ವೈದ್ಯರು ಮತ್ತು ಸಂವಹನ ಕಲೆ

ಲೇಖನ: ವೀಣಾ ಕುಲಕರ್ಣಿ

ಲೇಖನ: ವೀಣಾ ಕುಲಕರ್ಣಿ

ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.

ಆರಂಭಿಕ ದಿನಗಳು ಮತ್ತು ಪ್ರೇರಣೆ

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.

Sumanth D N LIC Advisor

“ಏನ್ ಜನಾನೋ ಏನೋ.. ಸರಿಯಾಗಿ ಮಾತಾಡಕ್ಕೂ ಬರಲ್ಲ. ನಮ್ಮೆನ್ನೇನು ಅವರ ಮನೆ ಆಳು ಅಂತ ತಿಳ್ಕೊಂಡಿದಾರಾ? ಸಾಕಪ್ಪಾ ಈ ಕೆಲ್ಸ”, ನರ್ಸ್ ಸುಂದರಿಯ ಧ್ವನಿ ಓಪಿಡಿ ತುಂಬಾ ಕೇಳಿಸುತ್ತಿತ್ತು. ಡಾ. ಶುಭಾ ರೋಗಿಗಳನ್ನು ಪರೀಕ್ಷಿಸುತ್ತಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಮತ್ತೆ ನರ್ಸಿಂಗ್ ಕೌಂಟರ್ ಬಳಿ ಜೋರಾದ ವಾಗ್ವಾದ ಕೇಳಿ, ಡಾ.ಶುಭಾ ಓಡಿ ಬಂದರು. ಏನೆಂದು ವಿಚಾರಿಸಲು, ವಿಷಯ ತಿಳಿಯಿತು.. ಇದಾಗಲೆ ತಪಾಸಣೆಗೆ ಬಂದಿದ್ದ ರೋಗಿಯೊಬ್ಬರಿಗೆ, ಕೆಲವು ರಕ್ತ ಪರೀಕ್ಷೆಗಳನ್ನು ಮಾಡಿಸಿ, ಅದರ ಫಲಿತಾಂಶದೊಂದಿಗೆ ಪುನಃ ಬಂದು ವೈದ್ಯರನ್ನು ಕಾಣಲು ಹೇಳಿತ್ತು. ಅವರಿಗೆ ಅಂತಹ ಗಂಭೀರವಾದ ಸಮಸ್ಯೆಯೇನೂ ಇಲ್ಲದಿದ್ದರಿಂದ ಯಾವ ಮಾತ್ರೆಗಳನ್ನೂ ಕೊಟ್ಟಿರಲಿಲ್ಲ. ಆ ರೋಗಿಯ ಜೊತೆ ಬಂದಿದ್ದ ಸಂಬಂಧಿ ಓಪಿಡಿ ಶುಶ್ರೂಷಕಿಯೊಂದಿಗೆ ಮಾತ್ರೆ ಕೊಟ್ಟಿಲ್ಲ ಎಂದು ಹೇಳಿದಾಗ, ಆಕೆ ನೀವು ರಿಪೋರ್ಟ್ ತನ್ನಿ ನಂತರ ಬರೆದುಕೊಡುತ್ತಾರೆ ಎಂದು ಹೇಳಿದ್ದಾಳೆ. ಅದಕ್ಕೆ ಆತ, ಆ ಶುಶ್ರೂಷಕಿಗೆ, “ನೀವು ಹೊಟ್ಟೆಗೇನು ತಿಂತೀರಾ? ರೋಗಿಗೆ ಸರಿಯಾಗಿ ಚಿಕಿತ್ಸೆ ಮಾಡಿಲ್ಲ..”, ಹಾಗೇ ಹೀಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅದಕ್ಕೆ ಆ ಶುಶ್ರೂಷಕಿಗೂ ಸಹನೆ ಮುರಿದು, ಅವಳು ದನಿಯೇರಿಸಿದ್ದಾಳೆ.. ಇದು ರೋಗಿಯೊಂದಿಗೆ ಸರಿಯಾಗಿ ಸಂವಹನ ಮಾಡದಿದ್ದಾಗ ಆಗುವ ಪರಿಸ್ಥಿತಿ. ಆ ರೋಗಿ ಆಹಾರ ಸೇವಿಸದೆ ಬಂದಿರುವುದು ಯಾರಿಗೂ ಗೊತ್ತಿಲ್ಲ. ವೈದ್ಯರು ಅವರ ರೋಗಲಕ್ಷಣಗಳಿಗೆ ಮಾಡಿಸಬೇಕಾದ ಪರೀಕ್ಷೆಗಳನ್ನು ಹೇಳಿದ್ದಾರೆ. ರೋಗಿಯ ಸಂಬಂಧಿ, ಪರೀಕ್ಷೆಗಳ ಫಲಿತಾಂಶ ಬರುವವರೆಗೂ, ರೋಗಿ ಉಪವಾಸ ಇರಬೇಕೆಂದು ಅಪಾರ್ಥ ಮಾಡಿಕೊಂಡು, ಎಲ್ಲರನ್ನೂ ದೂಷಿಸತೊಡಗಿದ್ದ. ಅವನನ್ನು ಪುನಃ ನನ್ನ ಕೊಠಡಿಗೆ ಕರೆದು ಕೂಲಂಕಷವಾಗಿ ಎಲ್ಲವನ್ನೂ ವಿವರಿಸಬೇಕಾಯಿತು!!

