MATERNAL MORTALITY… ಒಂದು ಪಕ್ಷಿನೋಟ..

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಡಿಸೆಂಬರ್ ಮಾಸದ ಪತ್ರಿಕೆಗಳಲ್ಲಿ ಚರ್ಚೆಗೊಳಗಾದ ಸುದ್ದಿಗಳಲ್ಲಿ, ಬಳ್ಳಾರಿಯ ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸರಣಿ ಸಾವುಗಳು ಪ್ರಮುಖವಾಗಿತ್ತು. ಬಾಣಂತಿಯರ ಸಾವು ಬಹಳ ದುಃಖಕರ ಹಾಗು ದಾರುಣ.. ನವಜಾತ ಶಿಶುವು ತಾಯಿಯ ಮಮತೆಯಿಂದ ವಂಚಿತಗೊಳ್ಳುತ್ತದಷ್ಟೇ ಅಲ್ಲ, ಒಂದು ಕುಟುಂಬವೇ ಅನಾಥಪ್ರಜ್ಞೆಯಿಂದ ಬಳಲುತ್ತದೆ. ಈ ಸಂಚಿಕೆಯಲ್ಲಿ, ಬಾಣಂತಿಯರ ಸಾವು, ಈ ಕುರಿತು ಒಂದು ಪಕ್ಷಿನೋಟವಿದೆ.

ಮೊದಲಿಗೆ, ಬಾಣಂತಿಯರ ಸಾವು, ವೈದ್ಯಕೀಯ ಭಾಷೆಯಲ್ಲಿ, MATERNAL MORTALITY, ಹೀಗೆಂದರೇನು?? ಯಾವುದೇ ಮಹಿಳೆಯು, ಗರ್ಭಿಣಿಯಾಗಿದ್ದು, ಪ್ರಸವವಾದ ನಲವತ್ತೆರಡು ದಿನಗಳೊಳಗೆ ಗರ್ಭಸಂಬಂಧೀ ತೊಡಕು, ಪ್ರಸವ ಸಂಬಂಧೀ ತೊಡಕಿನಿಂದ ಸಾವನ್ನಪ್ಪಿದರೆ ಇದನ್ನು MATERNAL MORTALITY ಎಂದು ಕರೆಯಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ, ಪ್ರತಿ ಒಂದು ಲಕ್ಷ ತಾಯಂದಿರಿಗೆ 103 ಬಾಣಂತಿಯರ ಸಾವು ಸಂಭವಿಸುತ್ತಿದೆ. ಇದು 2020ನೇ ಇಸವಿಯ ಅಂಕಿ ಅಂಶಗಳ ಗಣತಿಯ ಫಲಿತಾಂಶ. ಸುಧಾರಿತ ವೈದ್ಯಕೀಯ ಸೌಲಭ್ಯಗಳು, ಈ ರೀತಿಯ ಸಾವುಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ತಹಬದಿಗೆ ತಂದಿದೆ. ಆದಾಗ್ಯೂ, ಬಾಣಂತಿಯರ ಸಾವುಗಳನ್ನು ಇನ್ನೂ ಕಡಿಮೆಗೊಳಿಸುವತ್ತ ನಾವು ನೂರಾರು ಹೆಜ್ಜೆಗಳ ದೂರವನ್ನು ಕ್ರಮಿಸಬೇಕಾಗಿದೆ.

ಈ ರೀತಿಯ ಸಾವುಗಳು ಯಾವ ಕಾರಣಕ್ಕಾಗಿ ಸಂಭವಿಸುತ್ತದೆ ಎಂದು ತಿಳಿಯೋಣ. ಮಹಿಳೆಯು ಗರ್ಭಿಣಿಯಾದರೆ, ಸಂತೋಷದ ಸಂಗತಿ ಹಾಗು ಸಂಭ್ರಮಿಸುವ ವಿಷಯವಾಗಿರುತ್ತದೆ. ಆದರೆ ಕೆಲವು ದುರದೃಷ್ಟಕರ ಪರಿಸ್ಥಿತಿಗಳು ಈ ಸಂತೋಷವನ್ನು ಕಸಿದುಕೊಳ್ಳುತ್ತದೆ. ಈ ಸಾವುಗಳಿಗೆ ಪ್ರಮುಖವಾದ ಕಾರಣಗಳು-

