ಸಂಪಾದಕೀಯ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ಆತ್ಮೀಯ ಓದುಗರೇ,
ಎಲ್ಲರಿಗೂ 78ನೆಯ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಗುಲಾಮಗಿರಿಯಿಂದ ಮುಕ್ತರಾಗಿ, ಸ್ವತಂತ್ರವಾಗಿ ೭೮ ವರ್ಷಗಳಾಗಿವೆ. ಸ್ವತಂತ್ರವೆಂದರೆ ಜವಾಬ್ದಾರಿ. ಸ್ವೇಚ್ಛಾಚಾರವಲ್ಲದ, ಸಾಮಾಜಿಕ ಬದುಕನ್ನು ಕದಡದ, ಅಖಂಡ ಭಾರತದ ಪರಂಪರೆಯನ್ನು ಅನುಸರಿಸುತ್ತಾ ಹಿಂದೂಸ್ಥಾನದ ಔನ್ನತ್ಯವನ್ನು ತಿಳಿದುಕೊಂಡು ಬದುಕುವ ಜವಾಬ್ದಾರಿಯೇ ನಮ್ಮ ಸ್ವಾತಂತ್ಯದ ಗುರಿಯಾಗಿರಬೇಕು. ಪತ್ರಿಕೋದ್ಯಮದ ಸ್ವಾತಂತ್ಯವಿರುವುದು ನಿಸ್ಪೃಹ ಮತ್ತು ಜವಾಬ್ದಾರಿಯುತ ಬರವಣಿಗೆಯಲ್ಲಿ. ತುಳಿದು ಬದುಕುವ ಕ್ರೌರ್ಯದಿಂದ ಮುಕ್ತವಾದ ವ್ಯಕ್ತಿತ್ವ ಪತ್ರಿಕೋದ್ಯಮಿಗಳ ಮತ್ತು ಎಲ್ಲಾ ಮನುಷ್ಯರ ಸ್ವಾಭಾವಿಕ ಗುಣವಾಗಿದ್ದರೆ ಸದ್ವಿಪ್ರ ಎನ್ನುವ ಪದಕ್ಕೆ ಮತ್ತದರ ಅರ್ಥಕ್ಕೆ ಮಹತ್ವ ಬರುತ್ತದೆ.

ಪ್ರಿಯ ಉದ್ಯಮ ಮಿತ್ರರೇ ದ್ವಿಜೋದಯ ಆರಂಭವಾಗಿ ಒಂದು ವರ್ಷವಾಯ್ತು. ಹನ್ನೆರಡು ಉದ್ಯಮಿಗಳನ್ನು ಪರಿಚಯಿಸಿ, ನೂರಾರು ವಿಭಿನ್ನ ಲೇಖನಗಳನ್ನು ಟಂಕಿಸಿ, ಲಕ್ಷಾಂತರ ಜನಕ್ಕೆ ಓದುವ ರುಚಿಯನ್ನು ಹೊತ್ತಿಸುತ್ತಿದೆ ನಮ್ಮ ದ್ವಿಜೋದಯ. ಇನ್ನೂ ಪರಿಶ್ರಮವನ್ನು ಬೇಡುತ್ತದೆ ಈ ವಿಭಾಗ. ಪ್ರತಿಬಾರಿಯೂ ಹೊಸಬಗೆಯನ್ನೇ ನೀಡುವ ಸಂಕಲ್ಪದೊಂದಿಗೆ ಹೊರಡುತ್ತೇವೆ. ಸಾಗರದಾಚೆಗೂ ವಿಸ್ತರಿಸಿ ನಮ್ಮ ಪತ್ರಿಕೆಯು ಓದುಗ ಬಳಗವನ್ನು ಸಂಪಾದಿಸಿಕೊಳ್ಳುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿ. ಹಲವು ಉದ್ಯಮಿಗಳ ಜಾಹೀರಾತುಗಳು ನಮ್ಮ ಪತ್ರಿಕೆಯಲ್ಲಿ ವಿರಾಜಿಸಿವೆ ತನ್ಮೂಲಕ ಅವರಿಗೆ ಗ್ರಾಹಕರನ್ನೂ ಕೊಟ್ಟಿದೆ. ಈ ಎಲ್ಲಾ ಅಂಶಗಳನ್ನೂ ಮನದಲ್ಲಿಟ್ಟುಕೊಂಡೇ ನಾವು ಎರಡನೆಯ ವರ್ಷಕ್ಕೆ ಕಾಲಿಡುತ್ತಿದ್ದೇವೆ. ವಿನೂತನ ರೀತಿಯಲ್ಲಿ ಪತ್ರಿಕೆಯನ್ನು ರಚಿಸುತ್ತಾ ಜಾಹೀರಾತುದಾರಿಗೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸುವತ್ತ ನಮ್ಮ ಗಮನ ಹರಿಯುತ್ತಿದೆ. ಡಿಜಿಟಲ್ ಮಾಧ್ಯಮದಲ್ಲಿ ಜಾಹೀರಾತುದಾರರಿಗೆ ಹೆಚ್ಚಿನ ಪ್ರಕಾಶವನ್ನು ಕೊಡುವುದು, ಗ್ರಾಹಕರನ್ನು ನೇರವಾಗಿ ಸಂಪರ್ಕಿಸುವಂತೆ ಮಾಡುವುದು ಗುರಿಯಾಗಲಿದೆ. ಇವೆಲ್ಲವೂ ಪತ್ರಿಕೆಯ ದೃಷ್ಟಿಯಿಂದ ಮತ್ತು ಓದುಗ,ಜಾಹೀರಾತುದಾರ ದೃಷ್ಟಿಯಿಂದ ಬೆಳವಣಿಗೆಯಾಗಬೇಕಾದ ಅಂಶಗಳು.