ರೋಗಿಗಳೊಂದಿಗೆ ಸಂವಹನ ನಡೆಸುವುದು ಒಂದು ಕಲೆ. ಎಲ್ಲಾ ವೈದ್ಯರಿಗೂ ಅವರದೇ ಆದ ವಿಧಿ ವಿಧಾನಗಳಿರುತ್ತವೆ. ನಮಗೆ ವೈದ್ಯಕೀಯ ಪದವಿಯ ತರಬೇತಿ ದಿನಗಳಲ್ಲಿ, ರೋಗಿಯು ನಮ್ಮ ಪರೀಕ್ಷಾ ಕೊಠಡಿಗೆ ಬರುವಾಗ ಕಂಡ ನಡಿಗೆಯಿಂದ, ಅವರು ಮಾತನಾಡುವುದು, ಅವರ ಎಲ್ಲಾ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಬೇಕೆಂದು ಹೇಳಿಕೊಡುತ್ತಾರೆ. ಹಲವಾರು ಬಾರಿ, ರೋಗಿಗಳು ನಮ್ಮೊಂದಿಗೆ ಹೇಳದಿದ್ದ ವಿಷಯಗಳು, ತಪಾಸಣೆ ಮಾಡುವಾಗ ಅಥವಾ ಅವರ ಹಿಂದಿನ ಚಿಕಿತ್ಸಾ ವಿವರಗಳು ದಾಖಲೆಗಳನ್ನು ನೋಡುವಾಗ ತಿಳಿದು ಬಿಡುತ್ತದೆ. ರೋಗಿಗಳು ವೈದ್ಯರೊಂದಿಗೆ ಸಾಧ್ಯವಾದಷ್ಟು ಮುಚ್ಚುಮರೆಯಿಲ್ಲದೆ, ಎಲ್ಲವನ್ನೂ ಹೇಳಿದರೆ, ಚಿಕಿತ್ಸೆ ಸುಲಲಿತವಾಗುತ್ತದೆ.

ವೈದ್ಯರು ರೋಗಿಗಳೊಂದಿಗೆ ವಿಷಯಗಳನ್ನು ಮುಚ್ಚಿಡಬಹುದೇ?

