ಸಂಪಾದಕೀಯ
ಲೇಖನ: ವೀಣಾ ಕುಲಕರ್ಣಿ
ಲೇಖನ: ವೀಣಾ ಕುಲಕರ್ಣಿ
ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.
ಆರಂಭಿಕ ದಿನಗಳು ಮತ್ತು ಪ್ರೇರಣೆ
ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.
ಮೇಘಕೃಷ್ಣಾಜಿನಧರಾ ಧಾರಾಯಜ್ಞೋಪವೀತಿನಃ|
ಮಾರುತಾಪೂರಿತಗುಹಾಃ ಪ್ರಾಧೀತಾ ಇವ ಪರ್ವತಾಃ||
ಸಂಪಾದಕೀಯ,
ಭಗವದ್ಭಾಷಾsಪಿ ಸ್ವೋತ್ಪತ್ತಿಸಮಯೇ ಸಮುದ್ರಘೋಷವದವ್ಯಕ್ತೈಕ ಭಾಷಾರೂಪಾsಪಿ
ತತ್ತಚ್ಛ್ರೋತೃಶ್ರೋತ್ರದೇಶಂ ಪ್ರಾಪ್ತಾ ಸತೀ ತತ್ತದ್ಭಾಷಾತ್ಮನಾ ಪರಿಣಮತಿ ವಿಚಿತ್ರಶಕ್ತಿತ್ವಾತ್| – ಕರ್ಣಾಟಕ ಶಬ್ದಾನುಶಾಸನ ಭಗವದ್ಭಾಷೆಯು ತನ್ನ ಜನ್ಮಕಾಲದಲ್ಲಿ ಸಾಗರದಲೆಗಳ ಘೋಷದಂತೆ ಅವ್ಯಕ್ತರೂಪದಲ್ಲಿನ ಧ್ವನಿಯಾಗಿತ್ತು. ನಂತರ ಅವು ಕೇಳುಗಳ ಕಿವಿಯನ್ನು ತಲುಪಿದಾಗ ತನ್ನೊಳಗಿನ ಶಕ್ತಿಯಿಂದ ಭಾಷೆಯಾಯ್ತು. ಭಾಷೆಯ ಮಹತ್ತನ್ನು ಸಾರುವ ಮತ್ತು ಅಗಣಿತ ರೂಪಗಳಲ್ಲಿರುವ ಭಾಷಾ ಸ್ವರೂಪವನ್ನು ತಿಳಿಸುವ ಅನೇಕ ಸಾಲುಗಳಲ್ಲಿ ಇದು ಸಹ ಒಂದಾಗಿದೆ. ಪ್ರಪಂಚದ ಎಲ್ಲ ವ್ಯವಹಾರವೂ ಭಾಷೆಯಿಂದಲೇ ಆಗಿದೆಯೆನ್ನುವುದು ಭತೃಹರಿಯ ಮಾತು.
ಉದ್ಯಮ/ವೃತ್ತಿ ಪ್ರಪಂಚದಲ್ಲಿ ಭಾಷೆಯು ಪ್ರಮುಖ ಅಂಗ. ಭಾಷೆಯಿಲ್ಲದೆ ಒಂದು ಹೆಜ್ಜೆಯೂ ಮುಂದಿಡಲಾಗದ ಸ್ಥಿತಿ ನಮ್ಮದು. ಅದು ನೇರವಾದ ಶಬ್ದರೂಪದ ಭಾಷೆಯಾಗಬಹುದು ಅಥವಾ ಸಂಕೇತರೂಪದ ಸೈನ್ ಲಾಂಗ್ವೇಜ್ ಆಗಬಹುದು, ಎಲ್ಲವೂ ಭಾಷಾರೂಪವೇ. ಇಂತಿರುವ ಭಾಷೆಯ ಮಹತ್ವವನ್ನು ತಿಳಿಯಲು ನವೆಂಬರ್ ತಿಂಗಳಲ್ಲಿ ದ್ವಿಜೋದಯದ ತಂಡವು ಕೆಲವು ಲೇಖಕ ಲೇಖಕಿಯರನ್ನು ಒಂದೆಡೆ ಸೇರಿಸಿ, ಭಾಷೆಯು ಹೇಗೆಲ್ಲಾ ಉದ್ಯಮದಲ್ಲಿ ಹಾಸುಹೊಕ್ಕಾಗಿದೆ ಎನ್ನುವುದನ್ನು ತಿಳಿಸಿಕೊಟ್ಟಿತು. ಇದು ಮೊದಲನೆಯ ಹೆಜ್ಜೆಯಾಗಿ ಮುಂದೆ ಸಮ್ಮೇಳನ ಸ್ವರೂಪವಾಗಿ ನಿಲ್ಲಬೇಕೆಂಬುದು ದ್ವಿಜೋದಯ ತಂಡದ ಸಂಕಲ್ಪ.
