ಸಂಪಾದಕೀಯ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

ದ್ವಿಜೋದಯದ ಓದುಗರಿಗೆ, ಸುತ್ತಲಿನ ಪ್ರಕೃತಿ ಹೊಸತೊಂದು ರೂಪವನ್ನು ಪಡೆಯುವ ಯುಗಾದಿ ಹಬ್ಬದ ಶುಭಾಶಯಗಳು. ವಿವಿಧ ಬಣ್ಣಗಳಿಂದ ಕಂಗೊಳಿಸುವ ಚಿಗುರು, ಹೂವುಗಳ ಅಂದವನ್ನು ಸವಿಯದ ಅರಸಿಕರು ಭಾರತದಲ್ಲಿಲ್ಲ. ದಾರಿಗುಂಟ ಸಾಗುವಾಗ ಸಿಗುವ ಮರಗಿಡಬಳ್ಳಿಗಳನ್ನು ಗಮನಿಸಿ ಅಲ್ಲಿನ ವೈಚಿತ್ರ್ಯಗಳನ್ನು ಮನಸ್ಸಿಗೆ ತಂದುಕೊಂಡಾಗ ಮುದಗೊಳ್ಳುವುದು ರಸಿಕರ ಹೃದಯ. ಇದು ಜ್ಞಾನ-ವಿಜ್ಞಾನಗಳ ಬಾಂಧ್ಯವ್ಯ. ಇದೇ ಧಾಟಿಯಲ್ಲಿ ನಾವು ನಮ್ಮ ಉದ್ಯಮದ ಆಸುಪಾಸು ಗಮನಿಸುತ್ತಾ ಹೋದಾಗ ಅಲ್ಲಿನ ಸ್ಥಿರತೆ, ಅಳ್ಳಕ, ಎಲ್ಲವೂ ತಿಳಿಯುವುದು ಸಾಧ್ಯ. ಶಂಕರ ಭಗವತ್ಪಾದ ಗೀತಾ ಭಾಷ್ಯದಲ್ಲೊಂದು ಮಾತಿದೆ ” ಜ್ಞಾನಂ ಶಾಸ್ತ್ರೋಕ್ತಪದಾರ್ಥಾನಾಂ ಪರಿಜ್ಞಾನಂ, ವಿಜ್ಞಾನಂ ತು ಶಾಸ್ತ್ರತೋ ಜ್ಞಾತಾನಾಂ ತಥೈವ ಸ್ವಾನುಭವಕರಣಂ” ಎಂದರೆ ಜ್ಞಾನವೆಂದರೆ ಥಿಯರಿಯ ಮೂಲಕ ತಿಳಿದುಕೊಳ್ಳುವ ಸಂಗತಿ, ವಿಜ್ಞಾನವು ಅದನ್ನೇ ಪ್ರಾಕ್ಟಿಕಲ್ ರೀತಿಯಲ್ಲಿಅನುಭವಕ್ಕೆ ತಂದುಕೊಡುತ್ತದೆ. ನಾವು ಉದ್ಯಮದ ಬಗೆಗೆ ಕೇಳಿ ತಿಳಿದುಕೊಂಡ ಜ್ಞಾನವು ಒಂದೆಡೆಯಾದರೆ ಅದೇ ಉದ್ಯಮದೊಳಗೆ ಇಳಿದಾಗ ಆಗುವ ಅನುಭವ ನಮ್ಮನ್ನು ಮತ್ತಷ್ಟು ಪಕ್ವಗೊಳಿಸುತ್ತದೆ.

ಉದ್ಯಮದ ಹಲವಾರು ಮಜಲುಗಳನ್ನು ಓದುಗರಿಗೆ ಕೊಡುವ ಉದ್ದೇಶದಿಂದ ಆರಂಭವಾದ ಪತ್ರಿಕೆ , ಗ್ರಾಹಕರೊಟ್ಟಿಗೆ, ಓದುಗರೊಟ್ಟಿಗೆ ಉತ್ತಮ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಸಾಗುತ್ತಿದೆ. ಉದ್ಯಮದಲ್ಲಿ ಪ್ರಮುಖ್ಯವಾಗಿ ಬೇಕಾಗಿರುವುದು ನಿರ್ಮಲವಾದ ಬಾಂಧವ್ಯ. ಭಾರತೀಯ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಡೆಯುವ ನಮ್ಮ ಸಭೆಗಳು ಇಲ್ಲಿನ ಸಂಪ್ರದಾಯ, ಮೌಲ್ಯಗಳನ್ನು ನಿರಂಕುಶವಾಗಿ ಪ್ರಚುರಪಡಿಸುತ್ತವೆ. ಹೆಂಗೆಳೆಯರಿಗೆ ಬಾಗಿನ ಕೊಡುವುದರಿಂದ ಅರಂಭವಾಗಿ ಬಂಧುತ್ವದ ಮಾತುಕತೆಗಳಲ್ಲಿ ಆತ್ಮೀಯತೆಯನ್ನು ಹೆಚ್ಚಿಸುವಂತಹ ವಾತಾವರಣ ಸಭೆಗಳಲ್ಲಿ ಕಾಣುವುದು ಕೆಲವು ಸಭೆಗಳಲ್ಲಿ ಮಾತ್ರ. ಹೆಚ್ಚಿನಂಶ ಸಭೆಗಳಲ್ಲಿ ಕಾಣುವುದು ಪಾಶ್ಚಾತ್ಯ ಕಲ್ಪನೆಯ ಸಭೆಗಳು. ಅತಿಯಾದ ಶಿಸ್ತು, ಅರ್ದ್ರತೆ, ಮಾರ್ದವತೆಯೇ ಇಲ್ಲದ ಕಠಿಣ ಧೋರಣೆ, ಮೌಡ್ಯವನ್ನೇ ಹೆಚ್ಚಾಗಿ ಬಿಂಬಿಸುವ ಕಾರ್ಯಾಗಾರಗಳು, ಇವೆಲ್ಲವೂ ಆದೇಶದ ಜನಕ್ಕೆ ಮತ್ತು ಮನಸ್ಥಿತಿಗೆ ಹೊಂದಿಕೊಳ್ಳುತ್ತವೆಯೇ ಪರಂತು ನಮ್ಮ ದೇಶದಲ್ಲಲ್ಲ. ಭಾರತೀಯತೆಯನ್ನು ಹೆಚ್ಚಾಗಿ ಬಿಂಬಿಸುವ ಸಭೆಗಳು ಹೆಚ್ಚಾಗಲಿ ಎಂದು ಆಶಿಸೋಣ.

