ಗರ್ಭನಿರೋಧಕಗಳು-ಯಾವುದು ಹಿತವೆನಗೆ?? ಹಿಂದಿನ ಸಂಚಿಕೆಯಿಂದ..
ಲೇಖನ: ವೀಣಾ ಕುಲಕರ್ಣಿ
ಲೇಖನ: ವೀಣಾ ಕುಲಕರ್ಣಿ
ಜೀವನದಲ್ಲಿ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ‘ವಿಮೆ’ (Insurance) ಎಂಬುದು ಕೇವಲ ಒಂದು ಹೂಡಿಕೆಯಲ್ಲ, ಅದು ಒಂದು ರಕ್ಷಾಕವಚ. ಇತ್ತೀಚೆಗೆ ಶ್ರೀ ಹರೀಶ್ ಆತ್ರೇಯ ಅವರು ಬೆಂಗಳೂರಿನ ಯಶಸ್ವಿ ವಿಮಾ ಸಲಹೆಗಾರರಾದ ಶ್ರೀ ಸುಮಂತ್ ಅವರೊಂದಿಗೆ ನಡೆಸಿದ ಸಂವಾದವು, ವಿಮಾ ಉದ್ಯಮದಲ್ಲಿನ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಅಸಾಮಾನ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಕು ಚೆಲ್ಲಿದೆ. ಆ ಸಂವಾದದ ಆಯ್ದ ಭಾಗಗಳು ಮತ್ತು ಪ್ರಮುಖ ಒಳನೋಟಗಳು ಇಲ್ಲಿವೆ.
ಆರಂಭಿಕ ದಿನಗಳು ಮತ್ತು ಪ್ರೇರಣೆ
ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸುಮಂತ್ ಅವರಿಗೆ ಉದ್ಯಮಶೀಲತೆಯ ಕನಸಿತ್ತು. ಬ್ಯಾಂಕ್ ಉದ್ಯೋಗಿ ತಂದೆ ಮತ್ತು ಶಿಕ್ಷಕಿ ತಾಯಿಯ ಮಗನಾದ ಇವರು, ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬೆನ್ನಲ್ಲೇ ಎಲ್ಐಸಿ (LIC) ಜಾಹೀರಾತಿನಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಂಬಂಧಿಕರಿಂದ ಮತ್ತು ಆಪ್ತರಿಂದ “ಇದೇನು ಕೆಲಸ?” ಎಂಬ ಹೀಯಾಳಿಕೆ ಎದುರಿಸಿದರೂ, ತಮ್ಮ ಮೊದಲ ಆದಾಯದ ಮೂಲಕ ತಮ್ಮ ಕೆಲಸದ ಮೌಲ್ಯವನ್ನು ಸಾಬೀತುಪಡಿಸಿದರು.
