ಬಣ್ಣ ಬಣ್ಣದ ಕುರ್ತಾಗಳು ಯಾವ ಹೆಣ್ಣು ಮಕ್ಕಳಿಗೆ ಇಷ್ಟವಿಲ್ಲ- Padmakala
ಲೇಖನ: ವೀಣಾ ಕುಲಕರ್ಣಿ
ಲೇಖನ: ವೀಣಾ ಕುಲಕರ್ಣಿ
ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.
ಆರಂಭಿಕ ದಿನಗಳು ಮತ್ತು ಪ್ರೇರಣೆ
ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.
ಬಣ್ಣ ಬಣ್ಣದ ಕುರ್ತಾಗಳು ಯಾವ ಹೆಣ್ಣು ಮಕ್ಕಳಿಗೆ ಇಷ್ಟವಿಲ್ಲ. ತರಾವರಿ ಕುರ್ತಾಗಳು, ವಿವಿಧ ಶೈಲಿಯ ಕುರ್ತೀಗಳು ಮನಮೋಹಕ ಎನಿಸುವಂತಹ ವಿನ್ಯಾಸದ ಕುರ್ತೀಗಳು ಎಲ್ಲರಿಗೂ ಮೆಚ್ಚುಗೆಯೇ. ಪದ್ಮಕಲಾ ಸಂಸ್ಥೆಯು ವಿವಿಧ ಬಗೆಯ ಕುರ್ತೀಗಳನ್ನು ಮಹಿಳೆಯರಿಗೆಂದೇ ನೀಡುತ್ತಾ ಬಂದಿದೆ. ೨೦೧೯ ರಲ್ಲಿ, ಸುಬ್ರಹ್ಮಣ್ಯಪುರ ಪೋಲೀಸ್ ಠಾಣೆಯ ಪಕ್ಕದಲ್ಲಿನ ಕಟ್ಟಡದಲ್ಲಿ ಆರಂಭವಾದ ಸಂಸ್ಥೆಯು ನೂರಾರು ಮಹಿಳೆಯರಿಗೆ ಕೆಲಸವನ್ನು ನೀಡಿ ಸ್ವಾವಲಂಬಿಗಳಾಗಿ ಬದುಕುವ ಮಾರ್ಗವನ್ನು ಕೊಟ್ಟಿದೆ.
ಸಂಸ್ಥೆ ಆರಂಭವಾದ ಒಂದು ವರ್ಷದೊಳಗೆ ಕೊರೋನ ಮಹಾಮಾರಿ ಭಾರತಕ್ಕೆ ಕಾಲಿಟ್ಟಿತು. ಉದ್ದಿಮೆಗಳು ನೆಲಕಚ್ಚತೊಡಗಿದವು. ಆದರೆ ಪದ್ಮಕಲಾ ಬಳಗ ಸುಮ್ಮನೆ ಕೂರಲಿಲ್ಲ. ಉತ್ತಮವಾಗಿಯೇ ನಡೆದುಕೊಂಡು ಹೋಗುತ್ತಿದ್ದ ಸಂಸ್ಥೆಗೆ ಕೊರೋನಾ ದೊಡ್ಡ ಆಘಾತವನ್ನೇ ನೀಡಿತ್ತು. ಸಂಸ್ಥೆಯಲ್ಲಿದ್ದ ಮಹಿಳಾ ಕಾರ್ಮಿಕರನ್ನು ಬಿಡುವಂತೆಯೂ ಇಲ್ಲ, ಕೆಲಸಕ್ಕೆ ಬನ್ನಿ ಎನ್ನುವಂತೆಯೂ ಇಲ್ಲ. ಸಂಸ್ಥೆಯಲ್ಲಿ ತಂದಿಟ್ಟಿರುವ ಸಾಮಾಗ್ರಿಗಳನ್ನು ಏನು ಮಾಡುವುದು? ಸಂಸ್ಥೆ ೨-೩ ತಿಂಗಳು ಬಾಗಿಲು ಮುಚ್ಚಿದರೆ, ಇಷ್ಟು ಸಮಯಗಳ ಪರಿಶ್ರಮಕ್ಕೆ ಬೆಲೆ ಏನು? ಇದಕ್ಕೆಲ್ಲಾ ಉತ್ತರವಾಗಿ ಅವರ ತಲೆಯಲ್ಲಿ ಹೊಳೆದದ್ದೇ, ಮಾಸ್ಕ್ ತಯಾರಿಕೆ. ಕೊರೋನಾ ಬಾಧಿಸಿದ ಬಳಿಕ ಹಲವಾರು ಮಂದಿ ಮಾಸ್ಕ್ ತಯಾರಿಸುತ್ತಿದ್ದಾರೆ. ಹಾಗೆಂದು ಪೂರೈಕೆ ಆಗುತ್ತಿರುವ ಮಾಸ್ಕ್ಗಳ ಪ್ರಮಾಣ ಬೇಡಿಕೆಗೆ ಆಗುವಷ್ಟು ಇಲ್ಲ. ಒಂದು ವೇಳೆ ತಯಾರಿಸಿದರೂ ಮಾರುಕಟ್ಟೆ ಹಿಡಿಯುವುದು ಹೇಗೆ?
ಕುರ್ತಿಸ್‌ನ ಬಟ್ಟೆಗಳನ್ನು ತುಂಡು ಮಾಡಿ ಮಾಸ್ಕ್ ಮಾಡಿ, ನಿಷ್ಪ್ರಯೋಜಕವಾದರೆ. ಹೀಗೆ ಹಲವಾರು ಅಪಾಯಗಳು ಕಣ್ಣೆದುರೇ ಧುತ್ತೆಂದು ಬಂದು ನಿಂತಿತ್ತು. ಸಂಸ್ಥೆಯ ಮಾಲೀಕರಾದ ವಿ ಪಿ ಲಕ್ಷ್ಮಿಯವರು ಪರಿಸ್ಥಿತಿಯ ಒಳನೋಟವನ್ನು ಅಭ್ಯಸಿಸಿ, ಬಳಿಕ ಒಂದು ನಿರ್ಧಾರಕ್ಕೆ ಬಂದರು. ಕೊರೋನಾ ದೊಡ್ಡವರಿಗೆ ದೊಡ್ಡ ಪೆಟ್ಟು ನೀಡಿದರೆ, ಸಣ್ಣವರಿಗೆ ಸಣ್ಣ ಪೆಟ್ಟು ನೀಡಿತ್ತು. ಅಂದರೆ ಸಣ್ಣ ಪೆಟ್ಟು ತಿಂದವರು ಬೇಗನೆ ಚೇತರಿಸಿಕೊಳ್ಳಬಹುದು. ದೊಡ್ಡ ಪೆಟ್ಟನ್ನು ಅರಗಿಸಿಕೊಳ್ಳುವುದು ಕಷ್ಟ. ಆದ್ದರಿಂದ ತಾನು ಆರಂಭಿಸಲು ಹೊರಟಿರುವ ಕೆಲಸ ಯಶಸ್ಸು ಆಗಿಯೇ ಆಗುತ್ತದೆ ಎಂದು ಗಟ್ಟಿ ನಿರ್ಧಾರ ತಳೆದರು. ಮಾಸ್ಕ್ಗಳ ಬಗ್ಗೆ ಹೆಚ್ಚಿನ ವಿಚಾರ ತಿಳಿದುಕೊಳ್ಳಲು ಆರಂಭಿಸಿದರು. ತನ್ನಲ್ಲಿ ದಾಸ್ತಾನಿರುವ ಕುರ್ತಿಸ್‌ನ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಮಾಸ್ಕ್ ಆಗಿ ಪರಿವರ್ತಿಸಿದರು. ಕಾಟನ್ ಮಾಸ್ಕ್ ಶೇ. ೭೦ರಷ್ಟು ಸುರಕ್ಷಿತ. ಮೆಡಿಕಲ್ ಕ್ಷೇತ್ರದವರಿಗೆ ಇದು ಪ್ರಯೋಜನ ಇಲ್ಲದೇ ಇದ್ದರೂ, ಜನಸಾಮಾನ್ಯರಿಗೆ ಖಂಡಿತಾ ಪ್ರಯೋಜನ ಎನ್ನುವುದನ್ನು ಕಂಡುಕೊಂಡರು. ಅದರಂತೆ ಮಾಸ್ಕ್ ತಯಾರಿಯ ಕೆಲಸ ಶುರು ಮಾಡಿಯೇ ಬಿಟ್ಟರು. ಹೀಗಿತ್ತು ವಿಸ್ತರಣೆಯ ಕಲ್ಪನೆ: ದಿನಕ್ಕೆ ೨೫೦-೩೦೦ರಷ್ಟು ಮಾಸ್ಕ್ಗಳನ್ನು ಮೆಡಿಕಲ್ ಡಿಸ್ಟ್ರಿಬ್ಯೂಟರ್ ಮಾರಾಟ ಮಾಡುತ್ತಿದ್ದರು.
