ಸಣ್ಣ ಬೇಸರವನ್ನೂ ಡಿಪ್ರೆಶನ್ ಎನ್ನುವ ಹಣೆಪಟ್ಟಿ ಕಟ್ಟುವ ಮನಃಶಾಸ್ತ್ರ ವ್ಯಾಪಾರಿಗಳು.

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಮನೆಯಲ್ಲಿ ಸಣ್ಣ ಗಲಾಟೆ, ವಿರಸ ಕೋಪ. ಬೇಸರದಲ್ಲಿ ಆ ವ್ಯಕ್ತಿ ಇದ್ದಾಗ ಯಾರೋ ಮಹಾನುಭಾವ ಫೇಸ್ ಬುಕ್ಕಿನಲ್ಲಿ ಬಂದ ಬರಹ ಓದಿ “ನೀನು ಡಿಪ್ರೆಶನ್ ನಲ್ಲಿದ್ದೀಯ ಕೌನ್ಸೆಲಿಂಗ್ ತಗೋ” ಅಂದರಂತೆ. ಕಾಲ್ ಮಾಡಿ, “ಹೀಗಾಗಿದೆ ಪರಿಸ್ಥಿತಿ, ಮಾತ್ರೆಗಳು ಎಷ್ಟು ಕಾಲ ತೆಗೆದುಕೊಳ್ಳಬೇಕೋ ಏನೋ” ಅಂದ. ಬೈದುಬಿಡಬೇಕು ಎನಿಸಿಬಿಟ್ಟಿತು. ಮನೆಯೆಂದಮೇಲೆ ಸಣ್ಣ ಜಗಳ, ಅಭಿಪ್ರಾಯಭೇದ, ಮುನಿಸು ಸಹಜ. ಅದನ್ನ ಡಿಪ್ರೆಶನ್ ಎಂಬ ಹಣೆಪಟ್ಟಿಯು ಫೇಸ್ ಬುಕ್ ನಂತಹುದು ಒದಗಿಸಿದರೆ, ಮನೋ ವೈದ್ಯ ಅದಕ್ಕೆ ಮಾತ್ರೆಯನ್ನೂ ಕೊಟ್ಟಿದ್ದಾನೆ, ಕನಿಷ್ಟ ರೋಗ ನಿದಾನದ ವಿವರಗಳನ್ನೂ ತೆಗೆದುಕೊಳ್ಳದೆ. ಆತನಿಗೆ ಸಮಯವಿಲ್ಲ, ನೂರಾರು ಕೇಸ್ ಗಳು ಸಾಲುಗಟ್ಟಿ ನಿಂತಿರುತ್ತವೆ ಹಾಗಾಗಿ ಸಮಸ್ಯೆಯನ್ನು ಪೂರ್ಣವಾಗಿ ಅವಗಾಹನೆ ಮಾಡದೆ ಆಂಟಿ ಡಿಪ್ರೆಸೆಂಟ್ ಮಾತ್ರೆ ಕೊಟ್ಟು ಕಳುಹಿಸಿದ್ದಾನೆ. ಯಾರನ್ನು ದೂರುವುದು? ಆನ್ಲೈನ್ ನಲ್ಲಿ ಮನಃಶಾಸ್ತ್ರದ ಬಗೆಗೆ ಪೋಸ್ಟ್ ಗಳನ್ನು ಹಾಕಿ ಹೆದರಿಕೆ ಹುಟ್ಟಿಸುವ ಮತ್ತು ಪೂರ್ತಿಯಾಗಿ ಓದದೆ ಮನಃಶಾಸ್ತ್ರವನ್ನು ಅರ್ಥ ಮಾಡಿಕೊಳ್ಳದೆ ಬಾಯಿಗೆ ಬಂದದ್ದು, ಇನ್ನೆಲ್ಲೋ ಬಂದದ್ದನ್ನು ಕಾಪಿ ಪೇಸ್ಟ್ ಮಾಡಿ/ಅನುವಾದ ಮಾಡಿ ತಾವು ಮಹಾನ್ ಮನಃಶಾಸ್ತ್ರಜ್ಞರು ಎನಿಸಿಕೊಳ್ಳುವ ಹಪಹಪಿಗೆ ಬಿದ್ದ ಮನಃಶಾಸ್ತ್ರವ್ಯಾಪಾರಿಗಳನ್ನು ದೂರುವುದೋ ಅಥವಾ ತನ್ನ ಕಡೆ ಬಂದ ರೋಗಿ(?)ಯ ಬಗೆಗೆ ಸರಿಯಾಗಿ ವಿವರಗಳನ್ನು ತಿಳಿದುಕೊಳ್ಳದೆ ತರಾತುರಿಯಲ್ಲಿ ಮಾತ್ರೆ ಕೊಟ್ಟ ವೈದ್ಯನನ್ನು ದೂರೋಣವೇ?

