ಸೆಪ್ಟಂಬರ್ ಮಾಸದ ಸಂಪಾದಕೀಯ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಅರ್ಥಮೂಲೌ ಹಿ ಧರ್ಮಕಾಮೌ| ಅರ್ಥ ಏವ ಪ್ರಧಾನಃ

ಇದು ಭಗವಾನ್ ಆಚಾರ್ಯ ವಿಷ್ಣುಗುಪ್ತರ ಮಾತು. ಧರ್ಮ ಮತ್ತು ಕಾಮಗಳೆರಡೂ ಸಹ ಅರ್ಥ (ಹಣ)ವನ್ನು ಅವಲಂಬಿಸಿವೆ ಎನ್ನುವುದು ಅದರ ತಾತ್ಪರ್ಯ. ಹಾಗಾದರೆ ಎಲ್ಲದಕ್ಕೂ ಮೂಲ ಹಣವೇ ಆಗಿದ್ದರೆ ಮೋಕ್ಷಮಾರ್ಗದ ಗತಿಯೇನು? ಇದನ್ನು ಸ್ವತಃ ವಿಷ್ಣುಗುಪ್ತರೇ ಹೇಳಿದ್ದಾರೆಂದಮೇಲೆ ಧನಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಆದರೆ ಒಳಾರ್ಥ ಬೇರೆಯೇ ಆಗಿದೆ. ಈ ಸಾಲುಗಳಿಗೂ ಮೊದಲು ಅರ್ಥಕ್ಕೆ ಇಂದ್ರಿಯಜಯವೇ ಮೂಲವಾಗಿದೆ ಎನ್ನುವುದನ್ನು ಆಚಾರ್ಯರು ಬಲವಾಗಿ ಪ್ರತಿಪಾದಿಸುತ್ತಾರೆ. ರಾಜ್ಯವೊಂದು ಬಲಗೊಳ್ಳಬೇಕಾದರೆ ಅಲ್ಲಿ ಇಂದಿಯವಿಜವೇ ಮುಖ್ಯವಾಗುತ್ತದೆ. ಸುಖಸ್ಯ ಮೂಲಂ ಧರ್ಮಃ ಧರ್ಮಸ್ಯ ಮೂಲಂ ಅರ್ಥಃ, ಅರ್ಥಸ್ಯ ಮೂಲಂ ರಾಜ್ಯಂ, ರಾಜ್ಯಸ್ಯ ಮೂಲಂ ಇಂದ್ರಿಯಜಯಃ. ಇಂದಿಯ ಜಯದ ಮೂಲಕವೇ ರಾಷ್ಟ್ರವು ಸುಸ್ಥಿತಿಯಲ್ಲಿರುತ್ತದೆ ಎನ್ನುತ್ತಾನೆ ಚಾಣಕ್ಯ. ಹಾಗಿದ್ದರೆ ಇಂದ್ರಿಯ ನಿಗ್ರಹವೆಂದರೆ? ಎಂಬ ಪ್ರಶ್ನೆಗೆ ಉತ್ತರ ಸ್ವಾರ್ಥ ರಹಿತ, ರಾಷ್ಟ್ರಕೇಂದ್ರಿತ, ಸಮಾಜಮುಖಿಯಾದ ಚಿಂತನೆಯೇ ಇಂದ್ರಿಯ ನಿಗ್ರಹ. ಭೋಗಕ್ಕಾಗಿಯೇ ಬದುಕುವುದು ಭಾರತೀಯರ ಲಕ್ಷಣವಲ್ಲ. ಹಾಗಾಗಿಯೇ ಇಂದ್ರಿಯ ನಿಗ್ರಹದ ಮೂಲಕ ರಾಜ್ಯ/ರಾಷ್ಟ್ರಹಿತವನ್ನು ಕಾಯುವುದು, ತನ್ಮೂಲಕ ಅರ್ಥವನ್ನು ಸದ್ಬಳಕೆ ಮಾಡುವುದು, ಅದರಿಂದ ಸದ್ಧರ್ಮವನ್ನು ಸ್ಥಾಪಿಸುವುದು ಮತ್ತು ಅದರಿಂದಾಗಿಯೇ ಸುಖವನ್ನು ಹೊಂದುವುದು ಎಲ್ಲವೂ ಒಂದಕ್ಕೊಂದು ಸೇರಿಕೊಂಡ ಕೊಂಡಿಯೇ ಆಗಿದೆ.