ಗರ್ಭನಿರೋಧಕಗಳು ಕೇವಲ ಮಹಿಳೆಯರಿಗಷ್ಟೇನಾ?? ಎಂಬ ವಿಷಯ ನಿಮ್ಮನ್ನು ಕಾಡುತ್ತಿರಬಹುದು.. ಇಲ್ಲ. ಪುರುಷರಿಗೂ ಇವೆ. ಬಹಳ ಪ್ರಸಿದ್ಧವಾದದ್ದು CONDOM. ಇದು ‘ನಿರೋಧ್’, ಎಂಬ ಹೆಸರಿನಿಂದ ಚಾಲ್ತಿಯಲ್ಲಿದೆ. ಇದು ಒಂದು ತಾತ್ಕಾಲಿಕ ಗರ್ಭನಿರೋಧಕ ವಿಧಾನ. ಪುರುಷನು ಸಂಭೋಗಕ್ಕೆ ಮೊದಲು ಇದನ್ನು ಆಳವಡಿಸಿಕೊಳ್ಳಬೇಕು. ಈ ನಿರೋಧ್, LATEX RUBBERಇಂದ ತಯಾರಿಸಲ್ಪಟ್ಟಿರುತ್ತದೆ. ಇದು, ಗರ್ಭನಿರೋಧದ ಜೊತೆ, ಲೈಂಗಿಕ ಸೋಂಕುಗಳಿಂದಲೂ ರಕ್ಷಣೆ ನೀಡುತ್ತದೆ. ಇದೊಂದು PERICOITAL ಗರ್ಭನಿರೋಧಕವಾಗಿದೆ. ಇದರ ಒಂದೇ ಒಂದು ಕೊರತೆಯೆಂದರೆ, ಒಮ್ಮೆ ಉಪಯೋಗಿಸಿದ ಬಳಿಕ, ಪುನರ್ಬಳಕೆ ಮಾಡಲಾಗದು. ಇದಲ್ಲದೆ, ಪುರಷರಿಗೆ, ಹಲವಾರು HORMONE BASED ಗರ್ಭನಿರೋಧಕಗಳು ಅಭಿವೃದ್ಧಿಗೊಂಡಿವೆ. ಆದರೆ, ಕೆಲವು ಅಡ್ಡ ಪರಿಣಾಮಗಳು, ಮುಖ್ಯವಾಗಿ, ಇವುಗಳ ಬಳಕೆಯಿಂದ ಪುರುಷನಿಗೆ, ಲೈಂಗಿಕ ನಿರಾಸಕ್ತಿಯುಟಾಂಗುವ ಸಾಧ್ಯತೆಯಿರುವುದರಿಂದ, ಇವುಗಳು ಅಷ್ಟು ಪ್ರಚಲಿತವಾಗಿರುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ, ಮಹಿಳೆಯರ CONDOM ಸಹ ಲಭ್ಯವಿದೆ. ಇದನ್ನು ಆರೆಂಟು ತಾಸುಗಳ ಮೊದಲೇ, ಮಹಿಳೆಯು ಧರಿಸಬಹುದು. ಇದೂ ಕೂಡ ಲೈಂಗಿಕ ಸೋಂಕುಗಳಿಂದ ಕಾಪಾಡುತ್ತದೆ. ಇದರ ದುಬಾರಿ ಬೆಲೆಯಿಂದಾಗಿ, ಸಾಮಾನ್ಯ ಸ್ತರದ ಮಹಿಳೆಯರಿಗೆ ಕೈಗೆಟುಕದಾಗಿದೆ. ಇವುಗಳಲ್ಲದೆ, CERVICAL CAP ಎಂದರೆ, ಗರ್ಭಗೊರಳಿಗೆ ತಡೆಗೋಡೆಯಂತಿರುವ ಸಾಧನಗಳೂ ಇವೆ. ಈ ಎಲ್ಲಾ ಗರ್ಭನಿರೋಧಕಗಳಿಗೆ, SPERMICIDAL CREAM, JELLYಯನ್ನು (ವೀರ್ಯಾಣುವನ್ನು ನಾಶಗೊಳಿಸುವ ಮುಲಾಮು), ಲೇಪಿಸಿರುತ್ತಾರೆ. ಇದು, ಗರ್ಭನಿರೋಧಕದ ಗುಣವನ್ನು ಬಲಪಡಿಸುತ್ತದೆ.
EMERGENCY CONTRACEPTION??