ಮನಃಶಾಸ್ತ್ರ ವ್ಯಾಪಾರವಾಗುತ್ತಿದೆಯೆ?

ಸೀತ , ವಾತ ಕಫ, ಪಿತ್ತ, ದೇಹದ ರೋಗಕ್ಕೆ ಮಾತ್ರೆಗಳನ್ನು ಸೂಚಿಸುವುದಕ್ಕೆ ವೈದ್ಯರಿದ್ದಾರೆ. ಅವರು ಅವರದೇ ಆದ ವೈದ್ಯಕೀಯ ಪದ್ಧತಿಯನ್ನು ಅಳವಡಿಸಿಕೊಂಡಿರುತ್ತಾರೆ. ಆದರೆ ಮನಃಶಾಸ್ತ್ರ ಹಾಗಲ್ಲವಲ್ಲ. ಅದಕ್ಕೆ ಇದಮಿತ್ಥಂ ಎನ್ನುವ ಚಿಕಿತ್ಸೆಯಿಲ್ಲ. ರೋಗಿಯ ಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಅವನ ಮನಸ್ಸಿನ ಮೇಲೆ ಚಿಕಿತ್ಸೆಯನ್ನು ಪರಿಣಾಮವಾಗುವಂತೆ ಮಾಡಿ ಸರಿ ಮಾಡುವುದು ಮನಃಶಾಸ್ತ್ರದ ರೀತಿ. ಜಾಲತಾಣಗಳಲ್ಲಿ ಪುಂಖಾನುಪುಂಖವಾಗಿ ಲೇಖನಗಳನ್ನು ಬರೆದು ಮನೋರೋಗದ ಬಗ್ಗೆ ಅರಿವು ಮೂಡಿಸುವ(?) ಅನೇಕ ಮನಃಶಾಸ್ತ್ರ ವ್ಯಾಪಾರಿಗಳ ಕ್ರಿಯೆಯಿಂದ ಸಣ್ಣ ಬೇಸರವನ್ನು, ಕ್ರಿಯೆಯನ್ನು, ಸ್ಪಂದನೆಯನ್ನು ಮನೋರೋಗವೆಂದು ಭ್ರಮಿಸುವವರ ಸಂಖ್ಯೆ ಹೆಚ್ಚುತ್ತಿದೆ. ಲೇ ಕೌನ್ಸೆಲಿಂಗ್ ಮಾಡಿಕೊಂಡ ಅನೇಕರು ತಮ್ಮದೇ ಕೌನ್ಸೆಲಿಂಗ್ ಸೆಂಟರ್ ಗಳನ್ನು ಆರಂಭಿಸುತ್ತಾರೆ. ಸಮಸ್ಯೆಯೇನೆಂದರೆ ಮನಃಶಾಸ್ತ್ರವನ್ನು ಪಾಂಗಿತವಾಗಿ ಕಲಿತರೂ ಸಹ ರೋಗ ನಿದಾನವನ್ನು ತಿಳಿದುಕೊಳ್ಳು ವರ್ಷಗಳು ಬೇಕಾಗುತ್ತದೆ. ಮುಖ ನೋಡಿ ರೋಗ ಹೇಳಿ ಥೆರಪಿ ಆರಂಭಿಸುವುದಕ್ಕಾಗುವುದಿಲ್ಲ. ರೋಗದ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕೇ ಸಮಯ ಹಿಡಿಸುತ್ತದೆ. ಅಂತಹುದರಲ್ಲಿ ಆನ್ಲೈನ್ ನಲ್ಲಿ ಓದಿ ಅರ್ದಂಬರ್ದ ತಿಳಿದು ಓದಿದ ವಿಷಯವನ್ನು ರೋಗಿಯ ಮಾತಿಗೆ ತುಲನೆ ಮಾಡಿ ರೋಗವನ್ನು ಅಂಟಿಸುವುದಿದೆಯಲ್ಲ ಅದಕ್ಕಿಂತ ದೊಡ್ಡ ಅಪಾಯವಿನ್ನೊಂದಿಲ್ಲ. ಸಣ್ಣ ಉದಾಹರಣೆಯನ್ನು ಕೊಡುತ್ತೇನೆ. ಸದಾ ಸಿಡುಕುತ್ತಿರುತ್ತಾಳೆ ಎಂದು ಬಂದ ಹೆಣ್ಣಿನ ಪೂರ್ವಾ ಪರ ತಿಳಿದುಕೊಳ್ಳದೆ ಸಿವಿಯರ್ ಅಗ್ರೆಷನ್ ಎಂಬ ಹಣೆ ಪಟ್ಟಿ ಕಟ್ಟಿ ಮಾತ್ರೆ ಕೊಟ್ಟ ವೈದ್ಯನಿಗೆ, ಆಕೆಯ ಸಿಟ್ಟಿನ ಮೂಲ ಕಂಡುಹಿಡಿಯುವ ತಾಳ್ಮೆ ವ್ಯವಧಾನವಿಲ್ಲ. ಕಾರಣ ಬೇಗನೆ ಮುಗಿಸಿ ದುಡ್ಡು ತೆಗೆದುಕೊಂಡರೆ ಸಾಕು. ಇನ್ನು ಕೌನ್ಸೆಲಿಂಗ್ ಮಾಡುವ ಆಪ್ತಸಲಹಾಕಾರರು, ಒಂದು ಸಿಟ್ಟಿಂಗ್ ಗೆ ೪೦೦ ರಿಂದ ೧೦,೦೦೦ ವರೆಗೆ ಚಾರ್ಜ್ ಮಾಡುವ ಜನರಿದ್ದಾರೆ. ಹಲವಾರು ಕೋರ್ಸ್ ಗಳನ್ನು ಮಾಡಿಕೊಂಡಿರುತ್ತಾರೆ, ಅನೇಕ ಸರ್ಟಿಫಿಕೇಟ್ ಗಳನ್ನು ಆಲ್ಬಮ್ ನಲ್ಲಿ ಪೇರಿಸಿಟ್ಟುಕೊಂಡಿರುತ್ತಾರೆ. ವಿಚಿತ್ರವೆಂದರೆ ಅವರ ಕೋರ್ಸ್ ನಲ್ಲಿ ಹೇಳಿಕೊಟ್ಟ ಚಿಕಿತ್ಸಾ ವಿಧಾನವನ್ನು ಹೊರತು ಪಡಿಸಿ ಮತ್ತೊಂದನ್ನು ಅವರು ಅಳವಡಿಸಿಕೊಳ್ಳುವುದಿಲ್ಲ. ಎಲ್ಲ ರೋಗಕ್ಕೂ ಅದೇ ಮದ್ದು ಎನ್ನುವಂತೆ ಅದೇ ಚಿಕಿತ್ಸೆಯನ್ನು ಮಾಡುತ್ತಾರೆ. ಒಂದು ವಿಧಾನದಲ್ಲಿ ಯಶಸ್ಸು ಕಂಡರೆ ಅದೇ ವಿಧಾನವನ್ನು ಎಲ್ಲದಕ್ಕೂ ಅಳವಡಿಸುತ್ತಾರೆ, ಅನ್ವಯಿಸುತ್ತಾರೆ. ವ್ಯಕ್ತಿಯಿಂದ ವ್ಯಕ್ತಿಗೆ ಮನಸ್ಸಿನ ಸಮಸ್ಯೆ ಬೇರೆ ರೀತಿಯಲ್ಲಿರುತ್ತದೆ. ತೀವ್ರತೆ ಮತ್ತು ತೀಕ್ಷ್ಣತೆ ಬೇರೆ ಬೇರೆಯಾಗಿರುತ್ತದೆ. ಅನೇಕ ಆಪ್ತಸಲಹಾಕಾರರು ಅನೇಕ ಕಾರ್ಯಾಗಾರಗಳನ್ನು ನೋಡಿ ಕೆಲ ದಿನಗಳಲ್ಲೇ ತಾವೂ ಕಾರ್ಯಾಗಾರಗಳನ್ನು ಆರಂಭಿಸಿ ವ್ಯಾಪಾರ ಆರಂಭಿಸುತ್ತಾರೆ.

