ಸಂಪಾದಕೀಯ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಉದ್ಯಮಿಯೊಬ್ಬರು ಬಹಳ ಸಜ್ಜನರು ನೌಕರರನ್ನು ಮಕ್ಕಳಿಗಿಂತ ಹೆಚ್ಚಾಗಿ ನೆಚ್ಚಿಕೊಂಡಿದ್ದರು. ನಾಲ್ಕೈದು ವರ್ಷಗಳ ಕಾಲ ಆ ಹುಡುಗ ಅವರ ಸಂಸ್ಥೆಯಲ್ಲೇ ಕೆಲಸಕ್ಕಿದ್ದ ಅವನನ್ನು ಸೇರಿಸಿದ್ದೂ ಸಹ ಆ ಉದ್ಯಮಿಯ ಸೋದರನೇ ಆಗಿದ್ದ. ರಕ್ತ ಸಂಬಂಧಿಯ ಮಾತಿಗೆ ಕಟ್ಟುಬಿದ್ದು ಆ ಉದ್ಯಮಿ ಆ ಹುಡುಗನನ್ನು ತಮ್ಮ ಕಾರ್ಖಾನೆಯಲ್ಲಿ ಕೆಲಸಕ್ಕಿಟ್ಟುಕೊಂಡರೆ ಅವನು ಉದ್ಯಮಿಗೆ ತಿಳಿಯದಂತೆ ವಸ್ತುಗಳನ್ನು ಮಾರಿ ಲಕ್ಷಾಂತರ ದೋಚಿದ. ಉದ್ಯಮಿಯ ಸೋದರಿಗೆ ಈ ವಿಷಯಗಳು ಮೊದಲೇ ಗೊತ್ತಿದ್ದವಂತೆ. ಇವೆಲ್ಲವೂ ಉದ್ಯಮಿಗೆ ತಡವಾಗಿ ತಿಳಿದು ಅವನನ್ನು ಕೇಳಿದಾಗ ಮನೆಯ ಪರಿಸ್ಥಿತಿಯನ್ನು ತಿಳಿಸಿ ಗೋಗರೆದು ಕ್ಷಮಿಸುವಂತೆ ಕೇಳಿದ್ದಕ್ಕೆ ಕ್ಷಮಿಸಿ ಆ ಹುಡುಗನನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾಯ್ತು. ಆದರೆ ಅವನು ಮತ್ತೆ ಮಾಲೀಕನಿಗೆ ಮೋಸ ಮಾಡಿದನಂತೆ.

ಇಡೀ ಘಟನಾವಳಿಗಳಲ್ಲಿ ಯಾರ ತಪ್ಪಿದೆ? ಸಜ್ಜನನಾದ ಉದ್ಯಮಿಯ ಅಜಾಗರೂಕತೆ ತಪ್ಪೋ? ಆ ಹುಡುಗನ ಗುಣ ಗೊತ್ತಿದ್ದೂ ಅವನನ್ನು ಸೇರಿಸಿದ ಉದ್ಯಮಿಯ ಸೋದರನ ತಪ್ಪೋ? ಸ್ವಂತ ಬುದ್ಧಿಯಿಲ್ಲದೆ ಬದುಕಿನ ನಿಜವಾದ ಅರ್ಥ ತಿಳಿಯದ ಆ ಹುಡುಗನ ತಪ್ಪೋ?

ಪ್ರಾಮಾಣಿಕವಾಗಿ ಬದುಕುವುದು ಮತ್ತು ವ್ಯವಹರಿಸುವುದು ಉದ್ಯಮದ ಮುಖ್ಯ ಲಕ್ಷಣಗಳಲ್ಲೊಂದು. ಹಲವು ಸಂದರ್ಭಗಳಲ್ಲಿ ಹೇಳಿದ ಸಮಯಕ್ಕೆ ಉತ್ಪನ್ನ ಅಥವಾ ಸೇವೆಗಳನ್ನು ಕೊಡುವಲ್ಲಿ ವಿಳಂಬವಾದರೆ ಅದಕ್ಕೆ ಸೂಕ್ತ ಕಾರಣಗಳನ್ನು ಕೊಟ್ಟು ಗ್ರಾಹಕರನ್ನು ಸಮಾಧಾನಿಸಬೇಕಾಗುತ್ತದೆ. ಆದಷ್ಟೂ ವಿಳಂಬವಾಗದಂತೆ ನೋಡಿಕೊಳ್ಳುವುದು ಉತ್ತಮ. ಸಮಯ ಪರಿಪಾಲನೆ, ಉತ್ತಮ ಗುಣಮಟ್ಟ ಮತ್ತು ಗ್ರಾಹಕರೊಂದಿಗೆ ಸಮಯೋಚಿತ ಸಂವಹನ ಉದ್ಯಮಿಯ ಮನಸ್ಥಿತಿ ಮತ್ತು ಗುಣವಾಗಿರಬೇಕಾಗುತ್ತದೆ. ಇವೆಲ್ಲಾ ಇದ್ದೂ ಸಹ ಗ್ರಾಹಕರು ಅಥವಾ ಕ್ಲೈಂಟ್ ಎನಿಸಿಕೊಂಡವರು ನಮ್ಮನ್ನು ದೂಷಿಸುತ್ತಿದ್ದಾರೆ ಎಂದರೆ ಲೋಪ ಉದ್ಯಮಿಯಲ್ಲಲ್ಲ ಗ್ರಾಹಕನಲ್ಲೇ ಇದೆ. ನಿಮ್ಮಲ್ಲಿ ಯಾವುದೇ ತಪ್ಪಿಲ್ಲದಿದ್ದರೂ ಸಹ ಕೆಲವೊಮ್ಮೆ ದುರ್ಜನರು ಆ ಬಗೆಯಲ್ಲಿ ವರ್ತಿಸುವುದುಂಟು. ಮಿತ್ರಲಾಭದಲ್ಲಿ ಬರುವ ಮಾತುಗಳನ್ನು ಒಮ್ಮೆ ಅವಲೋಕಿಸೋಣ