ಹೀಗೆಂದರೇನು?? ಅಂದರೆ, ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದಾಗ, ಗರ್ಭನಿಲ್ಲುವ ಸಾಧ್ಯತೆಯಿದೆ ಎಂದು ಕಂಡುಬಂದಲ್ಲಿ, ತುರ್ತು ಗರ್ಭನಿರೋಧಕಗನ್ನು ಬಳಸಬಹುದಾಗಿದೆ. ಈ ಮಾತ್ರೆ, ಸಾಧನಗಳು, ಬೆಳೆಯುವ ಭ್ರೂಣವನ್ನು, ಗರ್ಭಾಶಯದಲ್ಲಿ ಅಂಟಿಕೊಳ್ಳದಂತೆ ಮಾಡುತ್ತವೆ. ಮಹಿಳೆಯು, ಈ ತುರ್ತು ಸಂದರ್ಭದ ಮಾತ್ರೆಗಳನ್ನು, ಸಂಭೋಗ ನಡೆದ ಎಪ್ಪತ್ತೆರೆಡು ಗಂಟೆಗಳೊಳಗೆ ಸೇವಿಸಿದರೆ, ಹೆಚ್ಚು ಪರಿಣಾಮಕಾರಿ. ವಂಕಿಯನ್ನು ಸಹಾ ಐದು ದಿನಗಳೊಳಗೆ ಹಾಕಿಸಿಕೊಳ್ಳಬೇಕು. ಈ ರೀತಿಯ ತುರ್ತು ಗರ್ಭನಿರೋಧಕಗಳನ್ನು, ವೈದ್ಯರ ಸಲಹೆಯ ಮೇರೆಗೆ ಸೇವಿಸಬೇಕು. ಬಹಳಷ್ಟು ಮಹಿಳೆಯರು, ಈ ತುರ್ತು ಗರ್ಭನಿರೋಧಕ ಮಾತ್ರೆಗಳನ್ನು, ವೈದ್ಯರ ಸಲಹೆಯಿಲ್ಲದೆ ಸೇವಿಸಿ, ಅವುಗಳಿಂದ ಸಮಸ್ಯೆಗಳನ್ನು ಅನುಭವಿಸಿರುವ ಉದಾಹರಣೆಗಳಿವೆ. ಹಾಗಾಗಿ ಜಾಗ್ರತೆಯಿಂದ ಇವುಗಳನ್ನು ಬಳಸಬೇಕು.
ಇನ್ನು, ಶಾಶ್ವತ ಗರ್ಭನಿರೋಧಕಗಳನ್ನು ಕುರಿತು ನೋಡೋಣ. PERMANENT METHODS ಯಾವುವೆಂದರೆ, ಶಸ್ತ್ರಚಿಕಿತ್ಸೆಗಳು. ಮಹಿಳೆಗೆ TUBECTOMY, ಪುರುಷನಿಗೆ VASECTOMY. ಈ TUBECTOMY, ಎಂದರೆ, ಮಹಿಳೆಯ ಗರ್ಭಕೋಶದ ಪಕ್ಕದಲ್ಲಿರುವ ಗರ್ಭನಾಳಗಳನ್ನು, ಕಟ್ಟುವುದು. ಇದರಿಂದ, ಪಕ್ವ ಅಂಡಾಣುವು, ವೀರ್ಯಾಣುವಿನೊಂದಿಗೆ ಮಿಳಿತವಾಗುವುದು ಅಸಂಭವವಾಗುತ್ತದೆ. ಮಹಿಳೆಗೆ, ಎರಡು ಗರ್ಭನಾಳಗಳಿರುತ್ತವೆ. ಇವೆರಡನ್ನೂ ಕಟ್ಟಬೇಕು. ಈ ಶಸ್ತ್ರಚಿಕಿತ್ಸೆಯನ್ನು, ಉದರದ ಮೇಲೆ ಸಣ್ಣ ಛೇದನದ ಮೂಲಕ ಮಾಡುತ್ತಾರೆ. ಉದರದರ್ಶಕದ (LAPAROSCOPY) ಮೂಲಕವೂ ಮಾಡಬಹುದು. ಕೆಲವು ಸಂದರ್ಭಗಳಲ್ಲಿ, ಸಿಜ಼ೇರಿಯನ್ ಹೆರಿಗೆಯ ಜೊತೆ, ಈ ಶಸ್ತ್ರಚಿಕಿತ್ಸೆಯನ್ನೂ ಮಾಡಬಹುದು.
