ಸಂಪಾದಕೀಯ
ಲೇಖನ: ವೀಣಾ ಕುಲಕರ್ಣಿ
ಲೇಖನ: ವೀಣಾ ಕುಲಕರ್ಣಿ
ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.
ಆರಂಭಿಕ ದಿನಗಳು ಮತ್ತು ಪ್ರೇರಣೆ
ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.
ಕಾರ್ತೀಕ ಮಾಸವೆಂದರೆ ಸಂಭ್ರಮ. ಒಂದೆಡೆ ದೀಪಾವಳಿ ಮತ್ತೊಂದೆಡೆ ಕನ್ನಡ ರಾಜ್ಯೋತ್ಸವ. ದೀಪವೆಂದರೆ ಸ್ಥಿರತೆ, ಬೆಳಗುವಿಕೆ. ಸ್ಥಿರತೆಯೆಂದರೆ ಓದುಗರಿಗೆ ಅಚ್ಚರಿಯಾಗಬಹುದು. ದೀಪವು ಹೇಗೆ ಸ್ಥಿರವಾಗಿರಬಲ್ಲದು? ಭಗವದ್ಗೀತೆಯ ಶ್ಲೋಕವೊಂದು ಹೀಗಿದೆ, ’ಯಥಾ ದೀಪೋ ನಿವತ-ಸ್ಥೋ ನೇಂಗತೇ ಸೋಪಮ ಸ್ಮೃತ’ ಎಲ್ಲಿ ಹೆಚ್ಚು ಗಾಳಿಯಿಲ್ಲವೋ ಅಲ್ಲಿ ದೀಪವು ಸ್ಥಿರವಾಗಿ ನಿಲ್ಲುತ್ತದೆ. ಚಂಚಲತೆಯಿಲ್ಲದ ಕಡೆ ಮನಸ್ಸು ಏಕಾಗ್ರವಾಗಿರುತ್ತದೆ. ಉದ್ಯಮದಲ್ಲಿ ಸ್ಥಿರವಾಗಿ ನಿಲ್ಲುವುದು ಮತ್ತು ಅಚಂಚಲತೆಯನ್ನು ಕಾಯ್ದುಕೊಳ್ಳುವುದು ಅತೀ ಮುಖ್ಯ. ಕಾರ್ತೀಕ ಮಾಸದಲ್ಲಿ ದೀಪವು ನಮಗೆ ಏಕಾಗ್ರತೆಯನ್ನು ಮತ್ತು ಬೆಳಕನ್ನು ನೀಡಲಿ ಎಂದು ದ್ವಿಜೋದಯ ಆಶಿಸುತ್ತದೆ.
ಗೌರಿಮಿಮಾಯ ಸಲಿಲಾನಿ ತಕ್ಷತೀ
ಏಕಪದೀ ದ್ವಿಪದೀ ಸಾ ಚತುಷ್ಪದಿ
ಅಷ್ಟಾಪದಿ ನವಪದೀ ಬಭೂವುಷೀ
ಸಹಸ್ರಾಕ್ಷರಾ ಪರಮೇ ವ್ಯೋಮನ್
ತಸ್ಯಾಗ್ಂ ಸಮುದ್ರಾ ಅಧಿವಿಕ್ಷರಂನಿ
ತೇನ ಜೀವಂತಿ ಪ್ರದಿಶಶ್ಚತಸ್ರಃ
ಮೇಲಿನ ಸಾಲುಗಳನ್ನು ತೈತ್ತರೀಯ ಬ್ರಾಹ್ಮಣದಿಂದ ಆರಿಸಲಾಗಿದೆ. ಇದರ ಸಾರಾಂಶವಿಷ್ಟು, ಗೌರವರ್ಣದವಳಾದ ವಾಗ್ದೇವಿಯು ಪ್ರಪಂಚವನ್ನು ಸೃಷ್ಟಿಸುವಾಗ ಮಹಾ ಶಬ್ದವನ್ನು ಮಾಡಿದಳು ಅದರ ಪ್ರಣವಾಕಾರದಿಂದ ಏಕಪದಿಯೂ, ದ್ವಿಪದಿಯೂ, ಚತುಷ್ಪದಿಯೂ, ವೇದಾಂಗಗಳು ಪುರಾಣ ಧರ್ಮಗಳೂ ಸೇರಿದಂತಹ ಅಷ್ಟಪದಿಯೂ, ಮೀಮಾಂಸದಿಂದಾದಿಯಾಗಿ ಗಾಂಧರ್ವದ ವರೆಗಿನ ನವಪದಿಯೂ ಮತ್ತು ಹೆಚ್ಚಿನ ವಾಕ್ಯ ಸಂದರ್ಭಗಳಿಂದ ಸಹಸ್ರಾಕ್ಷಳೂ ಅದಳು.
