ಸಂಪಾದಕೀಯ
ಲೇಖನ: ವೀಣಾ ಕುಲಕರ್ಣಿ
ಲೇಖನ: ವೀಣಾ ಕುಲಕರ್ಣಿ
ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.
ಆರಂಭಿಕ ದಿನಗಳು ಮತ್ತು ಪ್ರೇರಣೆ
ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.
ಸಂಪಾದಕೀಯ
ಆತ್ಮೀಯ ಓದುಗರೇ… ಕಳೆದ ತಿಂಗಳಲ್ಲಿ ಜಿ ಎಸ್ ಟಿ ಯ ಹೊಸ ರೂಪಗಳು ಗ್ರಾಹಕ ಮತ್ತು ಉದ್ಯಮ ಸ್ನೇಹಿಯಾಗಿ ಬಂದದ್ದು ಪ್ರಮುಖ ಸಂಗತಿ. ನವರಾತ್ರಿಯ ಉಡುಗೊರೆಯೆಂಬಂತೆ ಪ್ರಧಾನಿಯವರು ಭಾರತದ ಜನತೆಗೆ ಮಹದುಪಕಾರವನ್ನು ಮಾಡಿದ್ದಾರೆ. ಹಲವು ಉತ್ಪನ್ನಗಳ ಮೇಲಿನ ಜಿ ಎಸ್ ಟಿ ಸುಂಕವು ಕೆಳಗಿಳಿಯುವುದರಿಂದ ಗ್ರಾಹಕನ ಕೊಂಡುಕೊಳ್ಳುವ ಆಸಕ್ತಿ ಹೆಚ್ಚಾಗುತ್ತದೆ ತತ್ಪರಿಣಾಮ ಉತ್ಪಾದನೆಗೂ ಸಹಕಾರಿ. ಇನ್ನೂ ಹಲವು ಜನರಿಗೆ ಕೆಲಸವನ್ನು ಸಹ ಈ ವ್ಯವಸ್ಥೆಯು ನೀಡಲಿದೆ. ಇವೆಲ್ಲವೂ ಒಂದಕ್ಕೊಂದು ಸೇರಿಕೊಂಡ ಕೊಂಡಿಯಾಗಿದೆ. ಅಮೇರಿಕಾವು ಭಾರತವನ್ನು ಬಗ್ಗಿಸಲು ಬಹಳ ಪ್ರಯತ್ನ ಪಡುತ್ತಿದೆ ಆದರೆ ನಮ್ಮನ್ನು ಕಾಯುವ ಮೋದಿಯೆಂಬ ಕೈಯಿದೆ. ನಾವು ಸುರಕ್ಷಿತವಾಗಿದ್ದೇವೆ.
ವಿಜಯ ದಶಮಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ. ಭಾರತದ ಪ್ರಭಾವಿ ಮತ್ತು ಪರಿಣಾಮಕಾರಿಯಾದ ಸಂಘಟನೆ ಇಂದು ವಿಶ್ವದ ಅನೇಕ ಕಡೆ ತನ್ನ ಶಾಖೆಗಳನ್ನು ಹರಡಿದೆ. ಸಂಘದ ಉದ್ದೇಶ ದೇಶಸೇವೆ. ರಾಷ್ಟ್ರಕ್ಕೆ ತನ್ನ ಕಾರ್ಯಕರ್ತರನ್ನ ಸಮರ್ಪಿಸುವ ಮಹೋನ್ನತ ಕಾರ್ಯವನ್ನು ಸಂಘ ಮಾಡುತ್ತಿದೆ. ಪ್ರವಾಹ, ಭೂಕಂಪ, ಸಮಾಜಮುಖಿ ಕಾರ್ಯಗಳು, ಕುಟುಂಬ ಸಹಾಯ, ಶಿಕ್ಷಣ ಸಂಸ್ಥೆಗಳು, ಎಲ್ಲವನ್ನೂ ಒಳಗೊಂಡು ರಾಷ್ಟ್ರಧರ್ಮವನ್ನು ಕಾಪಿಡುತ್ತಿದೆ. ರಾಷ್ಟ್ರವೇ ಮೊದಲೆನುವ ಭಾವ ಸಂಘದ ಧ್ಯೇಯವಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಅಭಿನಂದನೆಗಳು ಮತ್ತು ಸಂಘ ತನ್ನ ರೆಕ್ಕೆಗಳನ್ನು ವಿಶ್ವದ ಎಲ್ಲೆಡೆ ಚಾಚಲಿ.
ಸೆಪ್ಟೆಂಬರಿನಲ್ಲಿ ನಡೆದ ಮತ್ತೊಂದು ಸಂಗತಿ ಕನ್ನಡದ ಅಷ್ಟೇಕೆ ವಿಶ್ವದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಶ್ರೀ ಎಸ್ ಎಲ್ ಭೈರಪ್ಪನವರನ್ನು ಕಳೆದುಕೊಂಡುದು. 95 ವರ್ಷ ವಯಸ್ಸಿನ ಅತ್ಯದ್ಭುತ ಬರಹಗಾರ, ಧರ್ಮಶ್ರೀ, ವಂಶವೃಕ್ಷ, ಆವರಣ, ಕವಲು, ಸಾಕ್ಷಿ , ಅಂಚು , ಮಂದ್ರ, ತಂತು , ಗೃಹಭಂಗ, ಹೀಗೆ ಹತ್ತು ಹಲವು ಕಾದಂಬರಿಗಳಲ್ಲಿ ಗಾಢವಾದ ಅನುಭವವನ್ನು, ಚಿಂತನೆಯನ್ನು ದಾಖಲಿಸಿದ್ದಾರೆ. ಅನೇಕ ಮುದ್ರಣಗಳನ್ನು ಕಂಡ ಕಾಣುತ್ತಿರುವ ಕಾದಂಬರಿಗಳಲ್ಲಿ ಬರಹಗಾರರಲ್ಲಿ ಮುಂಚೂಣಿಯಲ್ಲಿದ್ದವರು ಭೈರಪ್ಪನವರು. ದ್ವಿಜೋದಯವು ಅವರನ್ನು ಸದಾ ನೆನೆಸಿಕೊಳ್ಳುತ್ತದೆ. ಅವರ ತಂತುವಿನಲ್ಲಿ ಪತ್ರಿಕೆಯ ಪಾತ್ರ ಮತ್ತು ನೀತಿಗಳನ್ನು ಹೇಳಲಾಗಿದೆ. ದ್ವಿಜೋದಯಕ್ಕೆ ಅದೊಂದು ಮಾರ್ಗದರ್ಶಿಯಾಗಿಯೂ ಇದೆ.
ಓದುಗರೇ ದೀಪಾವಳಿ ಅಕ್ಟೋಬರ್ ಮಾಸದಲ್ಲಿ ಬರಲಿದೆ. ಪತ್ರಿಕೆ ನಿಮ್ಮ ಕೈ ಸೇರಿದ ಮೇಲೆ ಹಬ್ಬವು ಆರಂಭವಾಗುತ್ತದೆ. ಜಾಗ್ರತೆಯಿಂದ ಪಟಾಕಿಗಳನ್ನು ಸಿಡಿಸಿ, ಸಂಭ್ರಮವು ಹಿಂದೂ ಧರ್ಮದ ಜೀವಾಳ. ನಮ್ಮ ಸಂಭ್ರಮ ನಮಗೆ ಸಂತೋಷವನ್ನುಂಟುಮಾಡಲಿ.
ವೀಣಾ
9036709599
dwijodaya@gmail.com
www.denhym.com
Welcome to Dwija entrepreneurs Network!