ಹಣದ ಸದ್ಬಳಕೆಯ ಮೂಲಕ ರಾಷ್ಟ್ರದ ಹಿತವನ್ನು ಮತ್ತು ಹಿರಿಮೆಯನ್ನು ಔನ್ನತ್ಯಕ್ಕೇರಿಸಿದ ಕೀರ್ತಿ ಚಂದ್ರಯಾನದ್ದಾಗಿದೆ. ಸಿನಿಮಾಗಳ ಆಯವ್ಯಯಕ್ಕಿಂತ ಚಂದ್ರಯಾನದ ಖರ್ಚು ಕಡಿಮೆಯೇ ಆಗಿರುವುದು ನಮ್ಮ ವಿಜ್ಞಾನಿಗಳ ಕ್ಷಮತೆ, ಹಿರಿಮೆ ಮತ್ತು ಕಾರ್ಯಸಿದ್ಧಿಯನ್ನು ತೋರಿಸಿದೆ. ಇಸ್ರೋ ಮತ್ತಷ್ಟು ಸಾಧನೆಗಳನ್ನು ಮಾಡಿ ರಾಷ್ಟ್ರದ ಮಹತ್ತ್ವವನ್ನು ಜಗತ್ತಿಗೆ ಮತ್ತಷ್ಟು ಸಾರಲಿ ಎನ್ನುವುದು ದ್ವಿಜ ಎಂಟ್ರಪ್ರೈನರ್ಸ್ ತಂಡ ಮತ್ತು ದ್ವಿಜೋದಯ ಆಶಯ.

ಶ್ರಾವಣ ಭಾದ್ರಪದ ಮಾಸಗಳೆಂದರೆ ಹಬ್ಬಗಳ ಸಾಲು ಸಾಲು. ನಮ್ಮ ಉದ್ಯಮಿಗಳಿಗಂತೂ ಮತ್ತೂ ಸಂತಸ ಕೊಡುವ ಮಾಸಗಳು. ಹೊಸ ಉತ್ಪನ್ನಗಳು ಮಾರುಕಟ್ಟೆಗೆ ದಾಳಿಯಿಡುತ್ತವೆ. ಎಲ್ಲವನ್ನೂ ಗ್ರಾಹಕರಿಗೆ ಮುಟ್ಟಿಸುವ ಜವಾಬ್ದಾರಿ ಸಂಸ್ಥೆಗಳ ಮಾಲೀಕರದ್ದು ಮತ್ತು ಮಾರ್ಕೆಟಿಂಗ್ ವಿಭಾಗದ್ದು. ಅವೆರಲ್ಲರ ಜೊತೆಗೆ ದ್ವಿಜೋದಯ ತಂಡವು ನಮ್ಮಲ್ಲಿ ಜಾಹೀರಾತು ನೀಡುವ ಮತ್ತು ತಂಡದಲ್ಲಿರುವ ಸದಸ್ಯರಿಗೆ ಉಚಿತವಾಗಿಯೇ ವೇದಿಕೆಯನ್ನು ಕೊಡುತ್ತದೆ. ಅರ್ಥವು ನಮ್ಮ ವ್ಯಕ್ತಿಗತ ಸಂಬಂಧವನ್ನು ಹಾಳುಗೆಡವದೆ ಮತ್ತಷ್ಟು ಬಲಗೊಳಿಸುವತ್ತ ಸಾಗುತ್ತಿದೆ. ಉಚಿತವೆನ್ನುವುದನ್ನು ಆಮಿಷವಾಗಿ ತೋರಿಸದೆ ಅದು ಬಾಂಧವ್ಯದ ನಿರ್ಮಲತೆಗಾಗಿ ಬಳಸಿಕೊಳ್ಳುತ್ತಿದ್ದೇವೆ. ಒಂದೇ ತಿಂಗಳಲ್ಲಿ ೮೩ ಜನರ ಚಂದಾದಾರಿಕೆಯಿಂದ ಅತ್ಯದ್ಭುತವಾದ ಹಾರೈಕೆಯನ್ನು ಗಳಿಸಿದ ತಂಡಕ್ಕೆ ಸ್ವಾಭಾವಿಕವಾಗಿಯೇ ಜವಾಬ್ದಾರಿಯೂ ಹೆಚ್ಚಿದೆ. ನಿಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಇನ್ನೂ ಹೆಚ್ಚಿನ ಜನರನ್ನು ತಲುಪುವಂತೆ ಮಾಡುವ ಶಕ್ತಿ ನಮಗೆ ಬರಲಿ.