ಈ ವಾಗ್ದೇವಿಯ ದಯೆಯಿಂದ ಭಾಷೆಗಳು ವಿಧ ವಿಧವಾಗಿ ಗೋಚರಿಸುತ್ತವೆ. ಅವುಗಳ ಶಬ್ದಗಳಿಂದ ಜೀವಿಗಳು ನಾಲ್ದಿಕ್ಕುಗಳಲ್ಲಿ ಜೀವಿಸುತ್ತವೆ. ಭಾಷೆಯೆನ್ನುವುದು ಮನಸ್ಸಿನ ಉತ್ಸವಮೂರ್ತಿ. ನಮ್ಮೊಳಗೆ ಬಂದ ಭಾವವನ್ನು ಹೊರಗೆ ಪ್ರವೇಶಪಡಿಸುವುದಕ್ಕೆ ಭಾಷೆಯು ವಾಹನವಾಗಿದೆ. ಅದನ್ನು ಮಾತೆಂದು ಆ ಮಾತು ಭಾಷೆಯ ರೂಪದಲ್ಲಿ ಮತ್ತೊಬ್ಬನ ಕಿವಿಗೆ ಪ್ರವೇಶಿಸಿ ನಮ್ಮ ಅನಿಸಿಕೆಯನ್ನು ಅವನಿಗೆ ದಾಟಿಸುತ್ತದೆ. ಹುಟ್ಟಿದ ಮಗು ’ಮ್’ ಕಾರವನ್ನ್ ಮೊದಲು ಉಚ್ಚರಿಸುತ್ತದೆ ತುಟಿಮುಚ್ಚಿ ತೆರೆಯುವಾದ ಗಾಳಿ ಕಂಠದಿಂದ ಹೊರಬರುವಾಗ ಈ ಶಬ್ದ ಉತ್ಪತ್ತಿಯಾಗುತ್ತದೆಯೆನ್ನುವುದು ತಿಳಿದೇ ಇದೆ.
ಇಂತಹ ಮಗು ಬೆಳೆಯುತ್ತಾ ಸುತ್ತಲಿನ ಜನರ ತುಟಿಚಾಲನೆ, ಶಬ್ದಗಳನ್ನು ಗ್ರಹಿಸುತ್ತಾ, ನೋಡುತ್ತಾ ಪದಗಳನ್ನು, ವಾಕ್ಯಗಳನ್ನು ನಿಧಾನವಾಗಿ ಕಲಿಯುತ್ತದೆ. ಭಾಷಾಃ ಸಂಕೇತವಶಾತ್ ಪದಾರ್ಥಗೋಚರಪ್ರವೃತ್ತಿ ನಿವೃತ್ತಿ ರೂಪವ್ಯವಹಾರೌಪಯಿಕ ವಾಗ್ವಿಶೇಷಾಃ ಎನ್ನುತ್ತಾನೆ ಭಟ್ಟಾಕಲಂಕ. ಭಾಷೆಯು ಸಂವಹನಕ್ಕೆ, ಸಂಭಾಷಣೆಗೆ ಅತೀ ಅಗತ್ಯವಾಗಿದೆ. ಉದ್ಯಮದಲ್ಲಂತೂ ಭಾಷೆಯ ಮಹತ್ತ್ವ ಮತ್ತೂ ಹೆಚ್ಚು. ನಮ್ಮ ಉದ್ಯಮದ ವಿವರಗಳನ್ನು ಗ್ರಾಹಕನಿಗೆ ತಲುಪಿಸುವುದಕ್ಕೆ ಪರಿಣಾಮಕಾರಿಯಾದ ಭಾಷೆಯ ಬಳಕೆ ಬೇಕೇ ಬೇಕು.