ಇದರ ಜೊತೆಗೆ ಕಾರ್ಪೊರೇಟ್ ಸಂಸ್ಥೆಗಳನ್ನು ಲಕ್ಷ್ಮೀಯವರು ಹುಡುಕಿದರು. ಅವರು ತಯಾರಿಸಿದ ಮಾಸ್ಕ್ಗಳು ಕಲರ್‌ಫುಲ್ ಆಗಿರುವುದರಿಂದ, ಸಂಸ್ಥೆಯಲ್ಲಿ ಬಳಕೆ ಮಾಡುವುದು ಕಷ್ಟ. ದೊಡ್ಡ ಪ್ರಮಾಣದ ಆರ್ಡರ್ ಸಿಕ್ಕಿದರೆ, ಅದಕ್ಕೆ ಸೂಕ್ತವಾದ ಬಟ್ಟೆ ಖರೀದಿಸಿ ಮಾಡಿಕೊಡಬಹುದು. ಆಗಿನ ಪರಿಸ್ಥಿತಿಯಲ್ಲಿ ಅಕ್ಕಪಕ್ಕದ ಟೈಲರ್‌ಗಳು ಮನೆಯಲ್ಲೇ ಉಳಿದು ಕೊಳ್ಳುವಂತಾಗಿತ್ತು. ಆದ್ದರಿಂದ ದೊಡ್ಡ ಆರ್ಡರ್ ಸಿಕ್ಕಿದರೆ, ಅವರಿಗೂ ಕೆಲಸ ಕೊಡಬೇಕೆಂಬ ಆಶಯ ಇವರದ್ದಾಗಿತ್ತು. ಇವೆಲ್ಲವೂ ಕರೋನ ಸಮಯದಲ್ಲಿ ಸಾಕಾರವಾಯ್ತು.
ಸಂಸ್ಥೆಯ ಮುಖ್ಯಸ್ಥೆ ವಿ ಪಿ ಲಕ್ಷ್ಮಿಯವರು. ಬೆಂಗಳೂರಿನ ಹನುಮಹಿಲ್ಸ್ ಲೇಔಟ್‌ನ ವಿ.ಪಿ. ಲಕ್ಷ್ಮಿ ಅವರದ್ದು ಮಧ್ಯಮ ವರ್ಗ. ತಂದೆ ಪದ್ಮನಾಭನ್ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಪ್ಯಾಟ್ರನ್ ಮಾಸ್ಟ್’ರ್ ಆಗಿದ್ದವರು. ತಾಯಿ ಕಲಾವತಿ. ಸಹೋದರ ಆರ್.ಪಿ. ರಾಘವೇಂದ್ರ. ರಾಘವೇಂದ್ರ ಅವರು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ೨೦ ವರ್ಷಗಳ ಅನುಭವಿ. ಇವರ ಅನುಭವದ ಆಧಾರದಲ್ಲಿ ವಿ.ಪಿ. ಲಕ್ಷ್ಮಿ ಅವರು ಕುರ್ತಿ (ಮಹಿಳೆಯರ ವಸ್ತ್ರ) ತಯಾರಿಕೆಯ ಗಾರ್ಮೆಂಟ್ ಸಂಸ್ಥೆಯನ್ನು ಆರಂಭಿಸಿದರು. ಇದಕ್ಕೆ ಎಂಎಲ್‌ಸಿ ಟ್ರೆಂಡ್ಸ್ ಎಂದು ಹೆಸರಿಟ್ಟಿದ್ದು, ಪದ್ಮಕಲಾ ಬ್ರಾಂಡ್ ಆಗಿ ಬೆಳೆದು ನಿಂತಿದೆ. ಇದಕ್ಕೆ ಬೆನ್ನೆಲುಬಾಗಿ ನಿಂತವರು ಲಕ್ಷ್ಮಿ ಅವರ ಪತಿ ಮಾಧವ ಮೂರ್ತಿ. ಕಂಪೆನಿ ಕೆಲಸದ ಜೊತೆಗೆ ಪತ್ನಿಗೆ ಧೈರ್ಯ ತುಂಬಿದವರು. ಪುತ್ರ ಎಂ. ಚಿರಾಗ್, ತಾಯಿ ಜೊತೆಗೆ ಕೆಲಸಕ್ಕೂ ನಿಂತುಕೊಂಡಿದ್ದಾರೆ.
ಬಿ.ಕಾಂ. ಪದವೀಧರೆ ವಿ.ಪಿ. ಲಕ್ಷ್ಮಿ, ಮಹಿಳಾ ಸಬಲೀಕರಣದ ಕನಸು ಕಂಡು, ೨೦೧೯ರ ಫೆಬ್ರವರಿಯಲ್ಲಿ ಸಂಸ್ಥೆ ಆರಂಭಿಸಿದರು. ಕೇಂದ್ರ ಸರಕಾರದ ಯೋಜನೆಯನ್ನು ಬಳಸಿಕೊಂಡು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಪಕ್ಕದಲ್ಲೇ ತಯಾರಿಕಾ ಘಟಕ ಆರಂಭಿಸಿದರು. ’ಮಹಿಳೆಯರು ಮನೆಯಲ್ಲೇ ಕೂತುಕೊಂಡಿದ್ದರೆ, ನಮ್ಮಿಂದ ಏನೂ ಆಗುವುದಿಲ್ಲ ಎಂಬ ಭಾವನೆ ಆವರಿಸಿಕೊಂಡು ಬಿಡುತ್ತದೆ. ಇದನ್ನು ನೀಗಬೇಕಾದರೆ ಹೊರಗಡೆ ಹೋಗಿ ಕೆಲಸ ಮಾಡಬೇಕು. ನಮ್ಮ ಉದ್ದೇಶವೂ ಮಹಿಳಾ ಸಬಲೀಕರಣ. ಅನಿವಾರ್ಯ ಹುದ್ದೆಗಳಿಗೆ ಪುರುಷರನ್ನು ನೇಮಿಸಿಕೊಂಡದ್ದು ಬಿಟ್ಟರೆ, ಉಳಿದೆಲ್ಲಾ ಮಹಿಳೆಯರೇ ಇದ್ದಾರೆ’.
ಇದು ಶ್ರೀಮತಿ ಲಕ್ಷ್ಮೀಯವರ ಅಂತರಾಳದ ಮಾತುಗಳು. ಸಮವಸ್ತ್ರ ತಯಾರಿಕೆ ಮತ್ತು ಕುರ್ತೀ ತಯಾರಿಕೆಯಲ್ಲಿ ಈಗ ಪದ್ಮಕಲಾ ಬ್ರಾಂಡ್ ಹೆಗ್ಗುರುತಾಗಿದೆ. ನೀವು ಸಂಪರ್ಕಿಸಬಹುದು – 9845794419
9036709599
dwijodaya@gmail.com
www.denhym.com
Welcome to Dwija entrepreneurs Network!