ಅಪರಾಧೋ ನ ಮೇsಸ್ತೀತಿ ನೈತತ್ ವಿಶ್ವಾಸಕಾರಣಂ |
ವಿದ್ಯತೇ ಹಿ ನೃಶಂಸೇಭ್ಯೋ ಭಯಂ ಗುಣವತಾಮಪಿ ||

ನಾನು ತಪ್ಪನ್ನೇ ಮಾಡಿಲ್ಲ/ಮಾಡುವುದಿಲ್ಲ ಪ್ರಾಮಾಣಿಕವಾಗಿ ಬದುಕಿದ್ದೇನೆ ಎನ್ನುವುದೇ ನಮ್ಮ ವಿಶ್ವಾಸಕ್ಕೆ ಅಥವಾ ನಮ್ಮನ್ನು ಮತ್ತೊಬ್ಬರು ನಂಬುವುದಕ್ಕೆ ಕಾರಣವಾಗಬಾರದು. ಒಳ್ಳೆಯವರಿಗೂ ಸಹ ನಿರ್ದಯ ಸ್ವಭಾವವುಳ್ಳ ದುರ್ಜನರಿಂದ ಭಯವೆನ್ನುವುದು ಇದ್ದೇ ಇರುತ್ತದೆ.

ಮನುಷ್ಯನ ಸಹಜ ಸ್ವಭಾವ ನಂಬಿಕೆ. ಎಲ್ಲರನ್ನೂ ಎಲ್ಲವನ್ನೂ ಅನುಮಾನದ ದೃಷ್ಟಿಯಲ್ಲಿ ನೋಡುತ್ತಾ ನಿಂತರೆ ಸಮಾಜದಲ್ಲಿ ಬದುಕುವುದು ಅಸಾಧ್ಯ. ಆದರೆ ಆ ನಂಬಿಕೆ ಬಲಹೀನತೆಯಾಗಬಾರದು. ವ್ಯವಹಾರದ ವಿಷಯಕ್ಕೆ ಬಂದಾಗಲಂತೂ ಗರಿಷ್ಟಮಟ್ಟದ ಪರೀಕ್ಷಕ ದೃಷ್ಟಿಯಲ್ಲದಿದ್ದರೂ ಕನಿಷ್ಟಮಟ್ಟದ ಚಿಕಿತ್ಸಕ ದೃಷ್ಟಿಯಿರಬೇಕು. ಉದ್ಯಮದ ಹೊಸಬದಲಾವಣೆಗಳನ್ನು ಮಾಲೀಕನು ತಕ್ಷಣ ಕಲಿತುಕೊಳ್ಳಬೇಕು. ಹೊಸ ತಲೆಮಾರಿನವರು ಬೇಗನೆ ಕೆಲಸ ಕಲಿಯುತ್ತಾರೆಂದು ಎಲ್ಲದಕ್ಕೂ ಅವರ ಮೇಲೆ ಅವಲಂಬಿತರಾಗಬಾರದು. ನೌಕರರ ಟ್ರಾಕಿಂಗ್ ಸಹ ಅತೀ ಮುಖ್ಯವಾಗಿರುತ್ತದೆ. ಈಗ ಮೇಲಿನ ಘಟನೆಯ ವಿಷಯಕ್ಕೆ ಬರೋಣ ಪ್ರಾಮಾಣಿಕ ಸಜ್ಜನ ಉದ್ಯಮಿ ಎನ್ನುವುದು ಹೆಮ್ಮೆಯ ವಿಷಯವಾಗಬಾರದು. ಅದು ಸಹಜ ಗುಣ. ಆದರೆ ಉದ್ಯಮದ ಒಳಹೊರಗನ್ನು ತಿಳಿದ ಉದ್ಯಮಿಯು ತನ್ನ ಕಾರ್ಖಾನೆಯ ಉತ್ಪನ್ನಗಳ ಬಗೆಗೆ ಟ್ರಾಕ್ ಮಾಡದೆ ಇದ್ದದ್ದು ತಪ್ಪಾಗುತ್ತದೆ. ಎಷ್ಟೇ ನಂಬಿಕಸ್ಥ ಎಂದಿದ್ದರೂ ತಿಂಗಳಿಗೊಮ್ಮೆಯಾದರೂ ಉತ್ಪನ್ನಗಳ ಲೆಕ್ಕಾಚಾರ ಪರೀಕ್ಷೆ ಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು.

ಪ್ರಪಂಚ ಸುಂದರವಾಗಿದೆ ಇನ್ನೊಬ್ಬರನ್ನು ತುಳಿದು ಬದುಕುವುದಕ್ಕಿಂತ ಜೊತೆಯಾಗಿ ಬದುಕುವುದು ಇಹಪರದಲ್ಲಿ ನಿಜಕ್ಕೂ ಒಳ್ಳೆಯ ಬೆಳವಣಿಗೆ . ನಮಸ್ಕಾರ

 

9036709599

dwijodaya@gmail.com

www.denhym.com