ಇಂತಹ ಭಾಷೆಗಳಲ್ಲಿ ಕನ್ನಡವು ಉನ್ನತ ಸ್ಥಾನವನ್ನು ಪಡೆದುಕೊಂಡಿದೆ. ಕನ್ನಡ ದ ಗ್ರಂಥ ಸಾಹಿತ್ಯವು ಮತ್ತು ಸಾಮಾನ್ಯ ಜನರ ಮಾತಿನ ಸಾಹಿತ್ಯವು ಎರಡೂ ಕನ್ನಡವನ್ನು ಒರೆಗೆ ಹಚ್ಚುತ್ತಾ ವಜ್ರದಂತೆ ಹೊಳಪನ್ನೀಯುತ್ತಿದೆ. ಇಂತಹ ಭಾಷೆಯ ಉತ್ಸವನ್ನು ಮಾಡುವ ಕನ್ನಡಿಗರು ಧನ್ಯರು. ಗ್ರಂಥಸ್ಥ ರೂಪದಲ್ಲಿ ಅಥವಾ ಮುದ್ರಿತ ರೂಪದಲ್ಲಿ ಬಂದ ಸಾಹಿತ್ಯವು ದಾಖಲೆಯಾಗಿ ಉಳಿಯುತ್ತಿದೆ. ಅದೇ ರೀತಿಯಲ್ಲಿ ಮೌಖಿಕ ಸಾಹಿತ್ಯವು ಶೃತ ಶ್ರೌತಗಳಲ್ಲಿ ನೆಲೆ ನಿಂತು , ಪರಂಪರೆಯಲ್ಲಿ ದಾಟುತ್ತಾ ಬರುತ್ತಿದೆ. ಇವೆರಡೂ ಕನ್ನಡ ಕೊಡುಗೆಗಳು. ದ್ವಿಜೋದಯ ಮುದ್ರಿತ ದಾಖಲೆಯಾಗಿ ಉದ್ಯಮದ ವಿವರಗಳನ್ನು ಹೊತ್ತು ಕನ್ನಡ ಸಾಹಿತ್ಯಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ. ಇದು ಹೀಗೇ ಮುಂದುವರೆದು ಸಾಹಿತ್ಯಾತ್ಮಕ ರೂಪದಲ್ಲೂ ಸಹ ದ್ವಿಜೋದಯವು ಎಲ್ಲರನ್ನೂ ಮುಟ್ಟಲಿ ಎನ್ನುವ ಆಶಯದೊಂದಿಗೆ ಓದುಗ ಬಂಧುಗಳಿಗೆ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು
ಸಂಪಾದಕೀಯ ವಿಭಾಗದಲ್ಲಿ ರಾಮಕೃಷ್ಣಭಟ್ ಹೆಸರು ತೆಗೆಯಿರಿ
’ಯಥಾ ದೀಪೋ ನಿವತ-ಸ್ಥೋ ನೇಂಗತೇ ಸೋಪಮ ಸ್ಮೃತ’ – Bold
ಪುಟ ೬ ಮತ್ತು ಏಳರಲ್ಲಿ ಯಶಸ್ವಿನಿಯ ಅರ್ಧ ಪುಟಗಳ ಜಾಹೀರಾತು ಬರುತ್ತದೆ
ಪುಟ ೧೬ ರಲ್ಲಿ ಜಾಹೀರಾತು ಬರುತ್ತದೆ.
ವ್ಯವಹಾರೋಕ್ತಿಗಳು (Business Quotes)- ಚಿನ್ಮಯ್ ಭಟ್
9036709599
dwijodaya@gmail.com
www.denhym.com
Welcome to Dwija entrepreneurs Network!