ಮನಃಶಾಸ್ತ್ರ ತುಂಬಾ ಸೂಕ್ಷ್ಮವಾದ ವಿಚಾರ. ಆನ್ಲೈನ್ ನಿಂದಾಗಲೀ, ಬರಿಯ ಫೋನ್ ನಿಂದಾಗಲೀ, ಪತ್ರ ಮುಖೇನವಾಗಲೀ, ಸಮಸ್ಯೆ ಪರಿಹಾರವಾಗುವುದಿಲ್ಲ. ದುಡ್ಡು ಕೊಟ್ಟ ಹಿಂಸೆಗೆ ಅಥವಾ ಆಪ್ತಸಲಹಾಕಾರನಿಗೇ ಬೇಸರವೆನಿಸಿ ಕೇಸ್ ನ್ನು ನಿಲ್ಲಿಸಿರುತ್ತಾರೆ. ಮನಸ್ಸನ್ನು ಅರ್ಥ ಮಾಡಿಕೊಂಡು ಸಮಸ್ಯೆಯ ಹೊರಗೆ ಬರುವಂತೆ ಮಾಡಲು ವ್ಯಕ್ತಿಯ ಮನಸ್ಸಿನ ಒಳಗೆ ಮತ್ತು ಸಮಸ್ಯೆಯ ವಿಸ್ತಾರವನ್ನು ಅರಿತು ಮಾಡುವ ಕ್ರಿಯೆ ಆಪ್ತ ಸಲಹೆ. ದುಡ್ಡು ಮಾಡುವುದಕ್ಕೆ ಬೇರೆ ಉದ್ಯೋಗವನ್ನು ಹುಡುಕಿಕೊಳ್ಳಬಹುದು. ಇನ್ನೊಬ್ಬರ ಮನಸ್ಸಿನ ಜೊತೆ ಆಟವಾಡುವುದಕ್ಕೆ ಮನಃಶಾಸ್ತ್ರವನ್ನು ಬಳಸಿಕೊಳ್ಳುವುದು ನೈತಿಕ ಅಪರಾಧ, ಬೌಧ್ಧಿಕ ಅಸಹ್ಯ.