ಉದ್ಯಮವೇ ಆಗಲಿ, ಆವ ಕಾರ್ಯವೇ ಆಗಲಿ ಮನಸ್ಸಿನಲ್ಲಿ ಮೂಡುವುದು ತಡವಲ್ಲ ಆದರೆ ಅದನ್ನು ಅನುಷ್ಟಾನಗೊಳಿಸುವುದು ಧೈರ್ಯದ ಸಂಗತಿ. ಹಿಂದಡಿಯಿಡದೇ ನೆನೆಸಿಕೊಂಡ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗುವ ಜಾಣ್ಮೆ ಉದ್ಯಮಿಗೆ ಇರಬೇಕಾಗುತ್ತದೆ. ಭರ್ತೃಹರಿಯ ಮಾತನ್ನು ಗಮನಿಸೋಣ ರತ್ನೈರ್ಮಹಾಬ್ಧೇಸ್ತುತುಷುರ್ನ ದೇವಾ | ನ ಭೇಜಿರೇ ಭೀಮವಿಷೇಣ ಭೀತಿಮ್|| ಸುಧಾಂ ವಿನಾ ನಪ್ರಯುಯುರ್ವಿರಾಮಂ| ನ ನಿಶ್ಚಿತಾರ್ಥದ್ವಿರಮಂತಿ ಧೀರಾಃ|| ಸಮುದ್ರ ಮಥನದಲ್ಲಿ ಬೆಲೆಬಾಳುವ ರತ್ನ , ಭಯಂಕರವಾದ ವಿಷ ಏನೇ ಬಂದರೆ ಆಸೆ ಪಡದೆ, ಹೆದರದೆ ತಮ್ಮ ಕೆಲಸವನ್ನು ಮುಂದುವರೆಸಿದರು. ಅದೇ ರೀತಿಯಲ್ಲಿ ಧೀರರು ತಮ್ಮ ಕೆಲಸವನ್ನು ಪೂರ್ಣಗೊಳಿಸುವವರೆಗೂ ಅವರು ಉದ್ಯಮದಿಂದ ಹೊರನಡೆಯುವುದಿಲ್ಲ. ನಮ್ಮ ಸಹೋದ್ಯಮಿಗಳು ಈ ಮಾತನ್ನು ಸದಾ ಗಮನದಲ್ಲಿರಿಸಿಕೊಂಡು ಮುನ್ನಡೆಯುವುದು ಅತ್ಯವಶ್ಯ.

ನವೋದ್ಯಮಿಗಳಿಗೆ, ಹೊಸತನ್ನು ಸದಾ ಅನ್ವೇಷಿಸುವ ಮನಸ್ಸುಗಳಿಗೆ ಯುಗಾದಿ ಸಂಭ್ರಮವಾಗಲಿ. ಎಲ್ಲರಿಗೂ ನೂತನ ವರ್ಷದ ಶುಭಾಶಯಗಳು

ಸಂಪಾದಕೀಯ
೧) ಹರೀಶ್ ಆತ್ರೇಯ ಲೇಖನ
೨) ಮುರಳೀಧರ ಪರಿಚಾತ್ಮಕ ಲೇಖನ
೩) ಅನುಪಮಾ ಲೇಖನ
೪) ಸೌಮ್ಯ ಲೇಖನ
೫) ಆನಂದ ಮೂರ್ತಿ ಲೇಖನ
೬) ಸುಮನಾ ಲೇಖನ
೭) ಅಜಿತ್ ಲೇಖನ
೮) ಬುಧ್ ತ್ರಿವಿಕ್ರಮ್ ಲೇಖನ

 

9036709599

dwijodaya@gmail.com

www.denhym.com