ಸಂಪಾದಕೀಯ
ಲೇಖನ: ವೀಣಾ ಕುಲಕರ್ಣಿ
ಲೇಖನ: ವೀಣಾ ಕುಲಕರ್ಣಿ
ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.
ಆರಂಭಿಕ ದಿನಗಳು ಮತ್ತು ಪ್ರೇರಣೆ
ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.
ಮಗುವಾಗಿ ಬಂದಿಹನು ನಗುವ ಶ್ರೀರಾಮ
ಜಗವಾಗಿ ನಿಂದಿಹನು ನೇತ್ರಾಭಿರಾಮ
ಬದುಕ ಬೆಳಗಿಸುವ ಆನಂದರಾಮ
ಒಳಗಣ್ಣನುರಿಸುವನು ಅಧ್ಯಾತ್ಮರಾಮ
ಓದುಗರಿಗೆ ಶ್ರೀರಾಮಚಂದ್ರನ ಪ್ರತಿಷ್ಠಾಪನಾ ಸಂದರ್ಭದ ಶುಭಾಶಯಗಳು. ರಾಮಾಯಣವೇ ನೀತಿಕಾವ್ಯವಾಗಿ ನಮ್ಮ ಮುಂದಿರುವಾಗ ನಾವು ನಮ್ಮ ಮಂದಿರವನ್ನು ಇಷ್ಟು ಕಾಲ ತೆಗೆದುಕೊಳ್ಳುವಂತಾದದ್ದು ನಮ್ಮ ದೇಶದ ದೌರ್ಭಾಗ್ಯ. ಆದರೆ ಮನೋ ಸಂಕಲ್ಪ ಮತ್ತು ದೇಶವೇ ಮೊದಲೆನ್ನುವ ಪ್ರಧಾನಿಯ ಕಾರಣದಿಂದ ನಾವಿಂದು ನಮ್ಮ ರಾಮನನ್ನು ಮತ್ತೆ ಕಾಣುತ್ತಿದ್ದೇವೆ. ಹನುಮನಂತೆ ಸೀತೆಯನ್ನು ರಾಮನ ಬಳಿಗೆ ಸೇರಿಸಿದ, ಸಂತನಂತೆ ತಪಗೈದು ದೇಶಕ್ಕೆ ರಾಮನನ್ನು ಕೊಟ್ಟ ಪ್ರಧಾನಿ ಮೋದಿಗೆ ದ್ವಿಜೋದಯ ತಂಡದಿಂದ ಅಭಿನಂದನೆಗಳು.
ದೇವಾಲಯವೆಂದರೆ ಭಕ್ತಿ ಮತ್ತು ಶಕ್ತಿಯ ಸಂಗಮ. ಅಧ್ಯಾತ್ಮಿಕ ಕೋನದಲ್ಲಿ ದೇಗುಲಗಳು ಎಲ್ಲರ ಒಳಗನ್ನು ಪರಿಚಯಿಸಿದರೆ, ಸಮುದಾಯದ ದೃಷ್ಟಿಯಲ್ಲಿ ಜನರನ್ನು ಒಟ್ಟಿಗೆ ಸೇರಿಸುತ್ತದೆ. ಇದರ ಜೊತೆಗೆ ಶಕ್ತಿಯ ಕೇಂದ್ರವಾಗಿಯೂ ಉದ್ಯಮದ ಶಕ್ತಿಯಾಗಿಯೂ ದೇವಾಲಯಗಳು ಕಾರ್ಯನಿರ್ವಹಿಸುತ್ತವೆ. ಹೂಮಾರುವ ಹೂವಾಡಗಿತ್ತಿಯಿಂದ, ದೇವಾಲಯವನ್ನು ರೂಪಿಸುವ ಇಂಜಿನಿಯರ್, ಕಟ್ಟುವ ಕೆಲಸಗಾರ, ನಿರ್ವಹಿಸುವ ನಿರ್ವಾಹಕ, ಸಂದಣಿ ನಿಯಂತ್ರಿಸುವವನು, ಚಪ್ಪಲಿ ಕಾಯುವವನು, ಉದ್ಯಮದಲ್ಲಿನ ಎಲ್ಲಾ ಆಯಾಮಗಳೂ ಸಹ ಒಂದು ದೇಗುಲವನ್ನು ನಿರ್ವಹಿಸುವಲ್ಲಿ ಕಾಣುತ್ತದೆ. ಹೆಚ್ ಆರ್ , ಮಾರ್ಕೆಟಿಂಗ್, ಮ್ಯಾನೇಜ್ಮೆಂಟ್, ಕಂಟೆಂಟ್ ರೈಟಿಂಗ್, ಪ್ರಾಜೆಕ್ಟ್ಸ್ ಎಲ್ಲವೂ ಇಲ್ಲಿವೆ. ಸುಮಾರು ನಲವತ್ತು ಉದ್ಯಮಗಳನ್ನು ತನ್ನೊಟ್ಟಿಗೆ ಕರೆದೊಯ್ಯುವ ದೇವಾಲಯವು ಒಂದು ವ್ಯವಸ್ಥೆಯಾಗಿ ಎದ್ದು ನಿಲ್ಲುತ್ತದೆ. ಇದಲ್ಲವೇ ನಮ್ಮ ಧರ್ಮ ಮಹತ್ವ. . ಕಲೆ, ಭಕ್ತಿ, ಶಕ್ತಿ ಎಲ್ಲದರ ಮಿಳಿತವೇ ದೇವಾಲಯ. ಪ್ರಾಯಃ ಯಾವುದೇ ಪಂಥದಲ್ಲಿಯೂ ಇಂತಹ ವ್ಯವಸ್ಥೆ ಕಾಣಿಸುವುದಿಲ್ಲ. ದೇವಾಲಯದ ಬದಲು ಇನ್ನೇನಾದರೂ ಮಾಡಬೇಕಿತ್ತು ಎನ್ನುವವರಿಗೆ ಇವೆಲ್ಲಾ ಅರ್ಥವಾಗದು.
ಇನ್ನು ರಾಮಾಯಣವು ಆದರ್ಶ, ಪ್ರೀತಿ, ಭಾದ್ಯತೆ, ನೀತಿ, ಎಲ್ಲವನ್ನು ಅತ್ಯುನ್ನತಮಟ್ಟದಲ್ಲಿ ತೋರಿಸಿದ ಮಹಾ ಕಥಾನಕ. ಅವೆಲ್ಲವೂ ನಮ್ಮ ಭಾರತದಲ್ಲಿ ಮಾತ್ರವೇ ನಡೆಯುವಂತಹುದು ಎನ್ನುವುದು ಅತಿಶಯೋಕ್ತಿಯಲ್ಲ. ಈ ಮಾತುಗಳನ್ನು ಗಮನಿಸಿ
ರಾಜಾತು ಧರ್ಮೇಣ ಹಿ ಪಾಲಯಿತ್ವಾ
ಮಹಾಮತಿರ್ದಂಡಧರಃ ಪ್ರಜಾನಾಮ್
ಅವಾಪ್ಯ ಕೃತ್ಸ್ನಾಂ ವಸುಧಾಂ ಯಥಾವತ್
ಇತಶ್ಚ್ಯುತಃ ಸ್ವರ್ಗಮುಪೈತಿ ವಿದ್ವಾನ್||
ರಾಮಾಯಣದಲ್ಲಿನ ನೀತಿಯನ್ನು ಸಾರವತ್ತಾಗಿ ಕಟ್ಟಿಕೊಡುವ ಈ ಸಾಲುಗಳು, ಬುದ್ಧಿವಂತನಾದ ಅರಸನು ದಂಡಧಾರಿಯಾಗಿ ಧರ್ಮದಿಂದ ಜನರನ್ನು ಪಾಲಿಸಬೇಕು, ಎಲ್ಲಾ ರಾಷ್ಟ್ರಗಳನ್ನು ಗೆದ್ದನಂತರ ಮರಣದ ನಂತರ ಸ್ವರ್ಗವನ್ನು ಹೊಂದುತ್ತಾನೆ’ ಎನ್ನುತ್ತದೆ. ಧರ್ಮ ಮತ್ತು ಪಾಲನೆ ಜೊತೆಗೆ ಕ್ಷಾತ್ರವನ್ನೂ ಹೇಳುವ ನೀತಿ ಎಲ್ಲ ಕಾಲಕ್ಕೂ ಹೊಂದುವಂತಹುದು. ಇದು ಉದ್ಯಮಕ್ಕೂ ಅನ್ವಯವಾಗುತ್ತದೆ. ನಾವೆಲ್ಲರೂ ಶ್ರೀರಾಮನ ದಾರಿಯನ್ನೇ ಅನುಸರಿಸೋಣ. ಜೈ ಶ್ರೀರಾಮ್
9036709599
dwijodaya@gmail.com
www.denhym.com
Welcome to Dwija entrepreneurs Network!