ಖಂಡಿತ ಇಲ್ಲ!! ವೈದ್ಯರು ಮತ್ತು ರೋಗಿಯ ನಡುವೆ ಒಂದು ಒಪ್ಪಂದವಿರುತ್ತದೆ. ಅವರ ಆರೋಗ್ಯದ ಸಂಪೂರ್ಣ ವಿವರಗಳು ರೋಗಿಯೊಂದಿಗೆ ಮಾತ್ರವೇ ಚರ್ಚಿಸುವಂತಹುದು. ವೈದ್ಯರಿಗೆ ಗೌಪ್ಯತೆಯನ್ನು ಕಾಪಾಡುವುದು ಪ್ರಥಮ ಆದ್ಯತೆಯಾಗಿರುತ್ತದೆ. ಬೇರೆಯವರೊಂದಿಗೆ ಹೇಳುವುದು ನಿಯಮ ಬಾಹಿರ. ಇಂಗ್ಲೀಷ್ ಭಾಷೆಯಲ್ಲಿ ಇದಕ್ಕೆ CONFINDENTIALITY ಎಂದು ಕರೆಯುತ್ತಾರೆ. ರೋಗಿಯ ಸಮಸ್ಯೆಯನ್ನು ಬೇರೆಯವರೊಂದಿಗೆ ಅವರ ಅನುಮತಿ ಇಲ್ಲದೆ ಹಂಚಿಕೊಳ್ಳುವುದು ಆಕ್ಷೇಪಾರ್ಹ ನಡಾವಳಿ. ರೋಗಿಯು ಖುದ್ದು ತನ್ನೊಂದಿಗೆ ಬಂದಿರುವ ಸಂಬಂಧಿಯೊಂದಿಗೆ ವಿವರಗಳನ್ನು ಚರ್ಚಿಸುವುದು ಸಹಮತಿಸಿದರೆ, ಆಗ ವೈದ್ಯರು ಅವರೊಂದಿಗೆ ಎಲ್ಲ ವಿವರಗಳನ್ನು ಹಂಚಿಕೊಳ್ಳುವುದು ಭಾವ್ಯ. ರೋಗಿಯ ಅನುಮತಿಯೊಂದಿಗೆ ಮಾತ್ರವೇ ಅವರ ರೋಗದ ವಿವರಗಳನ್ನು ಸಂಶೋಧನೆಯ ಸಲುವಾಗಿ ಅಥವಾ ಅಧ್ಯಯನದ ಸಲುವಾಗಿ ಉಪಯೋಗಿಸಬಹುದು. ಇದಕ್ಕೆ CONSENT ಎನ್ನುತ್ತಾರೆ. ಈ ಕುರಿತು ಮತ್ತೊಂದು ಲೇಖನ ಬರೆಯಬಹುದು..

ಪ್ರಸೂತಿ ಮತ್ತು ಸ್ರ್ತೀರೋಗ ತಜ್ಞೆಯಾದ ನಾನು, ಸದಾ ಗರ್ಭಿಣಿ ಹಾಗು ಗರ್ಭದಲ್ಲಿರುವ ಮಗು ಇಬ್ಬರ ಕುರಿತು ಕಾಳಜಿ ಮಾಡಬೇಕಾಗುತ್ತದೆ. ಗರ್ಭಿಣಿಯು ತಪಾಸಣೆಗೆ ಬಂದಾಗ, ಸಾಧಾರಣವಾಗಿ ಅವಳ ಪತಿ, ತಾಯಿ, ಅತ್ತೆ ಆಕೆಯ ಸಂಗಡ ಬರುತ್ತಾರೆ. ಕೆಲವೊಮ್ಮೆ ಯಾವುದಾದರೂ ಗಂಭೀರ ಸಮಸ್ಯೆಯು ತಲೆದೋರಿದಾಗ, ಉದಾಹರಣೆಗೆ, ಗರ್ಭಪಾತವಾಗಿದೆ ಎಂಬ ಅಹಿತಕರ ವಿಷಯ ತಿಳಿಸುವಾಗ, ನಾವು ಬಹಳ ಸೂಕ್ಷ್ಮವಾಗಿ ವ್ಯವಹರಿಸಬೇಕಾಗುತ್ತದೆ. ಆಕೆ, ತನ್ನೊಂದಿಗೆ ಯಾರನ್ನು ಕರೆತಂದಿದ್ದಾಳೆ, ಅವರಿಗೆ ಈ ವಿಷಯ ತಿಳಿಸುವುದು ಸಮಂಜಸವೇ ಎಂದು ಆಕೆಯೊಂದಿಗೆ ನಾವು ಚರ್ಚಿಸಿ ನಂತರ ವಿಷಯ ಹೇಳಬೇಕಾಗುತ್ತದೆ. “BREAKING BAD NEWS”, ಇದು ಬಹಳ ಕಷ್ಟ!! ವೈದ್ಯರು ನಿತ್ಯ ಇಂತಹ ಹಲವು ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸಂವಹನ ಕಲೆಯನ್ನು ವೃದ್ಧಿಸಿಕೊಳ್ಳುವುದು ಮುಖ್ಯ. ನಾವು ವಿಷಯವನ್ನು ವಸ್ತುನಿಷ್ಠವಾಗಿ ಹೇಳಬೇಕು. ಅಲ್ಲದೇ, ಸಹಾನುಭೂತಿಯ ಎಳೆಯೂ ಇರಬೇಕು.. ವಿಶೇಷವಾಗಿ ಗರ್ಭಿಣಿ, ಹೆರಿಗೆಯ ಸಮಸ್ಯೆಗಳು, ಕಷ್ಟಕರ ಹೆರಿಗೆಯಲ್ಲಿ ಮಗುವಿಗೆ ಏನಾದರು ಸಮಸ್ಯೆ ತಲೆದೋರಿದಾಗ, ಹೀಗೆ ಹಲವು ಸಂದರ್ಭಗಳಲ್ಲಿ ಮಾತುಗಳನ್ನು ಅಳೆದು ತೂಗಿ ಹೇಳಬೇಕು. ಆದರೆ ಮುಚ್ಚುಮರೆ ಮಾಡಲೇ ಬಾರದು. ರೋಗಿಗೆ ತನ್ನ ಆರೋಗ್ಯದ ಬಗ್ಗೆ ತಿಳಿಯುವ ಸಂಪೂರ್ಣ ಹಕ್ಕಿದೆ. ಆದ್ದರಿಂದ ಮುಚ್ಚುಮರೆ ಸಲ್ಲದು..