  • ಅಧಿಕ ರಕ್ತಸ್ರಾವ
  • ಗರ್ಭಿಣಿಯರಲ್ಲಿ ಕಂಡುಬರುವ ಅನಿಯಂತ್ರಿತ ರಕ್ತದೊತ್ತಡ
  • ಹೃದಯ ಸಂಬಂಧೀ ಕಾಯಿಲೆಗಳು
  • ರಕ್ತಕಣಗಳ ಹೆಪ್ಪುಗಟ್ಟುವಿಕೆ ಹಾಗು ಅವು ರಕ್ತನಾಳಗಳಲ್ಲಿ ಸಿಕ್ಕಿ ಹಾಕಿಕೊಂಡು ಆಗುವ ಸಮಸ್ಯೆಗಳು
  • ಆಮ್ನಿಯೋಟಿಕ್ ಫ್ಲೂಯಿಡ್ ಎಂಬೋಲಿಸಮ್
  • ಸೋಂಕಿನಿಂದ ಉಂಟಾಗುವ ಪ್ರಾಣಾಪಾಯ
  • ಯಾವುದೇ ಔಷಧಕ್ಕೆ ಮಾರಣಾಂತಿಕವಾದ ಅಲರ್ಜಿ

ಈ ಮೇಲೆ ತಿಳಿಸಿದ ಕಾರಣಗಳನ್ನು ಸ್ವಲ್ಪ ವಿವರವಾಗಿ ತಿಳಿಯಲು ಪ್ರಯತ್ನಿಸೋಣ.

ಅಧಿಕ ರಕ್ತಸ್ರಾವ- ಮಹಿಳೆಯು ಗರ್ಭ ಧರಿಸಿದ ಮೇಲೆ, ಮುಟ್ಟು ಬರುವುದಿಲ್ಲ. ಆದರೆ, ಗರ್ಭಧರಿಸಿದ ಮೇಲೆ ನವಮಾಸಗಳ ಮೊದಲಾರ್ಧದಲ್ಲಿ, ರಕ್ತಸ್ರಾವವಾದರೆ, ಗರ್ಭಪಾತವಾಗುತ್ತದೆ. ಮಹಿಳೆಯು ರಕ್ತ ಹೀನತೆಯಿಂದ ಬಳಲುತ್ತಿದ್ದರೆ, ಸ್ವಲ್ಪ ರಕ್ತಸ್ರಾವವೂ ಆಕೆಯ ದೇಹಾರೋಗ್ಯದ ಮೇಲೆ ವ್ಯತಿರಿಕ್ತ ಪರಿಮಾಮ ಬೀರಿ, ಮಾರಣಾಂತಿಕವಾಗಬಲ್ಲದು. ನವಮಾಸಗಳ ಉತ್ತರಾರ್ಧದಲ್ಲಿ, ಗರ್ಭಮಾಸಿನ ತೊಂದರೆಗಳು (PLACENTAL ABRUPTION, PLACENTA PREVIA-ANTEPARTUM HEMORRHAGE) ಹೀಗೆ ಇವುಗಳ ಸಮಸ್ಯೆಯಿಂದ ಅಧಿಕ ರಕ್ತಸ್ರಾವವಾಗಬಹುದು. ಹೆರಿಗೆಯ ಸಮಯದಲ್ಲಿ, ಹೆರಿಗೆಯಾದ ತಕ್ಷಣ ಅಧಿಕ ರಕ್ತಸ್ರಾವವಾಗಬಹುದು(POST PARTUM HEMORRHAGE). ಇವೆಲ್ಲವೂ ಮಹಿಳೆಯನ್ನು ಸಾವಿನಂಚಿಗೆ ದೂಡಬಹುದು.

ಅಧಿಕ ಮತ್ತು ಅನಿಯಂತ್ರಿತ ರಕ್ತದೊತ್ತಡ- ಗರ್ಭಿಣಿಯರನ್ನು ಕಾಡುವ ಸಮಸ್ಯೆಗಳಲ್ಲಿ ಅಧಿಕ ರಕ್ತದೊತ್ತಡ ಪ್ರಮುಖವಾದುದು.