VASECTOMY, ಪುರುಷರಿಗೆ ಮಾಡುವ ಸಂತಾನಹರಣ ಚಿಕಿತ್ಸೆ. ಇದರಲ್ಲಿ, ವೀರ್ಯನಾಳವನ್ನು ಕಟ್ಟುತ್ತಾರೆ. ಈ ಚಿಕಿತ್ಸೆ ಪಡೆದ ಪುರುಷರು ಲೈಂಗಿಕ ನಿರಾಸಕ್ತಿ ಹೊಂದುತ್ತಾರೆಂಬುದು ಮಿಥ್ಯೆ. ಈ ಎಲ್ಲಾ ವಿಧಧ ಚಿಕಿತ್ಸೆಗಳ ಮುನ್ನ, ದೇಹಾರೋಗ್ಯವನ್ನು ಕೂಲಂಕಷವಾಗಿ ಪರೀಕ್ಷಿಸಿ ನಂತರವಷ್ಟೇ ಮಾಡುತ್ತಾರೆ. ಇವು ಶಸ್ತ್ರಚಿಕಿತ್ಸೆಯಾದ್ದರಿಂದ, ಅರಿವಳಿಕೆಯ ಅಗತ್ಯವಿರುತ್ತದೆ. ಆದ್ದರಿಂದ ದೇಹವು ಅರಿವಳಿಕೆಗೆ ಸಿದ್ಧವಿದೆಯೇ ಎಂದು ಮೊದಲು ಪರೀಕ್ಷಿಸಿ ನಂತರ, ಶಸ್ತ್ರಚಿಕಿತ್ಸೆ ಮಾಡಬೇಕು.
ಯಾವುದು ಹಿತವೆನಗೆ??
ಈ ಗರ್ಭನಿರೋಧಕಗಳು, ತಮ್ಮದೇ ಆದ ಕೆಲವು ನಿಯಮಗಳಿಗೆ ಒಳಪಟ್ಟಿರುತ್ತವೆ. ಆದ್ದರಿಂದ ಯಾವ ಮಹಿಳೆಗೆ, ಯಾವ ವಯಸ್ಸಿನಲ್ಲಿ, ಯಾವುದು ಸೂಕ್ತ?? ಇದು, ತಜ್ಞರ ಬಳಿ ಚರ್ಚಿಸಬೇಕು. ಪುರುಷನಾದರೆ, ಯಾವುದೇ ಆತಂಕವಿಲ್ಲದೆ, CONDOM ಬಳಕೆ ಮಾಡಬಹುದು. ಅದೇ, ಮಹಿಳೆಗೆ, ಅವಳ ದೇಹದ ಸ್ಥಿತಿ, ಬೇರೇ ಯಾವುದೇ ಆರೋಗ್ಯ ಸಮಸ್ಯೆಯಿದ್ದರೆ, ಅದು ಗರ್ಭನಿರೋಧಕಗಳ ಪರಿಣಾಮವನ್ನು ತಗ್ಗಿಸಬಹುದು. ಅಥವಾ, ಈ ಸಮಸ್ಯೆಯ ಜೊತೆ, ಗರ್ಭನಿರೋಧಕಗಳು ಬೇರೆ ಸವಾಲುಗಳನ್ನು ತರಬಹುದು. ಉದಾಹರಣೆಗೆ, ಮಹಿಳೆಯು ಮೂವತ್ತೈದು ವಯಸ್ಸನ್ನು ದಾಟಿದ್ದರೆ, ಧೂಮಪಾನ ವ್ಯಸನಿಯಾಗಿದ್ದರೆ, ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರೆ, ಹಾರ್ಮೋನ್ ಗುಳಿಗೆಗಳನ್ನು ದೀರ್ಘಕಾಲ ನೀಡಲಾಗದು. ಇದು ಆಕೆಗೆ, ರಕ್ತನಾಳಗಳಲ್ಲಿ ರಕ್ತ ಹೆಪ್ಪಗಟ್ಟುವಂತಹ, ಸಮಸ್ಯೆಯನ್ನು ತರುತ್ತದೆ. ಅಂತೆಯೇ, ನವವಿವಾಹಿತ ಮಹಿಳೆಗೆ, ಹರೆಯದ ಹುಡುಗಿಯರಿಗೆ, ಬಾಣಂತಿಯರಿಗೆ, ಬೇರೆ ಬೇರೆ ರೀತಿಯ ಗರ್ಭನಿರೋಧಕಗಳನ್ನು ಕೊಡಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು, MEDICAL ELIGIBILITY CRITERIA ಎಂದು, ನಾಲ್ಕು ವಿಧವಾಗಿ, ಹಲವು ಆರೋಗ್ಯ ಸಂಬಂಧೀ ನಿಯಮಗಳನ್ನು, ಈ ಗರ್ಭನಿರೋಧಕ ಗುಳಿಗೆಗಳ ಬಳಕೆಗೆ ನಿಗದಿ ಮಾಡಿದೆ. ಇವುಗಳ ಅನುಸಾರ ಗರ್ಭನಿರೋಧಕಗಳನ್ನು ವೈದ್ಯರು ನೀಡುತ್ತಾರೆ. ಇನ್ನು ಶಾಶ್ವತ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮುನ್ನ, ವೈದ್ಯರೊಂದಿಗೆ ಅವಶ್ಯ ಚರ್ಚಿಸಿ. ಒಮ್ಮೆ ಈ ಚಿಕಿತ್ಸೆಗೆ ಒಳಗಾದ ನಂತರ, ಮುಂದೆ ಮಕ್ಕಳಾಗಬೇಕೆಂದು ಬಯಸಿದರೆ, REVERSE ಶಸ್ತ್ರಚಿಕಿತ್ಸೆ ಕಷ್ಟ ಹಾಗು ಅಸಫಲವಾಗುವ ಸಾಧ್ಯತೆ ಅಧಿಕ. ಹಾಗಾಗಿ, ದಂಪತಿಗಳು ಸೂಕ್ತ ನಿರ್ಧಾರ ಮಾಡಬೇಕು.
ಸೆಪ್ಟೆಂಬರ್ ಇಪ್ಪತ್ತಾರನೆಯ ತಾರೀಕನ್ನು WORLD CONTRACEPTION DAY ಎಂದು ಆಚರಿಸುತ್ತಾರೆ. ಬಹಳಷ್ಟು ಮುಂದುವರೆಯುತ್ತಿರುವ ದೇಶಗಳಲ್ಲಿ, ಈ ಗರ್ಭನಿರೋಧಕಗಳ ಅವಶ್ಯಕತೆಯಿದೆ. ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವೋ, ಮಾರಕವೋ ತಿಳಿಯದು. ಆದರೆ, ಮಹಿಳೆಯ ಆರೋಗ್ಯಕ್ಕೆ ಇವು ಬಹಳ ಮುಖ್ಯ. ಮೇಲಿಂದಮೇಲೆ, ಬಸಿರು, ಬಾಣಂತನ, ಆಕೆ ದೇಹಾರೋಗ್ಯದ ಮೇಲೆ ಮಾತ್ರವಲ್ಲ, ಮಾನಸಿಕವಾಗಿಯೂ ದುಷ್ಪರಿಣಾಮ ಬೀರಬಹುದು. ಇವೆಲ್ಲದರ ದೃಷ್ಟಿಯಿಂದ, ಗರ್ಭನಿರೋಧಕಗಳು ವರದಾನವೆಂದೇ ಹೇಳಲಿಚ್ಛಿಸುವೆ. ನನಗೆ ಯಾವುದು ಹಿತ? ಇದನ್ನು ನಿಮ್ಮ ವೈದ್ಯರ ಬಳಿ ಚರ್ಚಿಸಿ, ಸೂಕ್ತ ಸಲಹೆ ಪಾಲಿಸಿ..
ಧನ್ಯವಾದಗಳು, ಡಾ. ಸೌಮ್ಯಾ ಹಿಮಗಿರೀಶ್.
9036709599
dwijodaya@gmail.com
www.denhym.com
Welcome to Dwija entrepreneurs Network!