೨೦೨೩ ಕ್ಯಾಲೆಂಡರ್ ಬದಲಾಗುವ ತಿಂಗಳಿದು. ಸಂಕಲ್ಪಗಳು, ಸಾಧನೆಗೆ ಸ್ವಾಗತವನ್ನೀವ ಪ್ರಮಾಣ ಪ್ರಯಾಸಗಳೂ ಎಲ್ಲವೂ ಈ ತಿಂಗಳಲ್ಲೇ ನಡೆಯುತ್ತವೆ. ಮನಃಶಾಸ್ತ್ರೀಯವಾಗಿ ನೋಡುವುದಾದರೆ , ಯಾವುದಾದರೊಂದು ತುಡಿತಕ್ಕೆ ಕಿಡಿ ಬೇಕಾಗುತ್ತದೆ ಅದಕ್ಕೆ ಹಲವು ದಾರಿಗಳಿವೆ ಅದರಲ್ಲಿ ನ್ಯೂ ಇಯರ್ ಎನ್ನುವ ಈ ಸಂಭ್ರಮವೂ ಒಂದು ಕಿಡಿ. ಮುಂದಿನ ವರ್ಷ ಇಂಥದ್ದನ್ನು ಸಾಧಿಸುತ್ತೇನೆ ಎನ್ನುವ ಮಾತಿನಲ್ಲಿ ಸಂಕಲ್ಪವೊಂದು ಉದ್ಭವವಾಗಿ ಕೆಲಕಾಲ ಅದರೆಡೆಗೆ ದುಡಿಯುವ ಶಕ್ತಿಯನ್ನು ಕೊಡುವ ಆ ಸಂ’ಭ್ರಮ’ ಬರಿಯ ಭ್ರಮೆಯಾಗದೇ ಸದಾ ಕಾಲ ಉಳಿಯುವಂತಾಗಲಿ. ಕಾಲಃ ಕ್ರೀಡತಿ ಗಚ್ಛತಿ ಆಯುಃ ಎನ್ನುವಂತೆ ಕಾಲವು ಆಡಾಡುತ್ತಲೇ ನಮ್ಮ ಆಯಸ್ಸು ಮುಗಿದು ಹೋಗುತ್ತಿರುತ್ತದೆ. ಸಾಧನೆಗೆ ಅವಕಾಶಗಳು ಬಂದಾಗ ಸದುಪಯೋಗಪಡಿಸಿಕೊಳ್ಳಬೇಕು. ಉದ್ಯಮದಲ್ಲಿ ಸಮಯಕ್ಕೆ ಹೆಚ್ಚು ಬೆಲೆ. ತಕ್ಷಣದ ನಿರ್ಧಾರಗಳು ಅತೀ ಮಹತ್ವದ್ದಾಗಿರುತ್ತದೆ. ಹಾಗಾಗಿ ನಾವು ತೆಗೆದುಕೊಳ್ಳುವ ಸಂಕಲ್ಪಗಳು ಆರಿ ಹೋಗುವ ಮಾತು ಹಾರಿ ಹೋಗುವ ವಿಷಯಗಳಂತಲ್ಲದೆ ಗಟ್ಟಿಯಾಗಿ ನಿಲ್ಲಬಲ್ಲ ಮತ್ತು ದೀರ್ಘಕಾಲೀನ ಸ್ಥಿತಿಯಾಗಿ ಉಳಿಯಲಿ. ಪ್ರತಿ ವರ್ಷವೂ ಒಂದಿಲ್ಲೊಂದು ಹೊಸತನ್ನು ಅನ್ವೇಷಿಸುವ ಮನಸ್ಸಿನೊಂದಿಗೆ ನಾವು ಕ್ಯಾಲೆಂಡರ್ ಹೊಸ ವರ್ಷವನ್ನು ಸ್ವಾಗತಿಸೋಣ.
9036709599
dwijodaya@gmail.com
www.denhym.com
Welcome to Dwija entrepreneurs Network!