ರೋಗಿಗಳು ಸಹಾ ತಮಗೆ ಯಾವುದಾದರೂ ವಿಷಯ ಅರ್ಥವಾಗದಿದ್ದರೆ, ವೈದ್ಯರ ಬಳಿ ಮತ್ತೊಮ್ಮೆ ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಉಚಿತ. ಉದಾಹರಣೆಗೆ, ನಾಲ್ಕೈದು ರೀತಿಯ ಮಾತ್ರೆಗಳನ್ನು ಸೇವಿಸಬೇಕಾದ ಸಂದರ್ಭದಲ್ಲಿ, ಮಾತ್ರೆಗಳನ್ನು ಯಾವಾಗ ಸೇವಿಸಬೇಕು, ಯಾವ ಪ್ರಮಾಣದಲ್ಲಿ ಸೇವಿಸಬೇಕು, ಆಹಾರದ ಪಥ್ಯ, ನಿಯಮ ಈ ಎಲ್ಲವನ್ನೂ ವಿಶದವಾಗಿ ತಿಳಿದುಕೊಳ್ಳಬೇಕು.

CLEAR COMMUNICATION, ಎಂದರೆ ಸ್ಪಷ್ಟ ಸಂವಹನ ಕಲೆ ನಮ್ಮ ಸೇವಾ ವೃತ್ತಿಯಲ್ಲಿ ಬಹಳ ಮುಖ್ಯ.. ದಿನಂಪ್ರತಿ ಹೆಚ್ಚುತ್ತಿರುವ ವೈದ್ಯರ ವಿರುದ್ಧದ ಹಲ್ಲೆಗಳು, ಕಾನೂನಿನ ಸಮಸ್ಯೆಗಳ ಸುಳಿಗಳ ಈ ಸಮಯದಲ್ಲಿ, ಮುಂಬರುವ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ರೋಗಿಗಳೊಂದಿಗೆ ಹೇಗೆ ವ್ಯವಹರಿಸಬೇಕೆಂಬ ತರಗತಿಗಳನ್ನೂ ನಡೆಸಬೇಕಾಗಬಹುದು!!

ಬಸವಣ್ಣನವರ ಒಂದು ವಚನದೊಂದಿಗೆ ನನ್ನ ಈ ಬರಹಕ್ಕೆ ವಿರಾಮ ನೀಡುತ್ತೇನೆ- ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು. ನುಡಿದರೆ ಜಂಗ ಮೆಚ್ಚಿ ಅಹುದಹುದೆನಬೇಕು. !

ಧನ್ಯವಾದಗಳು, ಡಾ. ಸೌಮ್ಯಾ ಹಿಮಗಿರೀಶ್.

 

9036709599

dwijodaya@gmail.com

www.denhym.com