ಪ್ರಿಯ ಓದುಗರೇ, ಲೇಖನಗಳು ನಿಮ್ಮ ಮನಸ್ಸಿಗೆ ಹಿಡಿಸಿದ್ದರೆ ದಯಮಾಡಿ ನಮ್ಮ ಪತ್ರಿಕೆಯ ಮೈಲ್ ಗೆ ಪ್ರತಿಕ್ರಿಯೆಯನ್ನು ನೀಡಿ. ನಿಮ್ಮ ಅಭಿಪ್ರಾಯಗಳು, ಅನಿಸಿಕೆಗಳು, ಸಲಹೆಗಳು ನಮಗೆ ಅತ್ಯಮೂಲ್ಯವಾದುದು.

ಇಡಿ ಪತ್ರಿಕೆಯನ್ನು ಜವಾಬ್ದಾರಿಯುತವಾಗಿ ಹೊತ್ತು ಮುನ್ನಡೆಸುತ್ತಿರುವ ಶ್ರೀ ಶ್ರೀಧರ್ ನಾಗರಾಜ್, ಪ್ರಸನ್ನ ವಿ ಕುಲಕರ್ಣಿ, ಮೋಹನ್ ಮತ್ತು ವೀಣಾ ಕುಲಕರ್ಣಿಯವರಿಗೆ ಎಷ್ಟು ಕೃತಜ್ಞತೆಯನ್ನು ತಿಳಿಸಿದರೂ ಸಾಲದು. ಎಲ್ಲಾ ಬ್ರಾಹ್ಮಣ ಬಂಧುಗಳಿಗೂ, ಉದ್ಯಮಿಗಳಿಗೂ ದ್ವಿಜೋದಯದ ವತಿಯಿಂದ ಶುಭಾಶಯಗಳು. ಶ್ರಾವಣ ಮಾಸ ಹಬ್ಬಗಳ ಸಾಲು ಸಾಲು, ನಿಮ್ಮ ಅವಶ್ಯಕತೆಗಳನ್ನು ನಮ್ಮ ತಂಡಕ್ಕೆ ತಿಳಿಸಿ. ಹಬ್ಬಕ್ಕೆ ಸಂಬಂಧಿಸಿದ ನಿಮ್ಮೆಲ್ಲಾ ಅಗತ್ಯಗಳನ್ನು ನಮ್ಮ ದ್ವಿಜ ತಂಡ ಪೂರೈಸಲು ಸಿದ್ಧವಾಗಿದೆ.

ನಿಮ್ಮ
ಹರೀಶ್ ಆತ್ರೇಯ

 

9036709599

dwijodaya@gmail.com

www.denhym.com