್ಲಿ ನಾನಾವಿಧವಾದ ಮಾರ್ಕೆಟಿಂಗ್ ತಂತ್ರಗಳನ್ನು ಬಳಸಿಕೊಂಡು ಮುನ್ನಡೆಯಲಿದೆ. ತನ್ನ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಹೊಸ ಕೊಡುಗೆಗಳನ್ನು ನೀಡುವಲ್ಲಿ ಶ್ರಮವಹಿಸುತ್ತದೆ. ನಿಮ್ಮ ಸಹಕಾರ ಮತ್ತು ಪ್ರೋತ್ಸಾಹ ನಮ್ಮ ಮೇಲಿರಲಿ.
ನಿಮ್ಮ ದ್ವಿಜ ತಂಡ

 

9036709599

dwijodaya@gmail.com

www.denhym.com