ಅನಿಯಂತ್ರಿತ ರಕ್ತದೊತ್ತಡ ಗರ್ಭಿಣಿಯ ದೇಹದಲ್ಲಿ ಹಲವು ಅನಾಹುತಗಳನ್ನು ತಂದೊಡ್ಡುತ್ತದೆ. ಗರ್ಭದಲ್ಲೇ ಮಗುವು ಅಸುನೀಗಬಹುದು ಹಾಗು ಇವೆಲ್ಲದರಿಂದ ತೊಡಕಾಗಿ ತಾಯಿಯ ಮರಣವು ಸಂಭವಿಸಬಹುದು.

ಅನಿಯಂತ್ರಿತ ರಕ್ತದೊತ್ತಡ ಗರ್ಭಿಣಿಯ ದೇಹದಲ್ಲಿ ಹಲವು ಅನಾಹುತಗಳನ್ನು ತಂದೊಡ್ಡುತ್ತದೆ. ಗರ್ಭದಲ್ಲೇ ಮಗುವು ಅಸುನೀಗಬಹುದು ಹಾಗು ಇವೆಲ್ಲದರಿಂದ ತೊಡಕಾಗಿ ತಾಯಿಯ ಮರಣವು ಸಂಭವಿಸಬಹುದು.

-ರಕ್ತಕಣಗಳು ಹಾಗು ಅವುಗಳಿಂದಾಗುವ ಅಪಾಯವು ಬಹಳ ಅಪರೂಪ. ಆದರೆ ಗರ್ಭಾವಸ್ಥೆಯಲ್ಲಿ, ಕೆಲವು ಕಣಗಳ ಸಂಖ್ಯೆ ಹೆಚ್ಚು, ಕೆಲವು ಕಡಿಮೆಯಾಗುತ್ತವೆ. ’ಗರ್ಭಾವಸ್ಥೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ಬೇಗನೆ ಆಗುತ್ತದೆ. ಇದು ಹೆರಿಗೆಯ ಸಮಯದಲ್ಲಿ ರಕ್ತಸ್ರಾವ ತಡೆಯಲು ಸಹಾಯಕ. ಆದರೆ ಇದೇ ಹೆಪ್ಪುಗಟ್ಟುವಿಕೆಯಿಂದ THROMBUS ಉಂಟಾಗಿ ಅದು ದೇಹದ ಪ್ರಮುಖರಕ್ತನಾಳಗಳಲ್ಲಿ ಒಂದಾದ PULMONARY VASCULATURE ಅಲ್ಲಿ ಕುಳಿತರೆ, ಜೀವಕ್ಕೆ ಆಪತ್ತುಂಟು ಮಾಡುತ್ತದೆ.

– -ಆಮ್ನಿಯೋಟಿಕ್ ದ್ರವದ ಎಂಬೋಲಿಸಮ್ ಒಂದು ಅಪರೂಪವಾದ ಆದರೆ ಮಾರಣಾಂತಿಕವಾದ ಪರಿಸ್ಥಿತಿ ಎಂದರೆ ಅತಿಶಯೋಕ್ತಿಯಲ್ಲ. ಇದರ ರೋಗನಿದಾನ ಮಾಡುವಷ್ಟರಲ್ಲಿ ಮಹಿಳೆಯು ಅಸುನೀಗಿರುತ್ತಾಳೆ. ಆಮ್ನಿಯೋಟಿಕ್ ದ್ರವವು, ಗರ್ಭಸ್ಥ ಶಿಶುವಿನ ಸುತ್ತಲಿರುವ ದ್ರಾವಣ. ಕೆಲವು ಸಂದರ್ಭಗಳಲ್ಲಿ, ಇದು ತಾಯಿಯ ರಕ್ತಪರಿಚಲನಾ ವ್ಯವಸ್ಥೆಯನ್ನು ಸೇರಿ ಅಲ್ಲಿ ಹಠಾತ್ತನೆ ನಡೆಯುವ ಕ್ರಿಯೆ-ಪ್ರತಿಕ್ರಿಯೆಗಳಿಂದ ಮಹಿಳೆಯು ಸಾವನ್ನಪ್ಪುತ್ತಾಳೆ. ಸಾಮಾನ್ಯವಾಗಿ, ಹೆರಿಗೆಯಾದ ಕೆಲವು ಗಂಟೆಗಳೊಳಗೆ ಈ ಕಾರಣದಿಂದ ತಾಯಿಯ ಮರಣ ಸಂಭವಿಸುವ ಸಾಧ್ಯತೆ ಹೆಚ್ಚು.

