ಸಂಪಾದಕೀಯ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಆತ್ಮೀಯರೇ,
ಉದ್ಯಮ ಸಾಹಿತ್ಯ ಸಂಭ್ರಮದ ದಿನ ದ್ವಿಜೋದಯ ತಂಡದ ಹೊಸ ಸಾಹಸ ’ಡೆನ್ ಪ್ರಕಾಶನ’ ಸಂಸ್ಥೆಯು ನವೆಂಬರಿನಲ್ಲಿ ಆರಂಭವಾಯ್ತು. ಚೊಚ್ಚಲ ಕಾಣ್ಕೆಯಾಗಿ ದ್ವಿಜೋದಯದ ಅಂಕಣಕಾರರಾದ ಡಾ|| ಸೌಮ್ಯಾ ಹಿಮಗಿರೀಶ್ ಮತ್ತು ಶ್ರೀಮತಿ ಸುಮನಾ ವೆಂಕಟ್ ರವರ ಅಂಕಣ ಬರಹಗಳ ಪುಸ್ತಕಗಳು ಲೋಕಾರ್ಪಣೆಗೊಂಡವು. ಉದ್ಯಮವನ್ನು ಮಾತು ಸಾಹಿತ್ಯವನ್ನೂ ಒಗ್ಗೂಡಿಸಿ ಹೊಸತೊಂದು ಪ್ರಯತ್ನವನ್ನು ಎರಡು ವರ್ಷಗಳಿಂದ ಮಾಡುತ್ತಿದೆ. ಉದ್ಯಮದಲ್ಲಿರುವ ಸಾಹಿತ್ಯಾಸಕ್ತರು ಮತ್ತು ಉದ್ಯಮದಲ್ಲಿನ ತಾಂತ್ರಿಕ ಬರಹಗಳು ಸಾಹಿತ್ಯದ ಪ್ರಕಾರಕ್ಕೆ ಸೇರುವಂತಹವೇ ಆಗಿದೆ. ವೃತ್ತಿ ಮತ್ತು ಉದ್ಯಮದ ಬರಹಗಳು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಬರೆದು ದಾಟಿಸುವುದು ಇದರ ಮೂಲ ಉದ್ದೇಶವಾಗಿದೆ. ರಾಷ್ಟ್ರೀಯವಾದ ಮತ್ತು ಸಮಾಜಕ್ಕೆ ಅಗತ್ಯವಾಗಿ ಬೇಕಾಗುವ ವಸ್ತುವನ್ನು ಓದುಗರಿಗೆ ತಲುಪಿಸುವ ಉದ್ದೇಶ ನಮ್ಮದು. ಸತ್ಯವನ್ನು ನಿರ್ಭಯವಾಗಿ ಹೇಳುವ ಲೇಖಕರು, ಸಂಶೋಧನಾ ದೃಷ್ಟಿಕೋನವಿರುವ ಬರಹಗಾರರಿಗೆ ’ಡೆನ್ ಪ್ರಕಾಶನ ಸಂಸ್ಥೆ’ ಸದಾ ತೆರೆದಿರುತ್ತದೆ.

ಕ್ಯಾಲೆಂಡರ್ ಹೊಸ ವರ್ಷಕ್ಕೆ ಅಡಿಯಿಡುತ್ತಿದ್ದೇವೆ. ಪ್ರಕೃತಿಯಲ್ಲಿ ಯಾವ ಬದಲಾವಣೆಯಾಗದಿದ್ದರೂ ಅನೇಕ ವರ್ಷಗಳಿಂದ ಈ ಆಚರಣೆಯನ್ನು ಆಚರಿಸುತ್ತಿರುವುದರಿಂದ ಇದಕ್ಕೊಂದು ಮಹತ್ವ ಬಂದಿದೆ. ಪ್ರಸಕ್ತ ಸನ್ನಿವೇಶದಲ್ಲಿ ಹೊಸ ವರ್ಷಕ್ಕೊಂದು ಸ್ಪಷ್ಟ ಗುರಿಯನ್ನು ಹೊಂದುವ ನಿರ್ಧಾರವನ್ನು ಮಾಡುವವರು ಅನೇಕರಿದ್ದಾರೆ. ಉದ್ಯಮದಲ್ಲೂ ಸಹ ಹೊಸ ವರ್ಷಕ್ಕೆ ಹೊಸ ಪ್ರಯೋಗಗಳು ಸಾಹಸಗಳನ್ನು ಮಾಡುವ ಉದ್ಯಮಿಗಳಿದ್ದಾರೆ. ಆತ್ಮೀಯ ಉದ್ಯಮಿಗಳೇ ನಿಮ್ಮ ಹೊಸ ಸಾಹಸವನ್ನು ಆರಂಭಿಸುವ ಮುನ್ನ ಉತ್ಸಾಹ, ಖಚಿತತೆ, ಸ್ಪಷ್ಟತೆ, ಆರ್ಥಿಕ ಬಲಾಬಲಗಳನ್ನು ತಿಳಿದುಕೊಂಡು ಮುನ್ನುಗ್ಗಿ. ಚಾಲೆಂಜ್ ಗಳು ನಮ್ಮನ್ನು ಸದಾ ಹೊಸ ಅನುಭವಕ್ಕೆ ತೆರೆದಿಡುತ್ತವೆ. ಬುದ್ಧಿಯನ್ನು ಚುರುಕು ಮಾಡುವುದರಿಂದ ಸವಾಲುಗಳನ್ನು ಎದುರಿಸುವ ಸ್ಥೈರ್ಯವನ್ನು ಮತ್ತು ಚುಬುಕುತನವನ್ನೂ ನೀಡುತ್ತದೆ. ಏಕತಾನತೆಯು ಅನೇಕ ಬಾರಿ ಸಾಚುರೇಷನ್ ಬಿಂದುವಿನಲ್ಲಿ ನಮ್ಮನ್ನು ನಿಲ್ಲಿಸಿಬಿಡುವ ಸಾಧ್ಯತೆ ಇರುತ್ತದೆ. ಒಂದೇ ಬಗೆಯ ಕೆಲಸವನ್ನು ಮಾಡುತ್ತಾ ಮನಸ್ಸು ಕವಲುದಾರಿಯನ್ನು ಹುಡುಕುತ್ತದೆ ಮತ್ತು ಅಡ್ಡದಾರಿಯ ಬುದ್ಧಿಯನ್ನು ಹೆಚ್ಚಿಸುತ್ತದೆ. ಮನಸ್ಸು ಏನಾದರೂ ಒಂದು ಮಾಡುತ್ತಲೇ ಇರಬೇಕು. ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ.

ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ ।
ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ ।।
ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ ।
ತಾಣ ನಿನಗಿಹುದಿಲ್ಲಿ – ಮಂಕುತಿಮ್ಮ ।।

ಎಂಬ ಮಂಕುತಿಮ್ಮನ ಮಾತು ಸತ್ಯ. ನಿಮ್ಮೆಲ್ಲರಿಗೂ ಕ್ಯಾಲೆಂಡರ್ ಹೊಸ ವರ್ಷದ ಶುಭಾಶಯಗಳು

 

9036709599

dwijodaya@gmail.com

www.denhym.com