ಏನು ಮಾಡಬಹುದು?

ಮನಃಶಾಸ್ತ್ರಕ್ಕೆ ಸಂಬಂಧಿಸಿದ ಯಾವುದೇ ವಿಷಯ ಬರಲಿ ತಜ್ಞರೊಂದಿಗೆ ಮುಖಾ ಮುಖಿ ಚರ್ಚಿಸಿ. ದಯಮಾಡಿ ಆನ್ಲೈನ್ ಮೊರೆ ಹೋಗಬೇಡಿ. ಇನ್ನು ಮನಃಶಾಸ್ತ್ರವನ್ನು ಅಭ್ಯಾಸ ಮಾಡುತ್ತಿರುವ ಅಥವಾ ಮನಃಶಾಸ್ತ್ರದ ಅಂಗಡಿ ಇಟ್ಟ ವ್ಯಾಪರಿಗಳು ದಯಮಾಡಿ ಮನಃಶಾಸ್ತ್ರಕ್ಕೆ ಸಂಬಂಧಿಸಿದ ವಿವರಗಳನ್ನು ಕೇಸ್ ಹಿಸ್ಟರಿಗಳನ್ನು ಬರೆಯಬೇಡಿ. ಇದು ಮತ್ತೊಬ್ಬರನ್ನು ಉತ್ತೇಜಿಸುತ್ತದೆ. ನನಗೂ ಇದೇ ರೀತಿಯ ರೋಗವಿದೆ ಎಂದು ಮ್ಯಾಪ್ ಮಾಡಿಕೊಳ್ಳುವ ಮನಸ್ಥಿತಿಗೆ ಬರುತ್ತಾರೆ. ಬರಹಗಳಿಂದ ಅಪಾಯವಾಗುತ್ತಿದೆಯೇ ಹೊರತು ಉಪಯೋಗವಂತೂ ಆಗುತ್ತಿಲ್ಲ. ನಿಮ್ಮನ್ನು ನೀವು ಮಾರ್ಕೆಟ್ ಮಾಡಿಕೊಳ್ಳಬೇಕೆಂದರೆ “ಆಪ್ತ ಸಲಹೆ ಕೊಡಲಾಗುವುದು” ಎಂದು ಬೋರ್ಡ್ ಗಳನ್ನು ಹಾಕಿಕೊಳ್ಳಬಹುದು, ಫ್ಲೈಯರ್ಸ್ ಗಳನ್ನು ಮಾಡಿ ಹಂಚಬಹುದು. ಆದರೆ ಲೇಖನ ಬರೆದು ಉಪಯೋಗ ಮಾಡುತ್ತಿದ್ದೇರೆಂದುಕೊಂಡರೆ ತಪ್ಪು. ಅದರಿಂದ ಅಪಾಯವಾಗುತ್ತಿದೆ. ದಯಮಾಡಿ ತಿಳಿಯಿರಿ.

ಮೇಧಸ್ವಿ ತಂಡ ನಿರ್ವಹಿಸುತ್ತಿರುವ ಕಾಲದ ಕನ್ನಡಿಯಲ್ಲಿ ಹೊಸ ಬರಹ ಜಾಲತಾಣದಲ್ಲಿ ವಿಬಿಎಫ್ ನ ಸದಸ್ಯರು ಬರೆಯಬಹುದು. ಲೇಖನ, ಕಥೆ, ಕವನ, ಪ್ರಬಂಧ ಬರೆಯುವ ಆಸಕ್ತರು ಸಂಪರ್ಕಿಸಿ.
ಹರೀಶ್ ಆತ್ರೇಯ

 

9036709599

dwijodaya@gmail.com

www.denhym.com