– -ಅಸುರಕ್ಷಿತ ಪರಿಸ್ಥಿತಿಗಳಲ್ಲಿ ನಡೆಸುವ ಗರ್ಭಪಾತಾಗಲಿ(SEPTIC ABORTION), ಹೆರಿಗೆಯಾಗಲಿ ತಾಯಿಗೆ ಅಪಾಯವನ್ನುಂಟು ಮಾಡುತ್ತದೆ. ಸುರಕ್ಷಿತವಾದ ಮತ್ತು ಸ್ವಚ್ಛವಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ, ಬ್ಯಾಕ್ಟೀರಿಯಾಗಳಿಂದ ಸೋಂಕುಂಟಾಗ ಬಹುದು. ಈ ಸೋಂಕು ರಕ್ತದಲ್ಲಿ ಸೇರಿದರೆ, SEPSIS ಆಗಿ ಜೀವವನ್ನೇ ತೆಗೆಯುತ್ತದೆ.

-ಇನ್ನು ಅಲರ್ಜಿ ಪ್ರತಿಕ್ರಿಯೆಗಳು. ಇದು ಯಾರಿಗಾದರೂ, ಯಾವದೇ ಔಷಧ ಅಥವಾ ಪದಾರ್ಥಕ್ಕಾದರೂ ಆಗಬಹುದು. ಕೆಲವು ಅಲರ್ಜಿಗಳು ಸೌಮ್ಯ ಸ್ವರೂಪವಾದರೆ, ಮತ್ತು ಕೆಲವು ಪ್ರಾಣಾಪಾಯ ತರುತ್ತದೆ. ಈ ಹಿಂದೆ ಪೆನಿಸಿಲಿನ್ ಇಂಜೆಕ್ಷನ್ಗೆ ಈ ರೀತಿ ಆಗುತ್ತಿತ್ತು. ಹಾಗಾಗಿ ಅದನ್ನು ರೋಗಿಗೆ ನೀಡುವ ಮೊದಲು, ಅಲ್ಪ ಪ್ರಮಾಣದ ಔಷಧವನ್ನು ಮೊದಲು ರೋಗಿಗೆ ಚುಚ್ಚಿ, ಅದರಿಂದ ಯಾವುದೇ ಸಮಸ್ಯೆ ಇರದಿದ್ದರೆ, ಪೂರ್ಣಪ್ರಮಾಣದಲ್ಲಿ ಔಷಧವನ್ನು ಕೊಡುತ್ತಾರೆ. ಇದು ಬಹುತೇಕ ಔಷಧಗಳಿಗೆ ಮುಖ್ಯವಾಗಿ ಆಂಟಿಬಯೋಟಿಕ್ ಔಷಧಗಳಿಗೆ ಮಾಡುತ್ತಾರೆ. ಬಳ್ಳಾರಿ ಆಸ್ಪತ್ರೆಯಲ್ಲಿ ಕಲುಷಿತ ಐ ವಿ ದ್ರಾವಣದಿಂದ ಬಾಣಂತಿಯು ಸಾವನ್ನಪ್ಪಿರುವುದು ಬಹುಶಃ ಈ ತರಹದ ಪ್ರತಿಕ್ರಿಯೆಯಿಂದಾಗಿ ಎಂದು ಅಂದಾಜಿಸಬಹುದು. ಅದೇನೆ ಕಾರಣವಿರಲಿ, ತಾಯಂದಿರ ಸಾವು ಘೋರ ಮತ್ತು ದುರಂತವೇ..

ಕೆಲವು ನೇರ ಕಾರಣಗಳು, ಕೆಲವು ಸಮಸ್ಯೆಗಳು ಗರ್ಭಾವಸ್ಥೆಯ ಮೊದಲೇ ಇದ್ದ ಅನಾರೋಗ್ಯವನ್ನು ಉಲ್ಬಣಿಸಿ, ಪರೋಕ್ಷವಾಗಿ ಸಾವಿಗೆ ಕಾರಣವಾಗುತ್ತದೆ.

ಇದಕ್ಕೆ ಪರಿಹಾರವೇನು??
ಮುಂದಿನ ಸಂಚಿಕೆಯಲ್ಲಿ..

ಧನ್ಯವಾದಗಳು,
ಸೌಮ್ಯಾ ಹಿಮಗಿರೀಶ್.

 

9036709599

dwijodaya@gmail.com

www.denhym.com