ಭಾರತೀಯ ಪರಂಪರೆಯು ಎಲ್ಲಾ ಶಾಸ್ತ್ರಗಳಿಗೆ ಲೌಕಿಕ ಮತ್ತು ಪಾರಮಾರ್ಥಿಕ ಸತ್ಯಗಳನ್ನು ಜೋಡಿಸಿರುವುದು ತಿಳಿದ ಸಂಗತಿಯೇ ಆಗಿದೆ. ಧನ ಸಂಪಾದನೆಯೂ ಸಹ ಲೌಕಿಕದಿಂದ ಆರಂಭವಾಗಿ ಪಾರಮಾರ್ಥದಲ್ಲಿ ಕೊನೆಗೊಳ್ಳುತ್ತದೆ. ಮಿತವ್ಯಯದಿಂದ ಸಾಧಿಸುವ ಉಪಭೋಗವೈರಾಗ್ಯವು ಮೋಕ್ಷಕ್ಕೆ ದಾರಿಯಾಗಿರುತ್ತದೆ. ವಿಪ್ರ ಉದ್ಯಮಿಗಳಲ್ಲಿ ಈ ಮನಸ್ತತ್ತ್ವವು ಹೆಚ್ಚಾಗಿ ಬರತೊಡಗಿದರೆ ಉದ್ಯಮ – ಮಿತವ್ಯಯ- ತನ್ಮೂಲಕ ಪರಿಸರ ರಕ್ಷಣೆ ಸಾಧಿಸಬಹುದು. ಹಣದ ಸದ್ಬಳಕೆ ಭೂಮಿಯನ್ನು ಕಾಪಾಡುವುದೇ ಆಗಿದೆಯೆನ್ನುವುದನ್ನು ಯಾವ ಉದ್ಯಮಿಯೂ ಮರೆಯುವಂತಿಲ್ಲ. ಅಧಿಕವಾದ ಧನವನ್ನು ದುಂದುಮಾಡದೆ ಉದ್ಯಮಿಯು ಸಮಾಜದ ಏಳಿಗೆಗೆ ಬಳಸುವಂತಾದರೆ ಅರ್ಥದ ಉದ್ದೇಶ ಈಡೇರಿದಂತೆಯೇ ಆಗುತ್ತದೆ. ಅರ್ಥವು ಅಹಂಕಾರದ ಪೋಷಣೆಯಾಗಿ ಮಾರ್ಪಾಟಾದರೆ ಮಾಡುವ ಪ್ರತಿ ಕೆಲಸದಲ್ಲೂ ಕಮೀಷನ್ ಗಳ ಗೋಜಲು ಮತ್ತು ಸ್ವಾರ್ಥವೇ ಎದ್ದು ಕಾಣುತ್ತದೆ. ಅಹಮಿಕೆಯಿಲ್ಲದ, ಆರೋಗ್ಯಯುತವಾದ ಸ್ಪರ್ಧೆಯಿದ್ದರೆ ಉದ್ಯಮವಾಗಲೀ ಸಂಸ್ಥೆಯಾಗಲೀ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಏವಂ ಶಾಸ್ತ್ರಮಿದಂ ಯುಕ್ತಂ ಏತಾಭಿಸ್ತಂತ್ರಯುಕ್ತಿಭಿ|
ಅವಾಪ್ತೌ ಪಾಲನೇ ಚೋಕ್ತಂ ಲೋಕಸ್ಯಾಸ್ಯ ಪರಸ್ಯ ಚ|| - ಚಾಣಕ್ಯ

ಅರ್ಥ ಶಾಸ್ತ್ರವು ಲೌಕಿಕ ಮತ್ತು ಪಾರಮಾರ್ಥಿಕಕ್ಕೆ ಪ್ರಯೋಜನಕಾರಿಯಾಗುವಂತಹುದು. ಎನ್ನುವ ಆಚಾರ್ಯ ಚಾಣಕ್ಯ ಮಾತಿನೊಂದಿಗೆ ಭದ್ರಂ ಶುಭಂ ಮಂಗಳಂ

 

9036709599

dwijodaya@gmail.com

www.denhym.com